Home
ಸುದ್ದಿಜಾಲ

ನೋಕಿಯಾ ವಾಯರ್‌ಲೆಸ್ ಇಯರ್‌ಫೋನ್‌ಗಳು ಈಗ ಕಡಿಮೆ ಬೆಲೆಗೆ ಲಭ್ಯ!

ಹೆಡ್‌ಫೋನ್‌ ಮತ್ತು ಇಯರ್‌ಫೋನ್‌ಗಳು ಮ್ಯೂಸಿಕ್‌ ಕೇಳಲು ಅತ್ಯುತ್ತಮ ಡಿವೈಸ್‌ಗಳಾಗಿವೆ. ಸದ್ಯ ಬ್ಲೂಟೂತ್‌ ಮೂಲಕ ಕಾರ್ಯನಿರ್ವಹಿಸುವ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳು ಮತ್ತು ಇಯರ್‌ಫೋನ್‌ಗಳು ಚಾಲ್ತಿಯಲ್ಲಿದ್ದು, ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿವೆ. ಈ ನಿಟ್ಟಿನಲ್ಲಿ ನೋಕಿಯಾ ಸಂಸ್ಥೆಯ ಆಕ್ಟಿವ್ ವಾಯರ್‌ಲೆಸ್‌ ಇಯರ್‌ಬಡ್ಸ್ ಮತ್ತು ಇಯರ್‌ಫೋನ್‌‌ ಖರೀದಿಸುವವರಿಗೆ ಸಂತಸದ ಸುದ್ದಿ ಇದೆ.

ನೋಕಿಯಾ ವಾಯರ್‌ಲೆಸ್ ಇಯರ್‌ಫೋನ್‌ಗಳು ಈಗ ಕಡಿಮೆ ಬೆಲೆಗೆ ಲಭ್ಯ!

ಹೌದು, ಜನಪ್ರಿಯ ನೋಕಿಯಾ ಸಂಸ್ಥೆಯ ನೋಕಿಯಾ BH-501, ನೋಕಿಯಾ BH-701 ಪ್ರೊ ಮತ್ತು ನೋಕಿಯಾ BH-705 ಆಕ್ಟಿವ್‌ ವಾಯರ್‌ಲೆಸ್‌ ಇಯರ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಇದೀಗ ಈ ಡಿವೈಸ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ ಆಗಿದೆ. ಇ ಕಾಮರ್ಸ್‌ ದೈತ್ಯ ಅಮೆಜಾನ್ ಇ ಕಾಮರ್ಸ್‌ ತಾಣದಲ್ಲಿ ಗ್ರಾಹಕರಿಗೆ ಡಿಸ್ಕೌಂಟ್‌ ಬೆಲೆಯಲ್ಲಿ ದೊರೆಯಲಿವೆ. ಹಾಗಾದರೇ ನೋಕಿಯಾ ಸಂಸ್ಥೆಯ ಈ ವಾಯರ್‌ಲೆಸ್‌ ಇಯರ್‌ಫೋನ್‌ಗಳ ಫೀಚರ್ಸ್‌ ಕುರಿತು ಮುಂದೆ ನೋಡೋಣ ಬನ್ನಿರಿ.

ನೋಕಿಯಾ ಇಯರ್‌ಫೋನ್‌ ವೇರಿಯಂಟ್ಸ್‌

ನೋಕಿಯಾ ಇಯರ್‌ಫೋನ್‌ ವೇರಿಯಂಟ್ಸ್‌

ಅಮೆಜಾನ್‌ನಲ್ಲಿಗ ನೋಕಿಯಾ ಸಂಸ್ಥೆಯು ತನ್ನ ಜನಪ್ರಿಯ ಇಯರ್‌ಫೋನ್‌ಗಳ ಬೆಲೆಯಲ್ಲಿ ಇಳಿಕೆ ಆಗಿದೆ. BH-501 ಆಕ್ಟಿವ್ ವಾಯರ್‌ಲೆಸ್‌ ಇಯರ್‌ಫೋನ್‌ 2,499ರೂ.ಗಳಿಗೆ ಲಭ್ಯವಾಗುತ್ತಿದ್ದು, ನೋಕಿಯಾ BH-701 ಪ್ರೊ ಇಯರ್‌ಫೋನ್‌ 5,499ರೂ.ಗಳಿಗೆ ದೊರೆಯುತ್ತಿದೆ. ಮತ್ತು ನೋಕಿಯಾ BH-705 ಇಯರ್‌ಫೋನ್‌ 7,359ರೂ.ಗಳಿಗೆ ಗ್ರಾಹಕರ ಕೈಸೇರಲಿದೆ.

ನೋಕಿಯಾ BH-501

ನೋಕಿಯಾ BH-501

ನೋಕಿಯಾದ ಈ ಇಯರ್‌ಫೋನ್‌ ನೆಕ್‌ಬ್ಯಾಂಡ್‌ ಮಾದರಿಯಲ್ಲಿದ್ದು, ಅತ್ಯುತ್ತಮ ಸೌಂಡ್‌ ಕ್ವಾಲಿಟಿಯನ್ನು ಹೊಂದಿದೆ. ಬ್ಲೂಟೂತ್‌ 4.1 ಕನೆಕ್ಟಿವಿಟಿ ಸೌಲಭ್ಯವನ್ನು ಪಡೆದಿದ್ದು, 10m ವ್ಯಾಪ್ತಿಯ ಕವರೇಜ್ ಹೊಂದಿದೆ. 9mm ಸೌಂಡ್‌ ಡ್ರೈವರ್ಸ್‌ಗಳೊಂದಿಗೆ ಬೆಸ್ಟ್‌ ಬ್ಯಾಟರಿ ಲೈಫ್‌ ಒಳಗೊಂಡಿದ್ದು, ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೇ ಡಿವೈಸ್‌ಗೆ ಸುಮಾರು 8ಗಂಟೆಗಳ ಕಾಲ ಬಾಳಿಕೆ ಒದಗಿಸಲಿದೆ. ಅಮೆಜಾನ್‌ನಲ್ಲಿ 2,499ರೂ.ಗಳಿಗೆ ಲಭ್ಯ.

ನೋಕಿಯಾ BH-705

ನೋಕಿಯಾ BH-705

ನೋಕಿಯಾ BH-705 ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ ಮಾದರಿಯಲ್ಲಿದ್ದು, ಬ್ಲೂಟೂತ್ v5.0 ಸಾಮರ್ಥ್ಯದ ಕನೆಕ್ಟಿವಿಟಿ ಸೌಲಭ್ಯವನ್ನು ಹೊಂದಿದೆ. ಇಯರ್‌ಬಡ್ಸ್‌ಗಳು IPx4 ಸಾಮರ್ಥ್ಯ ಪಡೆದಿದ್ದು, ಜೊತೆಗೆ ಸ್ವೆಟ್‌ ಮತ್ತು ಸ್ಲಾಶ್‌ ಪ್ರೂಫ್‌ ರಚನೆಯನ್ನು ಹೊಂದಿವೆ. ಯುಎಸ್‌ಬಿ ಟೈಪ್‌-ಸಿ ಚಾರ್ಜಿಂಗ್ ಜಾರ್ಜಿಂಗ್ ಕೇಸ್‌ ನೀಡಲಾಗಿದ್ದು, ಎಲ್‌ಇಡಿ ಚಾರ್ಜ್‌ ಇಂಡಿಕೇಟರ್ ಪಡೆದಿದೆ. ಅಮೆಜಾನ್‌ನಲ್ಲಿ 7,359ರೂ.ಗಳಿಗೆ ದೊರೆಯಲಿದೆ.

ನೋಕಿಯಾ BH-701

ನೋಕಿಯಾ BH-701

ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿರುವ ನೋಕಿಯಾ BH-701 ವಾಯರ್‌ಲೆಸ್‌ ಇಯರ್‌ಫೋನ್‌ ಅತ್ಯುತ್ತಮ ಬ್ಯಾಟರಿ ಪವರ್‌ ಪಡೆದಿದ್ದು, ಸಿಂಗಲ್‌ ಚಾರ್ಜ್‌ಗೆ ಸುಮಾರು 10ಗಂಟೆಗಳ ಬ್ಯಾಕ್‌ಅಪ್‌ ಒದಗಿಸಲಿದೆ. ಮ್ಯಾಕ್ನೆಟಿಕ್ ಕ್ಲಿಪ್ಪಿಂಗ್ ರಚನೆಯಿದ್ದು, ಬ್ಲೂಟೂತ್ 4.2 ಸಾಮರ್ಥ್ಯದ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದಿದೆ. ಡಿಜಿಟಲ್‌ ಸಿಗ್ನಲ್ ಪ್ರೊಸೆಸರ್ ಫೀಚರ್‌ ಜೊತೆಗೆ ಸ್ವೆಟ್‌ ಮತ್ತು ಸ್ಲಾಶ್‌ ಪ್ರೂಫ್‌ ರಚನೆಯನ್ನು ಹೊಂದಿದೆ. ಅಮೆಜಾನ್‌ನಲ್ಲಿ 5,499ರೂ.ಗಳಿಗೆ ದೊರೆಯಲಿದೆ.

Best Mobiles in India

English summary
amazon.in giving best price for Nokia BH-705, Nokia BH-701, Nokia BH-501 Wireless Earphones. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+