ನೋಕಿಯಾದಿಂದ ಅಗ್ಗದ ಬೆಲೆಯಲ್ಲಿ ನೋಕಿಯಾ C10, ನೋಕಿಯಾ C20 ಫೋನ್ ಲಾಂಚ್!

|

ಮೊಬೈಲ್‌ ಕ್ಷೇತ್ರದಲ್ಲಿ ದಿಗ್ಗಜನಾಗಿ ಮೆರೆದ ಜನಪ್ರಿಯ ನೋಕಿಯಾ ಸಂಸ್ಥೆಯು ಆಂಡ್ರಾಯ್ಡ್‌ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಇಂದಿಗೂ ತನ್ನ ಸ್ಥಾನ ಉಳಿಸಿಕೊಂಡಿದೆ. ನೋಕಿಯಾ ಸಂಸ್ಥೆಯು ಈಗ ಹೊಸದಾಗಿ ನೋಕಿಯಾ C10, ನೋಕಿಯಾ C20, ನೋಕಿಯಾ G10, ನೋಕಿಯಾ G20, ನೋಕಿಯಾ X10 ಮತ್ತು ನೋಕಿಯಾ X20 ಹೆಸರಿನ ಆರು ಸ್ಮಾರ್ಟ್‌ಫೋನ್‌ಗಳನ್ನು ನೋಕಿಯಾ HMD ಗ್ಲೋಬಲ್ ಅನಾವರಣ ಮಾಡಿದೆ.

ನೋಕಿಯಾ

ಹೌದು, ಜನಪ್ರಿಯ ನೋಕಿಯಾ ಸಂಸ್ಥೆಯು ನೂತನವಾಗಿ ಆರು ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ನೋಕಿಯಾ C ಸರಣಿಯಲ್ಲಿನ ನೋಕಿಯಾ C10 ಮತ್ತು ನೋಕಿಯಾ C20 ಫೋನ್‌ಗಳು ಎಂಟ್ರಿ ಲೆವೆಲ್ ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳು 3,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಸಿಂಗಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿವೆ.

ಲೆವೆಲ್

ನೋಕಿಯಾ C10 ಮತ್ತು ನೋಕಿಯಾ C20 ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ಎಂಟ್ರಿ ಲೆವೆಲ್ ಫೋನ್‌ಗಳಾಗಿವೆ. ಈ ಎರಡು ಫೋನ್‌ಗಳ ಡಿಸ್‌ಪ್ಲೇಯು 20:9 ಅನುಪಾತವನ್ನು ಪಡೆದಿದ್ದು, ಆಂಡ್ರಾಯ್ಡ್‌ 11 ಗೋ ಓಎಸ್‌ ಸಪೋರ್ಟ್‌ ಅನ್ನು ಒಳಗೊಂಡಿವೆ. ಹಾಗಾದರೇ ನೋಕಿಯಾ C10 ಮತ್ತು ನೋಕಿಯಾ C20 ಫೋನ್‌ಗಳು ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ನೋಕಿಯಾ C10 ಡಿಸ್‌ಪ್ಲೇ ಡಿಸೈನ್

ನೋಕಿಯಾ C10 ಡಿಸ್‌ಪ್ಲೇ ಡಿಸೈನ್

ನೋಕಿಯಾ C10 ಸ್ಮಾರ್ಟ್‌ಫೋನ್‌ 720x1,600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.51 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, 400 nits ಬ್ರೈಟ್ನೆಸ್‌ ಪಡೆದಿದೆ.

ನೋಕಿಯಾ C10 ಪ್ರೊಸೆಸರ್‌ ಕಾರ್ಯ

ನೋಕಿಯಾ C10 ಪ್ರೊಸೆಸರ್‌ ಕಾರ್ಯ

ನೋಕಿಯಾ C10 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ Unisoc SC7331e SoC ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಗೋ ಓಎಸ್‌ ಸಫೋರ್ಟ್‌ ಪಡೆದಿದೆ. ಹಾಗೆಯೇ 1GB RAM + 16GB ಮತ್ತು 2GB RAM + 16GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಬಹುದಾಗಿದೆ.

ನೋಕಿಯಾ C10 ಕ್ಯಾಮೆರಾ ರಚನೆ

ನೋಕಿಯಾ C10 ಕ್ಯಾಮೆರಾ ರಚನೆ

ನೋಕಿಯಾ C10 ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಅದು 5 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿಗಾಗಿಯೂ ಸಹ 5 ಮೆಗಾ ಪಿಕ್ಸಲ್ ಸೆನ್ಸಾರ್‌ ನೀಡಲಾಗಿದ್ದು, LED ಫ್ಲ್ಯಾಶ್‌ ಸೌಲಭ್ಯವನ್ನು ಒಳಗೊಂಡಿದೆ.

ನೋಕಿಯಾ C10 ಬ್ಯಾಟರಿ ಪವರ್

ನೋಕಿಯಾ C10 ಬ್ಯಾಟರಿ ಪವರ್

ನೋಕಿಯಾ C10 ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್‌ 3,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ. ಇದರೊಂದಿಗೆ 10W ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 802.11 ಬಿ / ಜಿ / ಎನ್, ಬ್ಲೂಟೂತ್ ವಿ 4.2, ಜಿಪಿಎಸ್ / ಎ-ಜಿಪಿಎಸ್, ಎಫ್‌ಎಂ ರೇಡಿಯೋ, ಮೈಕ್ರೋ-ಯುಎಸ್‌ಬಿ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ.

ನೋಕಿಯಾ C20 ಡಿಸ್‌ಪ್ಲೇ ಡಿಸೈನ್

ನೋಕಿಯಾ C20 ಡಿಸ್‌ಪ್ಲೇ ಡಿಸೈನ್

ನೋಕಿಯಾ C20 ಸ್ಮಾರ್ಟ್‌ಫೋನ್‌ 720x1,600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.51 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, 400 nits ಬ್ರೈಟ್ನೆಸ್‌ ಪಡೆದಿದೆ.

ನೋಕಿಯಾ C20 ಪ್ರೊಸೆಸರ್‌ ಕಾರ್ಯ

ನೋಕಿಯಾ C20 ಪ್ರೊಸೆಸರ್‌ ಕಾರ್ಯ

ನೋಕಿಯಾ C20 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ Unisoc SC7331e SoC ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಗೋ ಎಡಿಷನ್ ಓಎಸ್‌ ಸಫೋರ್ಟ್‌ ಪಡೆದಿದೆ. ಹಾಗೆಯೇ 1GB RAM + 16GB ಮತ್ತು 2GB RAM + 32GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಬಹುದಾಗಿದೆ.

ನೋಕಿಯಾ C20 ಕ್ಯಾಮೆರಾ ರಚನೆ

ನೋಕಿಯಾ C20 ಕ್ಯಾಮೆರಾ ರಚನೆ

ನೋಕಿಯಾ C20 ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಅದು 5 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿಗಾಗಿಯೂ ಸಹ 5 ಮೆಗಾ ಪಿಕ್ಸಲ್ ಸೆನ್ಸಾರ್‌ ನೀಡಲಾಗಿದ್ದು, LED ಫ್ಲ್ಯಾಶ್‌ ಸೌಲಭ್ಯವನ್ನು ಒಳಗೊಂಡಿದೆ. AI ಬ್ಯೂಟಿಫಿಕೇಶನ್ ಆಯ್ಕೆ ಇದೆ.

ನೋಕಿಯಾ C20 ಬ್ಯಾಟರಿ ಪವರ್

ನೋಕಿಯಾ C20 ಬ್ಯಾಟರಿ ಪವರ್

ನೋಕಿಯಾ C20 ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್‌ 3,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ. ಇದರೊಂದಿಗೆ 10W ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ಎಲ್ ಟಿಇ, ವೈ-ಫೈ 802.11 ಬಿ / ಜಿ / ಎನ್, ಬ್ಲೂಟೂತ್ ವಿ 4.2, ಜಿಪಿಎಸ್ / ಎ-ಜಿಪಿಎಸ್, ಎಫ್ಎಂ ರೇಡಿಯೋ, ಮೈಕ್ರೋ-ಯುಎಸ್ಬಿ, ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ.

ಬೆಲೆ ಎಷ್ಟು ಮತ್ತು ಲಭ್ಯತೆ

ಬೆಲೆ ಎಷ್ಟು ಮತ್ತು ಲಭ್ಯತೆ

ನೋಕಿಯಾ C10 ಮತ್ತು ನೋಕಿಯಾ C20 ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್ ಫೋನ್‌ಗಳಾಗಿವೆ. ನೋಕಿಯಾ C10 ಬೆಸ್ ವೇರಿಯಂಟ್ 1GB RAM + 16GB ದರವು EUR 79 (ಭಾರತದಲ್ಲಿ ಅಂದಾಜು 7,000ರೂ. ಎನ್ನಲಾಗಿದೆ). ಹಾಗೆಯೇ ನೋಕಿಯಾ C20 EUR 89 (ಭಾರತದಲ್ಲಿ ಅಂದಾಜು. 7,900ರೂ. ಎನ್ನಲಾಗಿದೆ).

Best Mobiles in India

English summary
Nokia C10 and Nokia C20 come as new entry-level phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X