ನೋಕಿಯಾ C12 ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್: ಕೇವಲ 5,699ರೂ.ಗೆ ಲಭ್ಯ!
ನೋಕಿಯಾ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಅದರಂತೆ ಕೆಲವು ದಿನಗಳ ಹಿಂದೆ ನೋಕಿಯಾ C22 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಾಗಿದ್ದು, ಇದರೊಂದಿಗೆ ನೋಕಿಯಾ C31,ನೋಕಿಯಾ 105 ಪ್ಲಸ್ ಫೋನ್‌ಗೂ ಭಾರೀ ಡಿಸ್ಕೌಂಟ್ ಘೋಷಣೆ ಮಾಡಲಾಗಿತ್ತು. ಇದೀಗ ಮತ್ತೊಂದು ಹೊಸ ಫೋನ್‌ಗೆ ಬಂಪರ್ ಆಫರ್ ಘೋಷಣೆ ಮಾಡಲಾಗಿದೆ.
ಹೌದು, ಇದೀಗ ನೋಕಿಯಾ C12(Nokia C12 Go Edition) ಸ್ಮಾರ್ಟ್‌ಫೋನ್‌ಗೆ ಭಾರಿ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಈ ಫೋನ್ ಯುನಿಸೊಕ್ SC9863A1 ಚಿಪ್‌ಸೆಟ್ ಬಲ ಹೊಂದಿದ್ದು, ಸಿಂಗಲ್ ರಿಯರ್ ಕ್ಯಾಮೆರಾ ಆಯ್ಕೆ ಜೊತೆಗೆ ಆಕರ್ಷಕ ವಿನ್ಯಾಸ ಪಡೆದುಕೊಂಡಿದೆ. ಹಾಗಿದ್ರೆ, ಬನ್ನಿ ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಈ ಫೋನ್‌ಗೆ ಎಲ್ಲಿ ಎಷ್ಟು ಈ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ.

ನೋಕಿಯಾ C12 ಡಿಸ್‌ಪ್ಲೇ ವಿವರ: ಈ ಫೋನ್ ಅನ್ನು ನೀವು ಆಫರ್ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್ ಬಗ್ಗೆ ತಿಳಿದುಕೊಳ್ಳಿ. ಅದರಂತೆ ಈ ಫೋನ್ 6.3 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 20:9 ರ ಆಕಾರ ಅನುಪಾತದೊಂದಿಗೆ 720 × 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ.
ನೋಕಿಯಾ C12 ಪ್ರೊಸೆಸರ್ ಮಾಹಿತಿ: ನೋಕಿಯಾ C12 ಸ್ಮಾರ್ಟ್‌ಫೋನ್ ಡ್ಯುಯಲ್ ಕಾರ್ಟೆಕ್ಸ್ A55 ವಿನ್ಯಾಸದೊಂದಿಗೆ ಆಕ್ಟಾ ಕೋರ್ ಆಕ್ಟಾ ಕೋರ್ ಯೂನಿಸೋಕ್ SC9863A1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಪವರ್ ವಿಆರ್ GE8322 ಜಿಪಿಯು ಬಲ ಪಡೆದುಕೊಂಡಿದೆ. ಸಿಂಗಲ್ ವೇರಿಯಂಟ್ ಆದ 2GB RAM ಹಾಗೂ 64GB ಇಂಟರ್ ನಲ್ಲಿ ಕಾಣಿಸಿಕೊಂಡಿದೆ. ಅದಾಗ್ಯೂ ಬಳಕೆದಾರರು ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 256 GB ವರೆಗೆ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

ನೋಕಿಯಾ C12 ಕ್ಯಾಮೆರಾ ಮಾಹಿತಿ: ಈ ಫೋನ್ ಸಿಂಗಲ್ ರಿಯರ್ ಹಾಗೂ ಸೆಲ್ಫಿ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್‌ಸೆಲ್ಫಿ ಕ್ಯಾಮೆರಾ ಆಯ್ಕೆ ಇದೆ. ಈ ಸೆನ್ಸರ್‌ಗಳು ಎಲ್ಇಡಿ ಫ್ಲ್ಯಾಶ್, ಡಿಜಿಟಲ್ ಜೂಮ್ ಮತ್ತು ಹೈ ಡೈನಾಮಿಕ್ ರೇಂಜ್ ಮೋಡ್ ಫೀಚರ್ಸ್ ಅನ್ನು ಪಡೆದುಕೊಂಡಿದ್ದು, ಈ ಮೂಲಕ ಉತ್ತಮ ಫೋಟೋ ಸೆರೆಹಿಡಿಯಬಹುದಾಗಿದೆ.
ನೋಕಿಯಾ C12 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಇದರ ಬ್ಯಾಟರಿ ವಿಚಾರಕ್ಕೆ ಬರುವುದಾದರೆ ಈ ಫೋನ್ 3000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 5W ಚಾರ್ಜಿಂಗ್‌ಗೆ ಇದು ಬೆಂಬಲ ನೀಡಲಿದೆ. ಇನ್ನುಳಿದಂತೆ IP52 ರೇಟಿಂಗ್ ಸ್ಲ್ಯಾಶ್ ರೆಸಿಸ್ಟೆನ್ಸ್ ಸೌಲಭ್ಯ ಪಡೆದುಕೊಂಡಿದೆ. ಜೊತೆಗೆ 160.6 ×74.3 × 8.75 ಎಂಎಂ ಸುತ್ತಳತೆ ಹೊಂದಿದ್ದು, ಡ್ಯುಯಲ್ ಸಿಮ್, 4G, ವೈಫೈ 802.11 b/g/n, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್ ಸೌಲಭ್ಯ ಈ ಫೋನ್‌ನಲ್ಲಿದೆ.

ನೋಕಿಯಾ C12 ಬ್ಯಾಟರಿ ಬೆಲೆ ಹಾಗೂ ಲಭ್ಯತೆ: ಈ ಫೋನ್ 7,499ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಆದರೆ ನೀವು 5,699ರೂ.ಗಳಿಗೆ ಈ ಫೋನ್ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ 24% ರಷ್ಟು ರಿಯಾಯಿತಿ ನೀಡಿದೆ. ಇದಿಷ್ಟು ಮಾತ್ರವಲ್ಲದೆ ನೀವು ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ವ್ಯವಹಾರಗಳನ್ನು ಸಹ ಇದರಲ್ಲಿ ನಡೆಸಬಹುದು, ಅದರಲ್ಲೂ ವಿನಿಮಯದಲ್ಲಿ 5,400ರೂ.ವರೆಗೆ ಉಳಿಸಬಹುದಾಗಿದೆ.


Click it and Unblock the Notifications








