Home
ಸುದ್ದಿಜಾಲ

ಅಗ್ಗದ ಬೆಲೆಯಲ್ಲಿ ನೋಕಿಯಾ C12 ಪ್ರೊ ಲಾಂಚ್‌; ಅಚ್ಚರಿಯ ಫೀಚರ್ಸ್‌!

ಜನಪ್ರಿಯ ನೋಕಿಯಾ ಮೊಬೈಲ್‌ ಸಂಸ್ಥೆಯು ಇತ್ತೀಚಿಗಷ್ಟೆ ನೋಕಿಯಾ C12 ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸಿತ್ತು. ಅದರ ಬೆನ್ನಲ್ಲೇ ಇದೀಗ ಹೊಸದಾಗಿ ನೋಕಿಯಾ C12 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಮೊಬೈಲ್‌ ಪ್ರಿಯರನ್ನು ಸೆಳೆದಿದೆ.

ಹೌದು, ನೋಕಿಯಾ ಸಂಸ್ಥೆಯು ಇದೀಗ ನೂತನವಾಗಿ ನೋಕಿಯಾ C12 ಪ್ರೊ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದು ಎಂಟ್ರಿ ಲೆವೆಲ್‌ ಮಾದರಿಯ ಸ್ಮಾರ್ಟ್‌ಫೋನ್‌ ಆಗಿದ್ದು, 2GB RAM + 64 GB ಮತ್ತು 3GB RAM + 64 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದ್ದು, 4000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.

ಅಗ್ಗದ ಬೆಲೆಯಲ್ಲಿ ನೋಕಿಯಾ C12 ಪ್ರೊ ಲಾಂಚ್‌; ಅಚ್ಚರಿಯ ಫೀಚರ್ಸ್‌!

ಹಾಗೆಯೇ ನೋಕಿಯಾ C12 ಪ್ರೊ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ Unisoc SC9863A1 ಪ್ರೊಸೆಸರ್‌ ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 12 ಗೋ ಓಎಸ್‌ ಸಪೋರ್ಟ್‌ ಪಡೆದಿದೆ. ಇನ್ನುಳಿದಂತೆ ನೋಕಿಯಾ C12 ಪ್ರೊ ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಹಾಗೂ ಇದರ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ನೋಕಿಯಾ C12 ಪ್ರೊ ಡಿಸ್‌ಪ್ಲೇ ರಚನೆ : ನೋಕಿಯಾ C12 ಸ್ಮಾರ್ಟ್‌ಫೋನ್ 6.3 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದ್ದು, 20:9 ರ ಆಕಾರ ಅನುಪಾತವನ್ನು ಇದು ಪಡೆದಿದೆ. ಹಾಗೆಯೇ ಈ ಫೋನ್‌ 720 × 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರುವ ಜೊತೆಗೆ ಈ ಡಿಸ್‌ಪ್ಲೇಯು 20:9 ಅನುಪಾತವನ್ನು ಪಡೆದಿದೆ. ಅಲ್ಲದೇ ಇದು 2D ಗ್ಲಾಸ್‌ ರಕ್ಷಣೆ ಪಡೆದಿದೆ.

ಅಗ್ಗದ ಬೆಲೆಯಲ್ಲಿ ನೋಕಿಯಾ C12 ಪ್ರೊ ಲಾಂಚ್‌; ಅಚ್ಚರಿಯ ಫೀಚರ್ಸ್‌!

ನೋಕಿಯಾ C12 ಪ್ರೊ ಪ್ರೊಸೆಸರ್‌ ಬಲ : ನೋಕಿಯಾ C12 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ Unisoc SC9863A1 ಪ್ರೊಸೆಸರ್‌ ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 12 ಗೋ ಓಎಸ್‌ ಸಪೋರ್ಟ್‌ ಪಡೆದಿದೆ. ಜೊತೆಗೆ 2 GB RAM + 64 GB ಮತ್ತು 3 GB RAM + 64 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ.

ನೋಕಿಯಾ C12 ಪ್ರೊ ಕ್ಯಾಮೆರಾ ಸೆನ್ಸಾರ್ : ನೋಕಿಯಾ C12 ಪ್ರೊ ಸ್ಮಾರ್ಟ್‌ಫೋನ್‌ ಸಿಂಗಲ್‌ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಪ್ರಾಥಮಿಕ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ. ಹಾಗೆಯೇ ಮುಂಭಾಗದಲ್ಲಿ 5 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. LED ಫ್ಲ್ಯಾಶ್‌ ಸೌಲಭ್ಯ ವನ್ನು ಪಡೆದುಕೊಂಡಿದೆ.

ಅಗ್ಗದ ಬೆಲೆಯಲ್ಲಿ ನೋಕಿಯಾ C12 ಪ್ರೊ ಲಾಂಚ್‌; ಅಚ್ಚರಿಯ ಫೀಚರ್ಸ್‌!

ನೋಕಿಯಾ C12 ಪ್ರೊ ಬ್ಯಾಟರಿ ಬ್ಯಾಕ್‌ಅಪ್‌ : ನೋಕಿಯಾ C12 ಪ್ರೊ ಸ್ಮಾರ್ಟ್‌ಫೋನ್‌ 4000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 10W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ IP52 ರೇಟಿಂಗ್ ಸ್ಲ್ಯಾಶ್‌ ರೆಸಿಸ್ಟೆನ್ಸ್‌ ಸೌಲಭ್ಯ ಹೊಂದಿದೆ.

ನೋಕಿಯಾ C12 ಪ್ರೊ ಬೆಲೆ ಮತ್ತು ಲಭ್ಯತೆ : ನೋಕಿಯಾ C12 ಪ್ರೊ ಸ್ಮಾರ್ಟ್‌ಫೋನ್‌ 2 GB RAM + 64 GB ಮತ್ತು 3 GB RAM + 64 GB ಎರಡು ವೇರಿಯಂಟ್‌ ಆಯ್ಕೆಗಳಲ್ಲಿ ಬಿಡುಗಡೆ ಆಗಿದೆ. 2 GB RAM + 64 GB ವೇರಿಯಂಟ್‌ ಬೆಲೆಯು 6,999ರೂ. ಗಳು ಆಗಿದ್ದು, 3 GB RAM + 64 GB ವೇರಿಯಂಟ್‌ ಬೆಲೆಯು 7,499ರೂ. ಗಳು ಆಗಿದೆ.

ಅಂದಹಾಗೆಯೇ ನೋಕಿಯಾ C12 ಪ್ರೊ ಫೋನ್‌ ಅಧಿಕೃತ ನೋಕಿಯಾ ವೆಬ್‌ಸೈಟ್‌, ಪ್ರಮುಖ ಇ ಕಾಮರ್ಸ್‌ ತಾಣಗಳು ಸೇರಿದಂತೆ ಪ್ರಮುಖ ರಿಟೇಲ್‌ ಸ್ಟೋರ್‌ಗಳಲ್ಲಿ ಲಭ್ಯವಿದೆ. ಇನ್ನು ಈ ಫೋನ್‌ ಲೈಟ್ ಮಿಂಟ್, ಚಾರ್ಕೋಲ್ ಮತ್ತು ಡಾರ್ಕ್ ಸಯಾನ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Nokia C12 Pro has 2GB of RAM and 64GB of storage. It is priced at Rs 6,999. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+