Home
ಸುದ್ದಿಜಾಲ

ಅಗ್ಗದ 'ನೋಕಿಯಾ C2' ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಲಾಂಚ್!

ಎವರ್‌ಗ್ರೀನ್ ಮೊಬೈಲ್ ಸಂಸ್ಥೆ ನೋಕಿಯಾ ತನ್ನ ಬಹುನಿರೀಕ್ಷಿತ ನೋಕಿಯಾ C2 ಸ್ಮಾರ್ಟ್‌ಫೋನ್‌ ಅನ್ನು ಇದೀಗ ಚೀನಾದಲ್ಲಿ ಬಿಡುಗಡೆ ಮಾಡಿದೆ. ನೋಕಿಯಾ C1 ಫೋನಿನ ಯಶಸ್ಸಿನ ಮುಂದುವರಿದ ಆವೃತ್ತಿ ಎಂದೇ ಹೇಳಲಾಗಿರುವ ನೋಕಿಯಾ C2 ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಮಾದರಿಯ ಆಂಡ್ರಾಯ್ಡ್‌ ಫೋನ್‌ ಆಗಿದ್ದು, ಗ್ರಾಹಕ ಸ್ನೇಹಿ ಪ್ರೈಸ್‌ಟ್ಯಾಗ್ ಹೊಂದಿದೆ. ಆಂಡ್ರಾಯ್ಡ್ 9 ಓಎಸ್‌ ಬೆಂಬಲ ಈ ಸ್ಮಾರ್ಟ್‌ಫೋನಿನಲ್ಲಿದೆ.

ನೋಕಿಯಾ C2

ಹೌದು, ನೋಕಿಯಾ ಸಂಸ್ಥೆಯು ಹೊಸದಾಗಿ ನೋಕಿಯಾ C2 ಎಂಟ್ರಿ ಲೆವೆಲ್ ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಎರಡು ಕ್ಯಾಮೆರಾ ರಚನೆಯನ್ನು ಪಡೆದಿದ್ದು, 2800mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, 5W ಚಾರ್ಜಿಂಗ್ ಬೆಂಬಲ ಇದೆ. ಗೂಗಲ್ ಅಸಿಸ್ಟಂಟ್ ಸಪೋರ್ಟ್‌ ಹೊಂದಿರುವ ಈ ಫೋನ್ ಗ್ಲ್ಯಾನ್‌ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದೆ. ನೋಕಿಯಾ C2 ಫೋನಿನ ಇನ್ನಿತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ನೋಕಿಯಾ C2 ಸ್ಮಾರ್ಟ್‌ಫೋನ್ 5.7 ಇಂಚಿನ ಹೆಚ್‌ಡಿ ಪ್ಲಸ್‌ IPS ಡಿಸ್‌ಪ್ಲೇ ಅನ್ನು ಹೊಂದಿದೆ. ಡಿಸ್‌ಪ್ಲೇ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಕಡಿಮೆ ಅಂಚಿನ ರಚನೆಯನ್ನು ಇದೆ. ಇನ್ನು ಈ ಫೋನಿನ ಡಿಸ್‌ಪ್ಲೇ ಸುತ್ತಳತೆಯು 154.8 x 75.59 x 8.85 mm ಆಗಿದೆ. ವಾಟರ್‌ಡ್ರಾಪ್ ನಾಚ್ ಸ್ಟೈಲ್ ವಿನ್ಯಾಸ ಹೊಂದಿದೆ.

ಪ್ರೊಸೆಸರ್ ಬಲ

ಪ್ರೊಸೆಸರ್ ಬಲ

ನೋಕಿಯಾ C2 ಸ್ಮಾರ್ಟ್‌ಫೋನ್ ಕ್ವಾಡ್‌ಕೋರ್ 1.4 GHz ಸಾಮರ್ಥ್ಯದ ಪ್ರೊಸೆಸರ್ ಇದರಲ್ಲಿದೆ. ಈ ಪ್ರೊಸೆಸರ್‌ಗೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಓಎಸ್‌ ಬೆಂಬಲ ಇದೆ. 1GB RAM ಮತ್ತು 16GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 64GB ವರೆಗೂ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ನೋಕಿಯಾ C2 ಸ್ಮಾರ್ಟ್‌ಫೋನ್ ಒಟ್ಟು ಎರಡು ಕ್ಯಾಮೆರಾ ರಚನೆಯನ್ನು ಪಡೆದಿದೆ. ಹಿಂಬದಿಯ ರಿಯರ್ ಕ್ಯಾಮೆರಾವು 5ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೂ ಮುಂಭಾಗದ ಸೆಲ್ಫಿ ಕ್ಯಾಮೆರಾವು ಸಹ 5ಎಂಪಿ ಸೆನ್ಸಾರ್‌ನಲ್ಲಿದೆ. ಕೆಲವು ಅಗತ್ಯ ಸೆಟ್ಟಿಂಗ್ ಆಯ್ಕೆಗಳು ಇವೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ನೋಕಿಯಾ C2 ಸ್ಮಾರ್ಟ್‌ಫೋನ್ 2800mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, 5W ಚಾರ್ಜಿಂಗ್ ಬೆಂಬಲ ಇದೆ. ಬ್ಯಾಟರಿಯು Removable-ಹೊರತೆಗೆಯಬಹುದಾಗ ಮಾದರಿಯಲ್ಲಿದೆ. ಇದರೊಂದಿಗೆ ಗೂಗಲ್ ಅಸಿಸ್ಟಂಟ್ ಕೀ, 5 ವಿ / 1 ಎ ಚಾರ್ಜರ್, ಎಫ್ ಎಂ ರೇಡಿಯೋ, ಬ್ಲೂಟೂತ್, ವೈಫೈ, 1 ಮೈಕ್ರೊಫೋನ್, ಇತರೆ ಆಕರ್ಷಕ ಫೀಚರ್ಸ್‌ಗಳು ಇವೆ.

ಬೆಲೆ ಲಭ್ಯತೆ

ಬೆಲೆ ಲಭ್ಯತೆ

ನೋಕಿಯಾ ಹೊಸದಾಗಿ ನೋಕಿಯಾ C2 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಆದರೆ ಬೆಲೆ ಮತ್ತು ಲಭ್ಯತೆ ಬಗ್ಗೆ ಇನ್ನು ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೆ ಇದೊಂದು ಅಗ್ಗದ ಬೆಲೆಯ ಎಂಟ್ರಿ ಲೆವೆಲ್ ಫೋನ್ ಆಗಿದೆ. ಭಾರತದಲ್ಲಿಯೂ ಲಾಂಚ್ ಆಗಲಿದೆ.

Best Mobiles in India

English summary
HMD Global has reportedly launched the Nokia C2 smartphone in China.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+