Home
ಸುದ್ದಿಜಾಲ

Nokia: ನೋಕಿಯಾದ ಈ ಫೋನ್‌ ಅಗ್ಗದ ಬೆಲೆಗೆ! 13% ರಿಯಾಯಿತಿ.. 64 GB ಸ್ಟೋರೇಜ್ ಆಯ್ಕೆ

ನೋಕಿಯಾದ ಫೋನ್‌ಗಳಿಗೆ (Nokia phone) ಅದರಲ್ಲೂ ಸ್ಮಾರ್ಟ್‌ಫೋನ್‌ಗಳಿಗೆ ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ಉಂಟಾಗಿದೆ. ಯಾಕೆಂದರೆ ಈ ಫೋನ್‌ಗಳು ಅಗ್ಗದ ದರದಲ್ಲಿ ಅತ್ಯುತ್ತಮವಾದ ಫೀಚರ್ಸ್‌ ಆಯ್ಕೆ ಪಡೆದಿದ್ದು, ದಿನನಿತ್ಯದ ಸಾಮಾನ್ಯ ಬಳಕೆಗೆ ಈ ಫೋನ್‌ಗಳು ಯೋಗ್ಯವಾಗಿವೆ. ಈ ನಡುವೆ ಬಜೆಟ್‌ ಬೆಲೆಯ ಫೋನ್‌ಗೆ ಮತ್ತೇ ರಿಯಾಯಿತಿ ನೀಡಲಾಗಿದೆ.

ಹೌದು, ನೋಕಿಯಾ C22 ಸ್ಮಾರ್ಟ್‌ಫೋನ್‌ (Nokia C22 smartphone) ಅನ್ನು ಈಗ ಇನ್ನೂ ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಸಾಮಾನ್ಯ ಬಳಕೆದಾರರಿಗೆ ಯೋಗ್ಯವಾದ ಫೋನ್ ಆಗಿದೆ. ಅಂದರೆ 64 GB ಸ್ಟೋರೇಜ್ ಆಯ್ಕೆ ಪಡೆದಿದ್ದು, 13 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಆಯ್ಕೆಯೊಂದಿಗೆ ಕಾಣಿಸಿಕೊಂಡಿದೆ. ಹಾಗಿದ್ರೆ, ಈ ಫೋನ್‌ಗೆ ಇರುವ ಆಫರ್ ವಿವರ ಹಾಗೂ ಫೀಚರ್ಸ್ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನೋಕಿಯಾದ ಈ ಫೋನ್‌ ಅಗ್ಗದ ಬೆಲೆಗೆ! 13% ರಿಯಾಯಿತಿ.. 64 GB ಸ್ಟೋರೇಜ್ ಆಯ್ಕೆ

ನೋಕಿಯಾ C22 ಆಫರ್ ವಿವರ: ಈ ಫೋನ್ ಆನ್‌ಲೈನ್‌ನಲ್ಲಿ 8,999 ರೂ.ಗಳ ಬೆಲೆಗೆ ಕಾಣಿಕೊಂಡಿದೆ. ಆದರೆ ನೀವು ಈಗ ಈ ಫೋನ್‌ ಅನ್ನು 7,799 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಇದಕ್ಕೆ 13% ರಷ್ಟು ರಿಯಾಯಿತಿ ನೀಡಲಾಗಿದೆ. ಅದಾಗ್ಯೂ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಬೇಕು ಎಂದರೆ ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಳ್ಳಬಹುದು.

ಈ ಫೋನ್ ಖರೀದಿ ಸಮಯದಲ್ಲಿ ನೀವು ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್ (Flipkart Axis Bank Card) ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಹಾಗೂ ವಿಶೇಷ ಬೆಲೆ ಹೆಚ್ಚುವರಿ 1200 ರೂ.ಗಳ ರಿಯಾಯಿತಿಯೊಂದಿಗೆ 275 ರೂ.ಗಳಿಂದ ಆರಂಭ ಆಗುವ ಇಎಮ್‌ಐ ಸೌಲಭ್ಯದ ಮೂಲಕ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ. ಈ ಮೂಲಕ ಅಗ್ಗದ ದರದಲ್ಲಿ ಅತ್ಯುತ್ತಮ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ನೋಕಿಯಾದ ಈ ಫೋನ್‌ ಅಗ್ಗದ ಬೆಲೆಗೆ! 13% ರಿಯಾಯಿತಿ.. 64 GB ಸ್ಟೋರೇಜ್ ಆಯ್ಕೆ

ನೋಕಿಯಾ C22 ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸಿ. ಅದರಂತೆ ಈ ಫೋನ್ 6.5-ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಆಕರ್ಷಕ ಮತ್ತು ಸೊಗಸಾದ ನೋಟವನ್ನು ನೀಡುತ್ತದೆ. ಹಾಗೆಯೇ ಈ ಡಿಸ್‌ಪ್ಲೇ 20:9 ರ ಆಕಾರ ಅನುಪಾತ ಮತ್ತು 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ನೊಂದಿಗೆ ಅತ್ಯುತ್ತಮ ಡಿಸ್‌ಪ್ಲೇ ಅನುಭವ ಸಿಗಲಿದೆ.

ನೋಕಿಯಾ C22 ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಫೋನ್ ಅಕ್ಟಾಕೋರ್‌ ಯೂನಿಸೋಕ್ SC9863A ಸಿಪಿಯು ಬಲ ಪಡೆದಿದ್ದು, ಇದು 1.6 GHz ಗಡಿಯಾರದ ವೇಗವನ್ನು ಹೊಂದಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳವರೆಗೆ ಬ್ಯಾಕಪ್‌ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ನೋಕಿಯಾದ ಈ ಫೋನ್‌ ಅಗ್ಗದ ಬೆಲೆಗೆ! 13% ರಿಯಾಯಿತಿ.. 64 GB ಸ್ಟೋರೇಜ್ ಆಯ್ಕೆ

ನೋಕಿಯಾ C22 ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ ಕ್ಲೋಸ್ ಅಪ್ ಫೋಟೋಗಳನ್ನು ತೆಗೆದುಕೊಳ್ಳಲು 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾ ಮತ್ತು ವಿಶಾಲವಾದ ಶಾಟ್‌ಗಳನ್ನು ತೆಗೆಯಲು 13 ಮೆಗಾಪಿಕ್ಸೆಲ್‌ಮುಖ್ಯ ಕ್ಯಾಮೆರಾದ ಆಯ್ಕೆ ನೀಡಲಾಗಿದೆ. ಈ ಕ್ಯಾಮರಾ ಹೆಚ್‌ಡಿಆರ್‌ ಫೀಚರ್ಸ್‌ ಮತ್ತು ಎಲ್ಇಡಿ ಫ್ಲ್ಯಾಶ್‌ ಲೈಟ್‌ ಆಯ್ಕೆ ಪಡೆದಿದೆ. ಉಳಿದಂತೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಈ ಸ್ಮಾರ್ಟ್‌ಫೋನ್‌ ಈ ಬೆಲೆಗೆ ತಕ್ಕ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ ಎಂದು ಈ ಮೂಲಕ ಹೇಳಬಹುದಾಗಿದೆ. ಅದರಲ್ಲೂ ಬ್ಯಾಟರಿ ವಿಚಾರಕ್ಕೆ ಬಂದರೆ ಈ ಫೋನ್‌ ಅತ್ಯುತ್ತಮ ಬ್ಯಾಕಪ್‌ ನೀಡಲಿದ್ದು, ಹಳ್ಳಿಗಾಡಿನ ಹಾಗೂ ವಿದ್ಯುತ್‌ ಸಮಸ್ಯೆ ಇರುವ ಪ್ರದೇಶಗಳಲ್ಲಿ ಈ ಫೋನ್‌ ಅನ್ನು ಉತ್ತಮವಾಗಿ ಬಳಕೆ ಮಾಡಬಹುದಾಗಿದೆ. ಅದರಲ್ಲೂ ನಿತ್ಯವೂ ಸಾಮಾನ್ಯ ಬಳಕೆಗೆ ಈ ಫೋನ್ ಇತರೆ ಫೋನ್‌ಗಳಿಗಿಂತ ಯೋಗ್ಯವಾಗಿದೆ.

Best Mobiles in India

English summary
Nokia C22 smartphone can now be bought at an even lower price. This smartphone have 64 GB storage option and 13 megapixel main camera option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+