7,999 ರೂ.ಗಳ ಬೆಲೆಯಲ್ಲಿ ನೋಕಿಯಾದ ಹೊಸ ಸ್ಮಾರ್ಟ್‌ಫೋನ್ ಲಾಂಚ್!
ನೋಕಿಯಾದ ಸ್ಮಾರ್ಟ್‌ಡಿವೈಸ್ ಗಳು ದೀರ್ಘ ಬಾಳಿಕೆ ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕಪಡೆದುಕೊಂಡಿವೆ. ಈ ನಡುವೆ HMD ಗ್ಲೋಬಲ್ ಭಾರತದಲ್ಲಿ ಅತ್ಯದ್ಭುತ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು, ಇದು ವಿಶಿಷ್ಟ ವಿನ್ಯಾಸ ಮತ್ತು ಉತ್ತಮ ಸಾಫ್ಟ್‌ವೇರ್ ಫೀಚರ್ಸ್‌ನೊಂದಿಗೆ ಪ್ಯಾಕ್ ಆಗಿದೆ. ಜೊತೆಗೆ ಯುನಿಸಾಕ್ SC9863A ಆಕ್ಟೋ ಕೋರ್ ಪ್ರೊಸೆಸರ್ ಬಲ ಪಡೆದುಕೊಂಡಿದೆ.
ಹೌದು, HMD ಗ್ಲೋಬಲ್ ಭಾರತದಲ್ಲಿ ನೋಕಿಯಾ C22 (Nokia C22) ಸ್ಮಾರ್ಟ್‌ಫೋನ್ ಅನಾವರಣ ಮಾಡಿದ್ದು, ಈ ಫೋನ್ ಅಗ್ಗದ ಬೆಲೆಯಲ್ಲಿ ಲಭ್ಯ ಆಗುತ್ತಿರುವ ಜೊತೆಗೆ ವಿಶೇಷ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಅದರಲ್ಲೂ ಸ್ಪ್ಲಾಶ್ ಮತ್ತು ಧೂಳಿನ ರಕ್ಷಣೆಗಾಗಿ IP52 ಪ್ರಮಾಣೀಕೃತವಾಗಿದೆ. ಹಾಗೆಯೇ 2GB/4GB RAM ನ ಎರಡು ವೇರಿಯಂಟ್‌ನಲ್ಲಿ ಲಭ್ಯ ಇರಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ನೋಕಿಯಾ C22 ಡಿಸ್‌ಪ್ಲೇ ವಿವರ: ಈ ಹೊಸ ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 720×1600 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ ಬಲಶಾಲಿ 2.5D ಡಿಸ್‌ಪ್ಲೇ ಇರುವುದರಿಂದ ಡಿಸ್‌ಪ್ಲೇ ಬಗ್ಗೆ ನೀವು ಚಿಂತೆಯನ್ನೇ ಮಾಡಬೇಕಿಲ್ಲ. ಹಾಗೆಯೇ ವಿವಿಧ ಸೌಲಭ್ಯ ಸಹ ಇದರಿಂದ ಲಭ್ಯ.
ನೋಕಿಯಾ C22 ಪ್ರೊಸೆಸರ್ ಸಾಮರ್ಥ್ಯ: ಈ ಫೋನ್ ಯುನಿಸಾಕ್ SC9863A ಆಕ್ಟೋ ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು,IMG8322 GPU ಅನ್ನು ಹೊಂದಿದೆ. ಈ ಮೂಲಕ ಉತ್ತಮ ಕಾರ್ಯಕ್ಷಮತೆಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನುಳಿದಂತೆ ನೋಕಿಯಾC22 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾಣಿಸಿಕೊಂಡಿದೆ. ಇದರ ಜೊತೆಗೆ 2GB/4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯ ಇದರಲ್ಲಿದೆ. ಅಷ್ಟೇ ಅಲ್ಲದೆ ಮೆಮೊರಿ ಕಾರ್ಡ್ ಬಳಸಲು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಆಯ್ಕೆ ಸಹ ನೀಡಲಾಗಿದೆ.

ನೋಕಿಯಾ C22 ಕ್ಯಾಮೆರಾ ರಚನೆ: ಈ ನೋಕಿಯಾ C22 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 13MP ಪ್ರಾಥಮಿಕ ಕ್ಯಾಮೆರಾ ಹಾಗೂ 2MP ಡೆಪ್ತ್ ಸೆನ್ಸಾರ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇನ್ನು ಎಲ್‌ಇಡಿ ಫ್ಲ್ಯಾಶ್ ನೊಂದಿಗೆ ಹಲವಾರು ಕ್ಯಾಮೆರಾ ಫೀಚರ್ಸ್ ಇದರಲ್ಲಿದೆ.
ನೋಕಿಯಾ C22 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: C22 ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಪದೇ ಪದೇ ಚಾರ್ಜ್ ಮಾಡುವ ಚಿಂತೆ ಇಲ್ಲ. ಇದರೊಂದಿಗೆ 10 ವ್ಯಾಟ್ಸ್ ಚಾರ್ಜಿಂಗ್ ಸೌಲಭ್ಯ ಸಹ ಇದೆ. ಇನ್ನು ಸ್ಪ್ಲಾಶ್ ಮತ್ತು ಧೂಳಿನ ರಕ್ಷಣೆಗಾಗಿ IP52 ರೇಟಿಂಗ್ ಹೊಂದಿದ್ದು, ಬಹಳ ವಿಶೇಷ ಎನಿಸಿದೆ. ಇದರೊಂದಿಗೆ ಫಿಂಗರ್ ಪ್ರಿಂಟ್ ಸೆನ್ಸಾರ್ ಸೇರಿದಂತೆ ಹಲವು ಅತ್ಯುತ್ತಮ ಫೀಚರ್‌ಗಳೊಂದಿಗೆ ಈ ಫೋನ್ ಅನ್ನು ಪರಿಚಯಿಸಲಾಗಿದೆ.

ನೋಕಿಯಾ C22 ಬೆಲೆ ಹಾಗೂ ಲಭ್ಯತೆ: 2GB RAM ಹೊಂದಿರುವ ನೋಕಿಯಾ C22 ಸ್ಮಾರ್ಟ್‌ಫೋನ್ ಬೆಲೆ 7,999ರೂ. ಆಗಿದ್ದು, 4GB RAM ರೂಪಾಂತರದ ಬೆಲೆ 8,499ರೂ.ಆಗಿದೆ. ಹೊಸ ಫೋನ್ ಪ್ರಸ್ತುತ ಆಫ್‌ಲೈನ್ ಸ್ಟೋರ್‌ಗಳು ಮತ್ತು ನೋಕಿಯಾದ ಅಧಿಕೃತ ಸೈಟ್‌ನಲ್ಲಿ ಲಭ್ಯ ಇದೆ. ಇದರೊಂದಿಗೆ ಚಾರ್ಕೋಲ್, ಪರ್ಪಲ್ ಮತ್ತು ಸ್ಯಾಂಡ್ ಬಣ್ಣಗಳಲ್ಲಿ ಈ ಫೋನ್ ಕಾಣಿಸಿಕೊಂಡಿದೆ. ಹಾಗೆಯೇ ಬೆಳಕೆದಾರರು ಜಿಯೋ ಮೂಲಕವೂ ಈ ಫೋನ್ ಖರೀದಿ ಮೇಲೆ ವಿಶೇಷ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








