ಅಗ್ಗದ ಬೆಲೆಯಲ್ಲಿ ನೋಕಿಯಾ C3 ಸ್ಮಾರ್ಟ್‌ಫೋನ್ ಲಾಂಚ್!
ಎವರ್‌ಗ್ರೀನ್ ಮೊಬೈಲ್ ಸಂಸ್ಥೆ ನೋಕಿಯಾ ಈಗಾಗಲೇ ಹಲವು ಎಂಟ್ರ ಲೆವೆಲ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಅದೇ ಸರಣಿಯಲ್ಲಿ ಇದೀಗ ನೋಕಿಯಾ C3 ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ನೋಕಿಯಾ C2 ಫೋನಿನ ಮುಂದುವರಿದ ಆವೃತ್ತಿ ಎಂದೇ ಹೇಳಲಾಗಿರುವ ನೋಕಿಯಾ C3 ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಮಾದರಿಯ ಆಂಡ್ರಾಯ್ಡ್ ಫೋನ್ ಆಗಿದ್ದು, ಅಗ್ಗದ ಪ್ರೈಸ್‌ಟ್ಯಾಗ್ ಪಡೆದಿದೆ.

ಹೌದು, ನೋಕಿಯಾ ಸಂಸ್ಥೆಯು ಹೊಸದಾಗಿ ನೋಕಿಯಾ C3 ಎಂಟ್ರಿ ಲೆವೆಲ್ ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಎರಡು ಕ್ಯಾಮೆರಾ ರಚನೆಯನ್ನು ಪಡೆದಿದ್ದು, 3,040mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಸೌಲಭ್ಯ ಪಡೆದಿದೆ. ಇನ್ನು ಈ ಫೋನ್ ಬ್ಲೂ ಮತ್ತು ಸ್ಯಾಂಡ್ ಗೋಲ್ಡ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ನೋಕಿಯಾ C3 ಫೋನಿನ ಇನ್ನಿತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ
ನೋಕಿಯಾ C3 ಸ್ಮಾರ್ಟ್‌ಫೋನ್ 720×1440 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥದೊಂದಿಗೆ 5.9 ಇಂಚಿನ ಹೆಚ್‌ಡಿ ಪ್ಲಸ್ IPS ಡಿಸ್‌ಪ್ಲೇ ಅನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 269 PPI ಆಗಿದೆ. ಡಿಸ್‌ಪ್ಲೇಯ ಅನುಪಾತವು 18:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ಅಡುವಿನ ಅಂತರ ಶೇ.75.2% ಆಗಿದೆ.

ಪ್ರೊಸೆಸರ್ ಬಲ
ನೋಕಿಯಾ C3 ಸ್ಮಾರ್ಟ್‌ಫೋನ್ 28nm ಬೇಸ್ಡ್ Unisoc SC9863A ಆಕ್ಟಾ-ಕೋರ್ SoC ಪ್ರೊಸೆಸರ್ ಇದರಲ್ಲಿದೆ. ಈ ಪ್ರೊಸೆಸರ್‌ಗೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಇದೆ. 3GB RAM + 32GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದ್ದು, ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು ವಿಸ್ತರಿಸುವ ಅವಕಾಶ ನೀಡಲಾಗಿದೆ.

ಕ್ಯಾಮೆರಾ ರಚನೆ
ನೋಕಿಯಾ C3 ಸ್ಮಾರ್ಟ್‌ಫೋನ್ ಹಿಂಬದಿಯ ಸಿಂಗಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಅದು 8ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೂ ಮುಂಭಾಗದ ಸೆಲ್ಫಿ ಕ್ಯಾಮೆರಾವು ಸಹ 5ಎಂಪಿ ಸೆನ್ಸಾರ್‌ನಲ್ಲಿದೆ. ಕೆಲವು ಅಗತ್ಯ ಸೆಟ್ಟಿಂಗ್ ಆಯ್ಕೆಗಳು ಇವೆ.

ಬ್ಯಾಟರಿ ಲೈಫ್
ನೋಕಿಯಾ C3 ಸ್ಮಾರ್ಟ್‌ಫೋನ್ 3,040mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, 10W ಚಾರ್ಜಿಂಗ್ ಬೆಂಬಲ ಇದೆ. ರಿಯರ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಪಡೆದಿದೆ. ಇದರೊಂದಿಗೆ ಗೂಗಲ್ ಅಸಿಸ್ಟಂಟ್ ಕೀ, 5 ವಿ / 1 ಎ ಚಾರ್ಜರ್, ಎಫ್ ಎಂ ರೇಡಿಯೋ, ಬ್ಲೂಟೂತ್, ವೈಫೈ, 1 ಮೈಕ್ರೊಫೋನ್, ಇತರೆ ಆಕರ್ಷಕ ಫೀಚರ್ಸ್‌ಗಳು ಇವೆ.

ಬೆಲೆ ಲಭ್ಯತೆ
ನೋಕಿಯಾ ಹೊಸದಾಗಿ ನೋಕಿಯಾ C3 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 3GB RAM + 32GB ವೇರಿಯಂಟ್ ಆಯ್ಕೆ ಹೊಂದಿದೆ. ಚೀನಾದಲ್ಲಿ ಈ ಫೋನ್ ಬೆಲೆಯು RMB 669 ಆಗಿದೆ. ಭಾರತದಲ್ಲಿ ಅಂದಾಜು 7,200ರೂ. ಎನ್ನಲಾಗಿದೆ.


Click it and Unblock the Notifications








