ಭಾರತದಲ್ಲಿ ಅಗ್ಗದ ಬೆಲೆಯ ನೋಕಿಯಾ C3 ಸ್ಮಾರ್ಟ್‌ಫೋನ್ ಬಿಡುಗಡೆ!
ಮೊಬೈಲ್ ಪ್ರಿಯರ್ ಎವರ್‌ಗ್ರೀನ್ ನೆಚ್ಚಿನ ಸಂಸ್ಥೆ ಎಂದೇ ಗುರುತಿಸಿಕೊಂಡಿರುವ ನೋಕಿಯಾ ಇತ್ತೀಚಿಗಷ್ಟೆ ಚೀನಾದಲ್ಲಿ ನೋಕಿಯಾ C3 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಈ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಅನ್ನು ದೇಶಿಯ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೋಕಿಯಾ C2 ಫೋನಿನ ಮುಂದುವರಿದ ಆವೃತ್ತಿಯಾಗಿರುವ ನೋಕಿಯಾ C3 ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್ ಪಡೆದಿದೆ.

ಹೌದು, ನೋಕಿಯಾ ಸಂಸ್ಥೆಯು ಇದೀಗ ನೋಕಿಯಾ C3 ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 3,040mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಸಿಂಗಲ್ ಕ್ಯಾಮೆರಾ ರಚನೆಯನ್ನು ಪಡೆದಿದೆ. ಹಾಗೆಯೇ 2GB + 16GB ಮತ್ತು 3GB + 32GB ಸ್ಟೋರೇಜ್ ಆಯ್ಕೆಯ ಎರಡು ವೇರಿಯಂಟ್ ಮಾದರಿಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆಯು 7,499ರೂ. ಆಗಿದ್ದು, ಬ್ಲೂ ಮತ್ತು ಸ್ಯಾಂಡ್ ಗೋಲ್ಡ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ನೋಕಿಯಾ C3 ಫೋನಿನ ಇನ್ನಿತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ವಿನ್ಯಾಸ
ನೋಕಿಯಾ C3 ಸ್ಮಾರ್ಟ್‌ಫೋನ್ 720×1440 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥದೊಂದಿಗೆ 5.9 ಇಂಚಿನ ಹೆಚ್‌ಡಿ ಪ್ಲಸ್ IPS ಡಿಸ್‌ಪ್ಲೇ ಅನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 269 PPI ಆಗಿದೆ. ಡಿಸ್‌ಪ್ಲೇಯ ಅನುಪಾತವು 18:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ಅಡುವಿನ ಅಂತರ ಶೇ.75.2% ಆಗಿದೆ.

ಪ್ರೊಸೆಸರ್ ಯಾವುದು
ನೋಕಿಯಾ C3 ಸ್ಮಾರ್ಟ್‌ಫೋನ್ 28nm ಬೇಸ್ಡ್ Unisoc SC9863A ಆಕ್ಟಾ-ಕೋರ್ SoC ಪ್ರೊಸೆಸರ್ ಇದರಲ್ಲಿದೆ. ಈ ಪ್ರೊಸೆಸರ್‌ಗೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಇದೆ. 3GB RAM + 32GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದ್ದು, ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು ವಿಸ್ತರಿಸುವ ಅವಕಾಶ ನೀಡಲಾಗಿದೆ.

ಸಿಂಗಲ್ ಕ್ಯಾಮೆರಾ
ನೋಕಿಯಾ C3 ಸ್ಮಾರ್ಟ್‌ಫೋನ್ ಹಿಂಬದಿಯ ಸಿಂಗಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಅದು 8ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೂ ಮುಂಭಾಗದ ಸೆಲ್ಫಿ ಕ್ಯಾಮೆರಾವು ಸಹ 5ಎಂಪಿ ಸೆನ್ಸಾರ್‌ನಲ್ಲಿದೆ. ಕೆಲವು ಅಗತ್ಯ ಸೆಟ್ಟಿಂಗ್ ಆಯ್ಕೆಗಳು ಇವೆ.

ಬ್ಯಾಟರಿ ಸಾಮರ್ಥ್ಯ
ನೋಕಿಯಾ C3 ಸ್ಮಾರ್ಟ್‌ಫೋನ್ 3,040mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, 10W ಚಾರ್ಜಿಂಗ್ ಬೆಂಬಲ ಇದೆ. ರಿಯರ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಪಡೆದಿದೆ. ಇದರೊಂದಿಗೆ ಗೂಗಲ್ ಅಸಿಸ್ಟಂಟ್ ಕೀ, 5 ವಿ / 1 ಎ ಚಾರ್ಜರ್, ಎಫ್ ಎಂ ರೇಡಿಯೋ, ಬ್ಲೂಟೂತ್, ವೈಫೈ, 1 ಮೈಕ್ರೊಫೋನ್, ಇತರೆ ಆಕರ್ಷಕ ಫೀಚರ್ಸ್‌ಗಳು ಇವೆ.

ಬೆಲೆ ಲಭ್ಯತೆ?
ನೋಕಿಯಾ ತನ್ನ ಹೊಸ ನೋಕಿಯಾ C3 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 2GB + 16GB ವೇರಿಯಂಟ್ ಬೆಲೆಯು 7,499ರೂ. ಆಗಿದೆ. ಹಾಗೂ 3GB + 32GB ವೇರಿಯಂಟ್ 8,999ರೂ. ಪ್ರೈಸ್‌ಟ್ಯಾಗ್ ಹೊಂದಿದೆ. ಇದೇ ಸೆಪ್ಟೆಂಬರ್ 10ರಂದು ನೋಕಿಯಾ ವೆಬ್‌ಸೈಟ್‌ನಲ್ಲಿ ಪ್ರೀ-ಆರ್ಡರ್ ಆರಂಭವಾಗಲಿದೆ.


Click it and Unblock the Notifications








