Home
ಸುದ್ದಿಜಾಲ

Nokia Smartphone: ನೋಕಿಯಾ C300, ನೋಕಿಯಾ C110 ಸ್ಮಾರ್ಟ್‌ಫೋನ್‌ ಲಾಂಚ್‌: ಬಜೆಟ್‌ ಬೆಲೆಯಲ್ಲಿ ಲಭ್ಯ

ನೋಕಿಯಾ ಇತ್ತೀಚೆಗೆ ಕಡಿಮೆ ಅಂತರದಲ್ಲಿಯೇ ವಿವಿಧ ಸುಧಾರಿತ ಫೀಚರ್ಸ್‌ಗಳೊಂದಿಗೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಇದೀಗ ಬಜೆಟ್‌ ಬೆಲೆ ಹೊಂದಿರುವ ಎರಡು ಫೋನ್‌ಗಳನ್ನು ಲಾಂಚ್‌ ಮಾಡಿದೆ. ಈ ಫೋನ್‌ಗಳು ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, ಆಂಡ್ರಾಯ್ಡ್‌ 12 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತವೆ.

ಹೌದು, ಬಹು ಬೇಡಿಕೆಯ ಬ್ರ್ಯಾಂಡ್‌ ಆಗಿರುವ ನೋಕಿಯಾ ಇದೀಗ ನೋಕಿಯಾ C300 ಮತ್ತು C110 (Nokia C300 and C110) ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಈ ಫೋನ್‌ಗಳಲ್ಲಿ ನೋಕಿಯಾ C110 ಆಕ್ಟಾ-ಕೋರ್ ಮೀಡಿಯಾ ಟೆಕ್‌ ಹಿಲಿಯೋ P22 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಿದರೆ, C300 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 ಚಿಪ್‌ಸೆಟ್‌ನ ಬಲ ಪಡೆದುಕೊಂಡಿದೆ. ಹಾಗಿದ್ರೆ, ಬನ್ನಿ ಈ ಸ್ಮಾರ್ಟ್‌ಫೋನ್‌ಗಳ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ತಿಳಿಯೋಣ.

ನೋಕಿಯಾ C300, ನೋಕಿಯಾ C110 ಸ್ಮಾರ್ಟ್‌ಫೋನ್‌ ಲಾಂಚ್‌: ಬಜೆಟ್‌ ಬೆಲೆಯಲ್ಲಿ ಲಭ್ಯ

ನೋಕಿಯಾ C110 ಡಿಸ್‌ಪ್ಲೇ ವಿವರ: ನೋಕಿಯಾ C110 ಸ್ಮಾರ್ಟ್‌ಫೋನ 6.3 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಮೂಲಕ 720x1560 ಪಿಕ್ಸೆಲ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ ಬಹಳ ಗಟ್ಟಿಯಾದ ಗಾಜಿನ ಲೇಯರ್‌ನಿಂದ ರಕ್ಷಿಸಲ್ಪಟ್ಟಿದೆ. ಇನ್ನುಳಿದಂತೆ 20:9 ಆಕಾರ ಅನುಪಾತ 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಈ ಫೋನ್‌ ಹೊಂದಿದೆ.

ನೋಕಿಯಾ C110 ಪ್ರೊಸೆಸರ್‌ ವಿವರ: ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್‌ ಹಿಲಿಯೋ P22 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 12 ರನ್‌ ಆಗಲಿದೆ. ಇನ್ನು 3GB RAM ಹಾಗೂ 32GB ಇಂಟರ್‌ ಸ್ಟೋರೇಜ್ ಆಯ್ಕೆ ಇದರಲ್ಲಿದ್ದು, ಬಳಕೆದಾರರು ಮೈಕ್ರೊ ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಳ್ಳುವ ಮೂಲಕ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

ನೋಕಿಯಾ C110 ಕ್ಯಾಮೆರಾ ಹಾಗೂ ಬ್ಯಾಟರಿ ಸಾಮರ್ಥ್ಯ: ಈ ಫೋನ್‌ನ ಕ್ಯಾಮೆರಾ ವಿಷಯಕ್ಕೆ ಬಂದರೆ ಎಲ್‌ಇಡಿ ಫ್ಲ್ಯಾಶ್‌‌ನೊಂದಿಗೆ 13 ಮೆಗಾಪಿಕ್ಸೆಲ್‌ ಸಿಂಗಲ್ ಲೆನ್ಸ್ ರಿಯರ್‌ ಕ್ಯಾಮೆರಾ ಹಾಗೂ ಸೆಲ್ಫಿಗಳಿಗಾಗಿ 5 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇನ್ನುಳಿದಂತೆ 3000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರುವ ಈ ಫೋನ್ 5W ಚಾರ್ಜಿಂಗ್ ಬೆಂಬಲ ಪಡೆದಿದೆ.

ನೋಕಿಯಾ C300, ನೋಕಿಯಾ C110 ಸ್ಮಾರ್ಟ್‌ಫೋನ್‌ ಲಾಂಚ್‌: ಬಜೆಟ್‌ ಬೆಲೆಯಲ್ಲಿ ಲಭ್ಯ

ನೋಕಿಯಾ C300 ಡಿಸ್‌ಪ್ಲೇ ವಿವರ: ಈ ಫೋನ್ 6.52 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, ಇದು 2.5D ಟಫ್ಡ್ ಗ್ಲಾಸ್‌ನ ಲೇಯರ್‌ನೊಂದಿಗೆ ರಕ್ಷಣೆ ಪಡೆದಿದೆ. ಇದರೊಂದಿಗೆ 720 x 1600 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ 20:9 ಆಕಾರ ಅನುಪಾತದೊಂದಿಗೆ 450 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಹೊಂದಿದೆ.

ನೋಕಿಯಾ C300 ಪ್ರೊಸೆಸರ್‌ ವಿವರ: ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಆಂಡ್ರಾಯ್ಡ್ 12 ರನ್ ಆಗಲಿದೆ. ಜೊತೆಗೆ 3GB RAM ಮತ್ತು 32GB ಇಂಟರ್‌ ಸ್ಟೋರೇಜ್ ಆಯ್ಕೆ ಇದ್ದು, ಈ ಫೋನ್‌ನಲ್ಲೂ ಸಹ ಹೆಚ್ಚಿನ ಸ್ಟೋರೇಜ್‌ ವಿಸ್ತರಣೆಗಾಗಿ ಮೈಕ್ರೊ ಎಸ್‌ಡಿ ಕಾರ್ಡ್ ಆಯ್ಕೆ ನೀಡಲಾಗಿದೆ.

ನೋಕಿಯಾ C300 ಕ್ಯಾಮೆರಾ ಹಾಗೂ ಬ್ಯಾಟರಿ ಸಾಮರ್ಥ್ಯ: ಈ ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 13 ಮೆಗಾಪಿಕ್ಸೆಲ್‌ ಮುಖ್ಯ ಸಂವೇದಕ, 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸರ್‌ ಮತ್ತು 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಶೂಟರ್ ಅನ್ನು ಒಳಗೊಂಡಿದೆ. ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇನ್ನುಳಿದಂತೆ ಧೂಳು ಮತ್ತು ಸ್ಪ್ಲಾಶ್-ನಿರೋಧಕ ವಿನ್ಯಾಸದೊಂದಿಗೆ 4000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 10W ಚಾರ್ಜಿಂಗ್ ಬೆಂಬಲ ಪಡೆದಿದೆ.

ನೋಕಿಯಾ C300, ನೋಕಿಯಾ C110 ಸ್ಮಾರ್ಟ್‌ಫೋನ್‌ ಲಾಂಚ್‌: ಬಜೆಟ್‌ ಬೆಲೆಯಲ್ಲಿ ಲಭ್ಯ

ನೋಕಿಯಾ C110 ಹಾಗೂ ನೋಕಿಯಾ C300 ಬೆಲೆ ಹಾಗೂ ಲಭ್ಯತೆ: ಈ ನೋಕಿಯಾ C110 ಫೋನ್ ಸುಮಾರು 8,150ರೂ.ಗಳ ಬೆಲೆ ಹೊಂದಿದ್ದು, ನೋಕಿಯಾ C300 ಸ್ಮಾರ್ಟ್‌ಫೋನ್ 11,440ರೂ.ಗಳ ಬೆಲೆ ಹೊಂದಿದೆ. ಜೊತೆಗೆ ಇವು ನೀಲಿ ಹಾಗೂ ಬೂದು ಬಣ್ಣದ ಆಯ್ಕೆಯಲ್ಲಿ ಲಭ್ಯ. ಇವುಗಳನ್ನು ಯುಎಸ್‌ನಲ್ಲಿ ಮಾತ್ರ ಲಾಂಚ್‌ ಮಾಡಲಾಗಿದ್ದು, ಭಾರತದಲ್ಲಿ ಯಾವಾಗ ಲಭ್ಯವಿರುತ್ತವೆ ಎಂಬುದನ್ನು ನಿರೀಕ್ಷಿಸಲಾಗಿದೆ.

Best Mobiles in India

English summary
Nokia the much sought brand, has now unveiled two smartphones namely Nokia C300 and C110. While the Nokia C110 is powered by an octa-core MediaTek Helio P22 chipset, the C300 smartphone is powered by an octa-core Qualcomm Snapdragon 662 chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+