Home
ಸುದ್ದಿಜಾಲ

Nokia: ನೋಕಿಯಾದ ಈ ಬಜೆಟ್‌ ಬೆಲೆಯ ಫೋನ್‌ ಇನ್ನೂ ಅಗ್ಗದ ಬೆಲೆಗೆ! 50MP ಕ್ಯಾಮೆರಾ.. 64GB ಸ್ಟೋರೇಜ್

ನೋಕಿಯಾ (Nokia) ಕಂಪೆನಿಗೂ ಭಾರತೀಯರಿಗೆ ಒಂದು ಅವಿನಾಭಾವ ಸಂಬಂಧ ಇದೆ. ಮೊದಲು ಕೀಪ್ಯಾಡ್ ಫೋನ್‌ಗಳ ಮೂಲಕ ಭಾರತೀಯರ ಮನೆಮಾತಾಗಿದ್ದ ಈ ಕಂಪೆನಿ ಇದೀಗ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುವ ಮೂಲಕ ಸಾಕಷ್ಟು ಸದ್ದು ಮಾಡುತ್ತಿದೆ. ಈ ನಡುವೆ ನೋಕಿಯಾದ ಫೋನ್‌ಗಳು ಆನ್‌ಲೈನ್‌ನಲ್ಲಿ ಆಫರ್ ಬೆಲೆಗೆ ಅಗ್ಗದ ದರದಲ್ಲಿ ಲಭ್ಯ ಆಗುತ್ತಿವೆ.

ಹೌದು, ನೋಕಿಯಾ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಬ್ಯಾಟರಿ ಬ್ಯಾಕಪ್‌ ಹಾಗೂ ದಿನನಿತ್ಯದ ಬಳಕೆಗೆ ಸೂಕ್ತ ಎನಿಸಿವೆ. ಅದರಂತೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ನೋಕಿಯಾ G11 ಪ್ಲಸ್ (Nokia G11 Plus) ಫೋನ್‌ಗೆ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 50MP ಮುಖ್ಯ ಕ್ಯಾಮೆರಾ ಹೊಂದಿದ್ದು, ದೀರ್ಘ ಬಾಳಿಕೆ ಬರುವ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಈ ಮೂಲಕ ಹಳ್ಳಿಹಾಡಿನ ಜನರಿಗೆ ಹಾಗೂ ಬಜೆಟ್‌ ಬೆಲೆಯಲ್ಲಿ ಫೋನ್‌ ಬೇಕು ಅನ್ನೋರಿಗೆ ಇದು ಉತ್ತಮ ಆಯ್ಕೆ ಆಗಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ನೋಡೋಣ ಬನ್ನಿ.

ನೋಕಿಯಾದ ಈ ಬಜೆಟ್‌ ಬೆಲೆಯ ಫೋನ್‌ ಇನ್ನೂ ಅಗ್ಗದ ಬೆಲೆಗೆ! 50MP ಕ್ಯಾಮೆರಾ..

ನೋಕಿಯಾ G11 ಪ್ಲಸ್ ಆಫರ್ ವಿವರ: ಈ ಸ್ಮಾರ್ಟ್‌ಫೋನ್ 13,999ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 7,935ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 43% ಡಿಸ್ಕೌಂಟ್‌ ನೀಡಲಾಗಿದೆ. ಇಷ್ಟೇ ಅಲ್ಲದೆ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಖರೀದಿ ಮಾಡಿ ಹಣ ಉಳಿತಾಯ ಮಾಡಬೇಕು ಅಂದರೆ ಬ್ಯಾಂಕ್‌ ಆಫರ್ ಬಳಕೆ ಮಾಡಬಹುದು.

ಈ ಫೋನ್‌ ಖರೀದಿ ವೇಳೆ ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ನಲ್ಲಿ 10% ರಿಯಾಯಿತಿ, ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಸಿಟಿ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಮತ್ತು 6 ತಿಂಗಳ ಇಎಮ್‌ಐ ವ್ಯವಹಾರದ ಮೇಲೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ 250ರೂ.ಗಳ ಆಫರ್ ಪಡೆದುಕೊಳ್ಳಬಹುದಾಗಿದೆ.

ನೋಕಿಯಾದ ಈ ಬಜೆಟ್‌ ಬೆಲೆಯ ಫೋನ್‌ ಇನ್ನೂ ಅಗ್ಗದ ಬೆಲೆಗೆ! 50MP ಕ್ಯಾಮೆರಾ..

ನೋಕಿಯಾ G11 ಪ್ಲಸ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ ಏನೋ ಅಗ್ಗದ ಬೆಲೆಗೆ ಲಭ್ಯ ಇದೆ. ಆದರೆ, ಇದರ ಫೀಚರ್ಸ್‌ ಈ ಬೆಲೆಗೆ ಸೂಕ್ತ ಇದೆಯೇ ಎಂದು ತಿಳಿಯುವುದು ಅಗತ್ಯವಾದ ವಿಷಯವಾಗಿದೆ. ಅದರಂತೆ ಈ ಫೋನ್ 6.52 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು 90Hz ರಿಫ್ರೆಶ್ ರೇಟ್‌ ಹಾಗೂ 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಹೊಂದಿದೆ. ಇದರೊಂದಿಗೆ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ 269 ppi ಸಾಂದ್ರತೆ ಪಡೆದಿದೆ.

ನೋಕಿಯಾ G11 ಪ್ಲಸ್ ಪ್ರೊಸೆಸರ್ ಮಾಹಿತಿ: ಇದರ ಪ್ರೊಸೆಸರ್ ವಿಚಾರಕ್ಕೆ ಬಂದರೆ ಈ ಫೋನ್ ಆಂಡ್ರಾಯ್ಡ್ ಓಎಸ್ 12 ನಲ್ಲಿ ರನ್‌ ಆಗಲಿದ್ದು, ಆಂಡ್ರಾಯ್ಡ್ 13 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಇದರೊಂದಿಗೆ ಯುನಿಸಾಕ್ T606 (12 nm) ಪ್ರೊಸೆಸರ್‌ ಬಲದೊಂದಿಗೆ ಮಾಲಿ-G57 MP1 ಜಿಪಿಯು ಶಕ್ತಿ ಇದ್ದು, ಈ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಫೋನ್‌ 64GB ಹಾಗೂ 4GB RAM ಸ್ಟೋರೇಜ್‌ ಆಯ್ಕೆಯಲ್ಲಿ ಕಂಡುಬಂದಿದ್ದು, ಹೆಚ್ಚಿನ ಸ್ಟೋರೇಜ್‌ಗೂ ಅವಕಾಶ ನೀಡಲಾಗಿದೆ.

ನೋಕಿಯಾ G11 ಪ್ಲಸ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ ಹೊಂದಿದ್ದು, 2 ಮೆಗಾಪಿಕ್ಸೆಲ್‌ನ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಸೆನ್ಸರ್‌ಗಳು ಎಲ್ಇಡಿ ಫ್ಲ್ಯಾಶ್ ಸೌಲಭ್ಯದೊಂದಿಗೆ 1080p@30fps ವಿಡಿಯೋ ವನ್ನು ಸೆರೆಹಿಡಿಯಲಿದೆ.

ನೋಕಿಯಾದ ಈ ಬಜೆಟ್‌ ಬೆಲೆಯ ಫೋನ್‌ ಇನ್ನೂ ಅಗ್ಗದ ಬೆಲೆಗೆ! 50MP ಕ್ಯಾಮೆರಾ..

ನೋಕಿಯಾ G11 ಪ್ಲಸ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 10W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಉಳಿದಂತೆ ಈ ಫೋನ್ 3.5 ಎಂಎಂ ಜ್ಯಾಕ್,ವೈ ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE, ಎಫ್‌ಎಮ್‌ ರೇಡಿಯೋ ಯುಎಸ್‌ಬಿ ಟೈಪ್ ಸಿ 2.0 ಸೇರಿದಂತೆ ಅನೇಕ ಕನೆಕ್ಟಿವಿಟಿ ಬೆಂಬಲ ಪಡೆದುಕೊಂಡಿದೆ.

Best Mobiles in India

English summary
Nokia smartphones have excellent battery backup and are suitable for daily use. Accordingly, the Nokia G11 Plus phone have get best offer on the leading e-commerce site. This smartphone has a 50MP main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+