Home
ಸುದ್ದಿಜಾಲ

Nokia ದಿಂದ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌: 3 ದಿನಗಳ ಬ್ಯಾಟರಿ ಬ್ಯಾಕಪ್‌, ಬೆಲೆ ಎಷ್ಟು?

ನೋಕಿಯಾ ಸ್ಮಾರ್ಟ್‌ಫೋನ್‌ಗಳು ಇಂದು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡುತ್ತಿವೆ. ಈ ನಡುವೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ಬೆಲೆಗೆ ಲಾಂಚ್‌ ಮಾಡಿಕೊಂಡು ಬರುತ್ತಿರುವ ನೋಕಿಯಾ ಇದೀಗ ಎರಡು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ.

ಹೌದು, ಹೆಚ್‌ಎಮ್‌ಡಿ ನೋಕಿಯಾ G310 ಮತ್ತು ನೋಕಿಯಾ C210 (Nokia G310 5G, Nokia C210) ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿದೆ ಮಾಡಿದೆ. C210 4G ಬೆಂಬಲದೊಂದಿಗೆ ಕಾಣಿಸಿಕೊಂಡಿದ್ದು, G310 ಫೋನ್‌ ಒಂದು ಪೂರ್ಣ ಚಾರ್ಜ್‌ನಲ್ಲಿ ಮೂರು ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ. ಜೊತೆಗೆ ನೋಕಿಯಾ ಈ ಫೋನ್ ರಿಪೇರಿಯನ್ನು ಸರಳಗೊಳಿಸಲು ಕ್ವಿಕ್‌ ಫಿಕ್ಸ್‌ ವಿನ್ಯಾಸವನ್ನು ಸಹ ನೀಡಿದೆ. ಹಾಗಿದ್ರೆ, ಈ ಫೋನ್‌ಗಳ ಫೀಚರ್ಸ್‌ ಹಾಗೂ ಬೆಲೆ ವಿವರ ಗಮನಿಸೋಣ ಬನ್ನಿ.

Nokia ದಿಂದ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌: 3 ದಿನಗಳ ಬ್ಯಾಟರಿ ಬ್ಯಾಕಪ್‌..

ನೋಕಿಯಾ G310 5G ಡಿಸ್‌ಪ್ಲೇ ವಿವರ : ನೋಕಿಯಾ G310 5G ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಈ ಫೋನ್ 720 x 112 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ, 90 Hz ರಿಫ್ರೆಶ್ ರೇಟ್, 560 ನಿಟ್ಸ್ ಬ್ರೈಟ್‌ನೆಸ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಮತ್ತು ಇತರ ಅನೇಕ ಡಿಸ್‌ಪ್ಲೇ ಫೀಚರ್ಸ್‌ ಅನ್ನು ಪಡೆದುಕೊಂಡಿದೆ.

ನೋಕಿಯಾ G310 5G ಪ್ರೊಸೆಸರ್‌ ಮಾಹಿತಿ: ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 480+ 8nm ಚಿಪ್‌ಸೆಟ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಅಡ್ರಿನೋ 619 GPU ನಿಂದ ಚಾಲಿತವಾಗಿದೆ. ಇದರೊಂದಿಗೆ ಈ ಹೊಸ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ ಅನ್ನು ರನ್‌ ಮಾಡಲಿದೆ. ಉಳಿದಂತೆ 4GB RAM ಮತ್ತು 128GB ಇಂಟರ್ ಸ್ಟೋರೇಜ್‌ ನೊಂದಿಗೆ ಮೈಕ್ರೋ SD ಕಾರ್ಡ್ ಆಯ್ಕೆ ಸಹ ಇದೆ.

ನೋಕಿಯಾ G310 5G ಕ್ಯಾಮೆರಾ ರಚನೆ: ಈ ಫೋನ್ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸರ್ ಮತ್ತು 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸರ್‌ ಹೊಂದಿದ್ದು, ಈ ಮೂಲಕ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾದೊಂದಿಗೆ ಈ ಫೋನ್ ಕಾಣಿಸಿಕೊಂಡಿದೆ.

ನೋಕಿಯಾ G310 5G ಬ್ಯಾಟರಿ ಹಾಗೂ ಇತರೆ: ಈ ಫೋನ್‌ನ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರುವ ಈ ಫೋನ್ 20W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಉಳಿದಂತೆ ಫೋನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, 5G, ಡ್ಯುಯಲ್ 4G,ವೈ-ಫೈ 802.11 ac, ಬ್ಲೂಟೂತ್‌ 5.1, ಜಿಪಿಎಸ್‌ ಸೇರಿದಂತೆ ಸಾಕಷ್ಟು ಸಂಪರ್ಕ ಬೆಂಬಲವನ್ನು ಪಡೆದಿದೆ.

ನೋಕಿಯಾ C210 ಫೀಚರ್ಸ್‌: ನೋಕಿಯಾ C210 ಫೋನ್ 6.3 ಇಂಚಿನ ವಿ ನೋಚ್ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯೊಂದಿಗೆ ಕಾಣಿಸಿಕೊಂಡಿದ್ದು, ಇದು 720 x 1560 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 20:9 ಆಕಾರ ಅನುಪಾತ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ವಿವಿಧ ಡಿಸ್‌ಪ್ಲೇ ಫೀಚರ್ಸ್‌ ತನ್ನದಾಗಿಸಿಕೊಂಡಿದೆ.

ನೋಕಿಯಾ C210 ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 662 11nm ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಅಡ್ರಿನೋ 610 GPU, ಆಂಡ್ರಾಯ್ಡ್‌ 11 ಆಪರೇಟಿಂಗ್ ಸಿಸ್ಟಮ್ ಮತ್ತು ಇತರ ಹಲವು ವಿಶೇಷ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇದರೊಂದಿಗೆ 3GB RAM ಮತ್ತು 32GB ಇಂಟರ್‌ ಸ್ಟೋರೇಜ್ ಆಯ್ಕೆ ಪಡೆದಿದ್ದು, ಈ ಫೋನ್‌ನಲ್ಲೂ ಸಹ ಮೈಕ್ರೋ SD ಕಾರ್ಡ್ ಸ್ಲಾಟ್ ಆಯ್ಕೆ ನೀಡಲಾಗಿದೆ.

ನೋಕಿಯಾ C210 ಕ್ಯಾಮೆರಾ ರಚನೆ: ಈ ಫೋನ್ 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ + 2 ಮೆಗಾಪಿಕ್ಸೆಲ್‌ ಸೆನ್ಸರ್ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮೂಲಕ ಉತ್ತಮ ಎನಿಸಿದೆ. ಈ ಸೆನ್ಸರ್‌ಗಳು ಎಲ್‌ಇಡಿ ಫ್ಲ್ಯಾಶ್ ಆಯ್ಕೆ ಜೊತೆಗೆ ಇತರೆ ಸುಧಾರಿತ ಫೀಚರ್ಸ್‌ ಆಯ್ಕೆಯನ್ನೂ ಸಹ ಪಡೆದುಕೊಂಡಿವೆ.

Nokia ದಿಂದ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌: 3 ದಿನಗಳ ಬ್ಯಾಟರಿ ಬ್ಯಾಕಪ್‌..

ನೋಕಿಯಾ C210 ಬ್ಯಾಟರಿ ಹಾಗೂ ಇತರೆ: ಈ ಫೋನ್‌ 10W ಚಾರ್ಜಿಂಗ್ ಬೆಂಬಲದೊಂದಿಗೆ 3000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಉಳಿದಂತೆ ಡ್ಯುಯಲ್ 4G,ವೈ-ಫೈ 802.11, ಬ್ಲೂಟೂತ್‌ 5.0, ಜಿಪಿಎಸ್‌, ಯುಎಸ್‌ಬಿ ಟೈಪ್‌-ಸಿ ಪೋರ್ಟ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯಗಳನ್ನು ಈ ಫೋನ್‌ ಹೊಂದಿದೆ. ಅದರಲ್ಲೂ ಪ್ರಮುಖವಾಗಿ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP52 ರೇಟಿಂಗ್‌ ಪಡೆದಿದೆ.

ನೋಕಿಯಾ ಫೋನ್‌ಗಳ ಬೆಲೆ ಹಾಗೂ ಲಭ್ಯತೆ: ಈ ಫೋನ್‌ಗಳಲ್ಲಿ ನೋಕಿಯಾ G310 5G ಸ್ಮಾರ್ಟ್‌ಫೋನ್‌ USD 186 (ಭಾರತೀಯ ಕರೆನ್ಸಿಯಲ್ಲಿ 15,490ರೂ.ಗಳು) ಬೆಲೆ ಹೊಂದಿದೆ. ಇದನ್ನು ಆಗಸ್ಟ್ 24 ರಿಂದ US ನಲ್ಲಿ ಖರೀದಿ ಮಾಡಬಹುದು. ಹಾಗೆಯೇ ನೋಕಿಯಾ C210 ಬೆಲೆ USD 109 (ಭಾರತೀಯ ಕರೆನ್ಸಿಯಲ್ಲಿ 9,080ರೂ.ಗಳು). ಈ ಫೋನ್‌ ಅನ್ನು ಸೆಪ್ಟೆಂಬರ್ 14 ರಿಂದ US ನಲ್ಲಿ ಮಾತ್ರ ಖರೀದಿ ಮಾಡಬಹುದು. ಈ ಫೋನ್‌ಗಳನ್ನು ಶೀಘ್ರದಲ್ಲೇ ಭಾರತದಲ್ಲೂ ಪರಿಚಯಿಸಲಾಗುತ್ತದೆ.

Best Mobiles in India

English summary
HMD has launched two smartphones Nokia G310 and Nokia C210. The C210 comes with 4G support, while the G310 phone offers three days of battery backup on a single full charge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+