Just In
Don't Miss
- News
ಅಮಿತ್ ಶಾ ಎಚ್ಚರಿಕೆಗೂ ಡೋಂಟ್ ಕೇರ್ ಎಂದ ಎಂ.ಪಿ.ರೇಣುಕಾಚಾರ್ಯ
- Finance
ಅಂತರರಾಷ್ಟ್ರೀಯ ವಹಿವಾಟಿಗೆ ಎಸ್ ಬಿಐ ಖಾತೆದಾರರು ಹೀಗೆ ಮಾಡಿ...
- Sports
ಐಪಿಎಲ್ 2021: ಫ್ರಾಂಚೈಸಿಗಳು ಹರಾಜಿಗೆ ಬಿಡುಗಡೆಗೊಳಿಸಬಹುದಾದ ಸ್ಟಾರ್ ಆಟಗಾರರು
- Movies
'ಜನನಾಂಗ ಮುಟ್ಟುವಂತೆ ಹೇಳಿದ್ದ': ನಿರ್ದೇಶಕನ ನಿಜ ಸ್ವರೂಪ ಬಿಚ್ಚಿಟ್ಟ್ ಶೆರ್ಲಿನ್ ಚೋಪ್ರಾ
- Automobiles
ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್ ಎಸ್ಯುವಿಯ ವಿತರಣೆ ಆರಂಭಿಸಿದ ಟೊಯೊಟಾ
- Lifestyle
ಗುರು ಗೋಬಿಂದ್ ಸಿಂಗ್ ಜಯಂತಿ: ಸಿಖ್ಖರ 10ನೇ ಗುರುವಿನ ಆಶ್ಚರ್ಯಕರ ಸಂಗತಿಗಳು
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೆ ಬರಲಿದೆ 'ನೋಕಿಯಾ ಎಕ್ಸ್‌ಪ್ರೆಸ್ ಮ್ಯೂಸಿಕ್' ಮೊಬೈಲ್!
ಮೊಬೈಲ್ ವಲಯದಲ್ಲಿ ಇಂದಿಗೂ ಎವರ್‌ಗ್ರೀನ್ ಸ್ಥಾನ ಪಡೆದಿರುವ ನೋಕಿಯಾ ಕಂಪನಿ, ಈಗಾಗಲೇ ಆಂಡ್ರಾಯ್ಡ್ ಫೋನ್‌ಗಳ ಮೂಲಕ ಮಾರುಕಟ್ಟೆಗೆ ರೀ ಎಂಟ್ರಿ ಕೊಟ್ಟಿದೆ. ಆದ್ರೆ ನೋಕಿಯಾ ಇದೀಗ ಒಂದು ಕಾಲದಲ್ಲಿ ಸ್ಮಾರ್ಟ್‌ಫೋನ್ ಪ್ರಿಯರನ್ನು ಸೆಳೆದಿದ್ದ 'ನೋಕಿಯಾ ಎಕ್ಸ್‌ಪ್ರೆಸ್ ಮ್ಯೂಸಿಕ್ ಫೋನ್' ಅನ್ನು ಮತ್ತೆ ಬಿಡುಗಡೆ ಮಾಡುವ ಸೂಚನೆಯನ್ನು ಹೊರಹಾಕಿದೆ. ಗ್ರಾಹಕರನ್ನು ಕುತೂಹಲ ಹೆಚ್ಚಾಗಿದೆ.

ಹೌದು, ನೋಕಿಯಾ ಸಂಸ್ಥೆಯು ತನ್ನ ಎಕ್ಸ್‌ಪ್ರೆಸ್ ಮ್ಯೂಸಿಕ್ ಫೋನ್ ಅನ್ನು ಈಗ ಮತ್ತೆ ಹೊಸ ಆವೃತ್ತಿಯಲ್ಲಿ (TA-1212) ಲಾಂಚ್ ಮಾಡಲು ಸಕಲ ತಯಾರಿ ನಡೆಸಿದೆ. ಕ್ಲಾಸಿಕ್ ಮಾದರಿಯ ಈ ಫೋನ್ ಅನ್ನು ಮತ್ತೆ ಪರಿಚಯಿಸುವ ಬಗ್ಗೆ TENAA ತಾಣದಲ್ಲಿ ಮಾಹಿತಿ ನೀಡಲಾಗಿದೆ. ಬ್ಲ್ಯಾಕ್ ಮತ್ತು ರೆಡ್ ಬಣ್ಣಗಳ ಸಮ್ಮಿಶ್ರದಲ್ಲಿದ ನೋಕಿಯಾ ಎಕ್ಸ್‌ಪ್ರೆಸ್ ಫೋನ್ ಮ್ಯೂಸಿಕ್ ಪ್ಲೇಗೆ ಅತ್ಯುತ್ತಮ ಪ್ಲಾಟ್‌ಫಾರ್ಮ್ ಒದಗಿಸಿತ್ತು. ಮೊಬೈಲ್ ಬಳಕೆದಾರರಲ್ಲಿ ಭಾರಿ ಕ್ರೇಜ್ ಹುಟ್ಟುಹಾಕಿದ್ದ ಎಕ್ಸ್‌ಪ್ರೆಸ್ ಮ್ಯೂಸಿಕ್ ಫೋನ್ ಈ ಬಾರಿಯೂ ಮತ್ತೆ ಅಬ್ಬರಿಸುವ ಲಕ್ಷಣಗಳು ಇವೆ.

ಸಖತ್ ಹವಾ ಕ್ರಿಯೆಟ್ ಮಾಡಿದ್ದ ನೋಕಿಯಾ 5130 ಮಾಡೆಲ್ ಫೋನ್ ಡಿಸ್‌ಪ್ಲೇ ಪಕ್ಕದಲ್ಲಿಯೇ (ಸೈಡ್ ಮೌಂಟೆಡ್)ಆಡಿಯೊ ಪ್ಲೇ, ಫಾರ್ವರ್ಡ್ ಬಟನ್‌ಗಳ (ಮ್ಯೂಸಿಕ್ ಕಂಟ್ರೋಲ್) ರಚನೆಯನ್ನು ಹೊಂದಿತ್ತು. ಕೀ ಪ್ಯಾಡ್ ಮಾದರಿಯ ಬೇಸಿಕ್ ಹ್ಯಾಂಡ್‌ಸೆಟ್ ಆಗಿತ್ತು. ಆದರೆ ಹೊಸ ಆವೃತ್ತಿಯಲ್ಲಿ ಬಿಡುಗಡೆ ಆಗಲಿರುವ ನೋಕಿಯಾ TA-1212 ಮಾಡೆಲ್ (ಹೆಸರು ಅಧಿಕೃತವಾಗಿಲ್ಲ) ಸೈಡ್ ಮೌಂಟ್ ಮ್ಯೂಸಿಕ್ ಕಂಟ್ರೋಲ್ ಬಟನ್ ಹೊಂದಿರುವುದಿಲ್ಲ ಎಂದು ಹೇಳಲಾಗಿದೆ.

ಬರಲಿರುವ ಹೊಸ ಫೋನ್ ನೋಕಿಯಾ 110 ಮಾದರಿಯಲ್ಲಿರುವಂತೆ ಇರಲಿದೆ ಆದರೆ KaiOS ಓಎಸ್ ಇರುವುದಿಲ್ಲ. ಸಿಂಗಲ್ ಕೋರ್ 0.36GHz ಪ್ರೊಸೆಸರ್ ಜೊತೆಗೆ ಉತ್ತಮ RAM ಹಾಗೂ 32GB ಆಂತರಿಕ ಸ್ಟೋರೇಜ್ ಸ್ಥಳಾವಕಾಶ ಇರುವ ಸಾಧ್ಯತೆಗಳಿವೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ಹೆಚ್ಚಿಸಿಕೊಳ್ಳಲು ಅವಕಾಶ ಸಹ ಇರಲಿದೆ. ಎಂಪಿ 3 ಸೌಲಭ್ಯ ಸೇರಿದಂತೆ ಇತರೆ ಮಲ್ಟೀಮೀಡಿಯಾ ಆಯ್ಕೆಗಳನ್ನು ಒಳಗೊಂಡಿರಲಿದೆ.

ಇನ್ನು ಈ ಫೋನ್ ಡಿಸ್‌ಪ್ಲೇಯು 2.4 ಆಗಿರಲಿದ್ದು, ಡಿಸ್‌ಪ್ಲೇಯು 240x320px ಪಿಕ್ಸಲ್ ರೆಸಲ್ಯೂಶನ್ ಪಡೆದಿರಲಿದೆ. ಹಾಗೆಯೇ 1,200mAh ಸಾಮರ್ಥ್ಯ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿರಲಿದೆ. ಫೋನ್ ಹಿಂಬದಿಯಲ್ಲಿ 0.3ಎಂಪಿಯ ಸಿಂಗಲ್ ಕ್ಯಾಮೆರಾ ಇರಲಿದ್ದು, ವಿಡಿಯೊ ರೆಕಾರ್ಡಿಂಗ್ ಸಪೋರ್ಟ್ ಇಲ್ಲ. ಎಲ್‌ಇಡಿ ಫ್ಲ್ಯಾಶ್ ಲೈಟ್ ಸೌಲಭ್ಯ ಇರಲಿದೆ. ಈ ಫೋನ್ 13.1mm ದಪ್ಪವಾಗಿರಲಿದ್ದು, ಜೊತೆಗೆ 88ಗ್ರಾಂ ತೂಕವನ್ನು ಪಡೆದಿರಲಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190