ಭಾರತದಲ್ಲಿ ನೋಕಿಯಾ ಸಂಸ್ಥೆಯಿಂದ ಎರಡು ಅಗ್ಗದ ಫೋನ್‌ಗಳು ಲಾಂಚ್!

|

ಮೊಬೈಲ್‌ ಜಗತ್ತಿನ ಎವರ್‌ಗ್ರೀನ್‌ ಬ್ರಾಂಡ್‌ ನೋಕಿಯಾ ಸಂಸ್ಥೆಯು ಆಂಡ್ರಾಯ್ಡ್‌ ಆವೃತ್ತಿಯಲ್ಲಿ ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದರೊಂದಿಗೆ ಕೆಲವು ಫೀಚರ್‌ ಫೋನ್‌ಗಳನ್ನು ಸಹ ಪರಿಚಯಿಸಿದೆ. ನೋಕಿಯಾ ಇದೀಗ ಭಾರತದಲ್ಲಿ ಎರಡು ಹೊಸ ಫೀಚರ್‌ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳು ಕ್ರಮವಾಗಿ 'ನೋಕಿಯಾ 105' ಮತ್ತು 'ನೋಕಿಯಾ 105 ಪ್ಲಸ್‌' ಆಗಿವೆ.

ಭಾರತದಲ್ಲಿ ನೋಕಿಯಾ ಸಂಸ್ಥೆಯಿಂದ ಎರಡು ಅಗ್ಗದ ಫೋನ್‌ಗಳು ಲಾಂಚ್!

ಹೌದು, ನೋಕಿಯಾ ಕಂಪೆನಿ ಭಾರತದಲ್ಲಿ 'ನೋಕಿಯಾ 105' ಮತ್ತು 'ನೋಕಿಯಾ 105 ಪ್ಲಸ್‌' ಹೆಸರಿನ ಎರಡು ಫೀಚರ್‌ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಫೀಚರ್‌ ಫೋನ್‌ಗಳಾಗಿದ್ದರು, ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿವೆ. ನೋಕಿಯಾ 105 ಫೋನ್ 800mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಅದೇ ರೀತಿ ನೋಕಿಯಾ 105 ಪ್ಲಸ್‌ ಫೋನ್‌ 1,000 mAh ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ 'ನೋಕಿಯಾ 105' ಮತ್ತು 'ನೋಕಿಯಾ 105 ಪ್ಲಸ್‌' ಫೋನ್‌ಗಳ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನೋಕಿಯಾ 105 ಫೋನ್ 1.77 ಇಂಚಿನ QQVGA ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನ್ 4MB RAM ಮತ್ತು 4MB ಸ್ಟೋರೇಜ್‌ ಆಯ್ಕೆ ಅನ್ನು ಪಡೆದಿದೆ. ಹಾಗೆಯೇ 32 GB ವರೆಗಿನ ಮೆಮೊರಿ ಕಾರ್ಡ್ ಅನ್ನು ಬಳಸಿಕೊಂಡು ಈ ಸ್ಟೋರೇಜ್‌ ಅನ್ನು ಸ್ಥಳವನ್ನು ಮತ್ತಷ್ಟು ವಿಸ್ತರಿಸಬಹುದು. ಈ ಫೋನ್ S30+ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಹಾಗೆಯೇ 800 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದರೊಂದಿಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 3.5 mm ಜ್ಯಾಕ್, ಮೈಕ್ರೋ USB ಮತ್ತು 2G ಸಂಪರ್ಕವನ್ನು ಹೊಂದಿದೆ. ಹಾಗೆಯೇ ಹೆಚ್ಚುವರಿ ಫೀಚರ್ಸ್‌ಗಳು ಅಂತರ್ನಿರ್ಮಿತ ಟಾರ್ಚ್ ಮತ್ತು ಕ್ಲಾಸಿಕ್ ಆಟಗಳಿಗೆ ಬೆಂಬಲವನ್ನು ಒಳಗೊಂಡಿವೆ. ಈ ಫೋನ್ ಇದು ಚಾರ್ಕೋಲ್ ಮತ್ತು ಬ್ಲೂ ಬಣ್ಣದ ರೂಪಾಂತರಗಳಲ್ಲಿ ಲಭ್ಯವಿದೆ. ಈ ಫೋನ್ ಬೆಲೆ 1,299ರೂ. ಆಗಿದೆ.

ಭಾರತದಲ್ಲಿ ನೋಕಿಯಾ ಸಂಸ್ಥೆಯಿಂದ ಎರಡು ಅಗ್ಗದ ಫೋನ್‌ಗಳು ಲಾಂಚ್!

ನೋಕಿಯಾ 105 ಫೋನ್ 1.77 ಇಂಚಿನ QQVGA ಡಿಸ್‌ಪ್ಲೇ ರಚನೆಯನ್ನು ಹೊಂದಿದೆ. ಹಾಗೆಯೇ ಆಡಿಯೋ ಕರೆ ರೆಕಾರ್ಡಿಂಗ್ ಫೀಚರ್ಸ್‌ ಹೊಂದಿದೆ. ಹಾಗೆಯೇ ಈ ಫೋನ್ ಎಂಪಿ3 ಪ್ಲೇಯರ್‌ ಸೌಲಭ್ಯ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ 1,000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಈ ಫೋನ್ 18 ದಿನಗಳ ಸ್ಟ್ಯಾಂಡ್‌ ಬೈ ಸಮಯವನ್ನು ಮತ್ತು 12 ಗಂಟೆಗಳ ಟಾಕ್‌ಟೈಮ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಚಾರ್ಕೋಲ್ ಮತ್ತು ರೆಡ್ ಬಣ್ಣದ ರೂಪಾಂತರಗಳಲ್ಲಿ ಬರುತ್ತದೆ. ಈ ಫೋನ್ ಬೆಲೆಯು 1,399ರೂ. ಆಗಿದೆ.

ನೋಕಿಯಾ G21 ಸ್ಮಾರ್ಟ್‌ಫೋನ್‌ ಫೀಚರ್ಸ್‌
ಹಾಗೆಯೇ ನೋಕಿಯಾ ಸಂಸ್ಥೆಯು ಫೀಚರ್‌ ಫೋನ್‌ಗಳೊಂದಿಗೆ ನೋಕಿಯಾ G21 ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದೆ. ಈ ಫೋನ್ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಆಕ್ಟಾ ಕೋರ್ ಯುನಿಸೊಕ್ T606 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಾಗೆಯೇ ನೋಕಿಯಾ G21 ಸ್ಮಾರ್ಟ್‌ಫೋನ್‌ 5,050 mAh ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

Best Mobiles in India

English summary
Nokia Launched Nokia 105, Nokia 105 Plus in India: Price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X