ನೋಕಿಯಾ ಕಥೆ ಮುಗಿದಿಲ್ಲ!..ಮೊಬೈಲ್ ಪ್ರಿಯರಿಗೆ ಈ ವರ್ಷ ಗುಡ್‌ನ್ಯೂಸ್ ಇದೆ!
HMD ಗ್ಲೋಬಲ್ ಇತ್ತೀಚೆಗೆ ನೋಕಿಯಾದ ಸೋಶಿಯಲ್ ಪ್ರೋಫೈಲ್‌ಗಳಲ್ಲಿ ಮತ್ತು ವೆಬ್‌ಸೈಟ್ ಹೆಸರನ್ನು ಅಧಿಕೃತವಾಗಿ HMD ಗೆ ಬದಲಾಯಿಸಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ನೋಕಿಯಾ ಕಥೆ ಮುಗಿದೆ ಹೋಯಿತು ಎಂದು ಊಹಿಸಲಾಗಿತ್ತು. ಆದರೆ ನೋಕಿಯಾ ಫೋನ್ ಪ್ರಿಯರಿಗೆ ಖುಷಿ ಸಂಗತಿ ಇದೆ, ಅದೆನೇಂದರೆ, ಎವರ್‌ಗ್ರೀನ್ ಮೊಬೈಲ್ ಬ್ರ್ಯಾಂಡ್ ನೋಕಿಯಾ ಕಥೆ ಇನ್ನು ಮುಗಿದಿಲ್ಲ.
ಹೌದು, ಜನಪ್ರಿಯ ನೋಕಿಯಾ ಮೊಬೈಲ್ ಬ್ರ್ಯಾಂಡ್‌ನಲ್ಲಿ ಪ್ರಸಕ್ತ 2024 ವರ್ಷದಲ್ಲಿ ಸುಮಾರು 17 ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಾಂಚ್ ಆಗಲಿವೆ ಎಂದು GSMchina ವರದಿ ಮಾಡಿದೆ. ಈ ವರದಿಯಲ್ಲಿ IMEI ಡೇಟಾಬೇಸ್‌ನಲ್ಲಿ TA-1603 ರಿಂದ TA-1628 ವರೆಗಿನ 17 ಹೊಸ ಸ್ಮಾರ್ಟ್‌ಫೋನ್ ಮಾದರಿ ಸಂಖ್ಯೆಗಳನ್ನು ಗುರುತಿಸಿದೆ ಎಂದು ಹೇಳಲಾಗಿದೆ.

ಈ ಮಾದರಿಗಳು ಪ್ರಾಥಮಿಕ ಫೋನ್‌ಗಳ ವಿಭಿನ್ನ RAM /ಸ್ಟೋರೇಜ್ ವೇರಿಯಂಟ್ ಅಥವಾ ಸಂಪೂರ್ಣವಾಗಿ ವಿಭಿನ್ನ ಸ್ಮಾರ್ಟ್‌ಫೋನ್‌ಗಳಾ ಇರುವ ಸಾಧ್ಯತೆಯಿದೆ ಎನ್ನಲಾಗಿದೆ. ಅಲ್ಲದೇ ಮುಂದೆ ಲಗ್ಗೆ ಇಡಲಿರುವ ಫೋನ್‌ಗಳು MWC (ಮೊಬೈಲ್ ವರ್ಲ್ಡ್ ಕಾಂಗ್ರೆಸ್) ನಲ್ಲಿ ಕೆಲವು ಸ್ಮಾರ್ಟ್‌ಫೋನ್ ಗಳು ಬಿಡುಗಡೆ ಸಾಧ್ಯತೆ ಅಧಿಕ ಆಗಿದೆ.
ಬರಲಿರುವ ನೂತನ ಸ್ಮಾರ್ಟ್‌ಫೋನ್‌ಗಳ ಕುರಿತು ಸಂಸ್ಥೆಯು ವೆಬ್‌ಸೈಟ್ ಮೂಲಕಕ ಯಾವುದೇ ಅಧಿಕೃತ ಇತರೆ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ. ಅದಾಗ್ಯೂ, ನೂತನ ಸ್ಮಾರ್ಟ್‌ಫೋನ್‌ಗಳು ನೋಕಿಯಾ ಬ್ರಾಂಡ್ ಅನ್ನು ಪಡೆದಿರಲಿವೆ, ಬದಲಿಗೆ HMD ಬ್ರಾಂಡ್ ಅಲ್ಲ ಎನ್ನಲಾಗಿದೆ.

ಅಂದಹಾಗೆ TA-1584, TA-1594, TA-1595, TA-1588, TA-1589, TA-1592, TA-1602, TA-1605 ಮತ್ತು TA-1631 ಮಾದರಿ ಸಂಖ್ಯೆಗಳನ್ನು ಒಳಗೊಂಡಿರುವ IMEI ಡೇಟಾಬೇಸ್‌ನಲ್ಲಿ 9 ನೂತನ HMD-ಬ್ರ್ಯಾಂಡ್ ಮೊಬೈಲ್‌ಗಳನ್ನು ಇತ್ತೀಚೆಗೆ ಗುರುತಿಸಲಾಗಿದೆ. ಇನ್ನು HMD ಗ್ಲೋಬಲ್ ಸಂಸ್ಥೆಯು ತನ್ನ ಸ್ವಂತ ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಇದೇ ಏಪ್ರಿಲ್ 2024 ರ ಆಸುಪಾಸಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವ ನಿರೀಕ್ಷೆಗಳಿವೆ.
ಹಾಗೆಯೇ ಭಾರತದಲ್ಲಿ ನೋಕಿಯಾ ಇತ್ತೀಚಿಗೆ ನೋಕಿಯಾ G42 5G ಫೋನ್ ಅನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಇನ್ನು ಈ ಫೋನ್ 6.56 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಆಯ್ಕೆ ಒಳಗೊಂಡಿದ್ದು, ಇದು 720 x 1612 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರ ಜೊತೆಗೆ ಈ ಫೋನ್ 90Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದ್ದು, 450 ನಿಟ್ಸ್ ಕನಿಷ್ಠ ಹಾಗೂ 560 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೊಂದಿಗೆ ಕಾಣಿಸಿಕೊಂಡಿದೆ.
ಇನ್ನು ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್ ಪವರ್ ಜೊತೆಗೆ ಅಡ್ರಿನೋ 619 GPU ಬಲ ಪಡೆದುಕೊಂಡಿದೆ. ಹಾಗೆಯೇ 6GB RAM, 128GB ಸ್ಟೋರೇಜ್ ಆಯ್ಕೆ ಪಡೆದಿದೆ. ಅದಲ್ಲದೇ ಹೆಚ್ಚುವರಿ ಸ್ಟೋರೇಜ್‌ಗಾಗಿ ಎಸ್‌ಡಿ ಕಾರ್ಡ್ ಮೂಲಕ, 1TB ವರೆಗೆ ವಿಸ್ತರಿಸಲು ಅವಕಾಶ ನೀಡಿದೆ. ಈ ಫೋನ್ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ.
ಈ 5G ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಮೊದಲ ಕ್ಯಾಮೆರಾವು 50 ಮೆಗಾಪಿಕ್ಸೆಲ್‌ನಲ್ಲಿ ಇದೆ. ಉಳಿದೆರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಡೀಪ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಹೊಂದಿದೆ. ಇನ್ನು ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ FF ಫ್ರಂಟ್ ಕ್ಯಾಮೆರಾ ಆಯ್ಕೆ ಸ್ಪೆಷಲ್ ಎನಿಸಿದೆ. ಈ ನೋಕಿಯಾ G42 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ.


Click it and Unblock the Notifications








