ನೋಕಿಯಾ ಮೀಡಿಯಾ ಸ್ಟ್ರೀಮರ್ ಬಿಡುಗಡೆ!..ಬೆಲೆ 3,499ರೂ!
ಪ್ರಸ್ತುತ ಇಂಟರ್ನೆಟ್ ಆಧಾರಿತ ಮನರಂಜನಾ ಡಿವೈಸ್‌ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಅಮೆಜಾನ್, ಟಾಟಾಸ್ಕೈ, ಡಿಶ್ ಟಿವಿ, ಸಂಸ್ಥೆಗಳು ಸೇರಿದಂತೆ ಶಿಯೋಮಿಯು ಸಹ ಸ್ಟಿಕ್ ಡಿವೈಸ್ ಅನ್ನು ಪರಿಚಯಿಸಿವೆ. ಆ ಲಿಸ್ಟಿಗೆ ಇದೀಗ ಹೊಸದಾಗಿ ನೋಕಿಯಾ ಸಹ ಸೇರ್ಪಡೆ ಆಗಿದೆ. ಫ್ಲಿಪ್‌ಕಾರ್ಟ್ ಇದೀಗ ನೋಕಿಯಾ ಮೀಡಿಯಾ ಸ್ಟ್ರೀಮರ್ ಡಿವೈಸ್ ಅನ್ನು ಬಿಡುಗಡೆ ಮಾಡಿದೆ.

ಹೌದು, ಭಾರತದಲ್ಲಿ ನೋಕಿಯಾ ಟೆಲಿವಿಷನ್ ವಿಭಾಗವನ್ನು ನಿರ್ವಹಿಸುತ್ತಿರುವ ಫ್ಲಿಪ್‌ಕಾರ್ಟ್ ಹೊಸದಾಗಿ ನೋಕಿಯಾ ಮೀಡಿಯಾ ಸ್ಟ್ರೀಮರ್ ಡಿವೈಸ್ ಅನ್ನು ಪಡಿಚಯಿಸಿದೆ. ಈ ಡಿವೈಸ್ ಆಂಡ್ರಾಯ್ಡ್ ಓಎಸ್ ಆಧಾರಿತವಾಗಿದ್ದು, ಕ್ರೋಮ್‌ಕಾಸ್ಟ್ ಸೌಲಭ್ಯ ಸೇರಿದಂತೆ ಜನಪ್ರಿಯ OTT ಅಪ್ಲಿಕೇಶನ್‌ಗಳ ಆಯ್ಕೆಯನ್ನು ಒಳಗೊಂಡಿದೆ. ಹಾಗೆಯೇ ಶಿಯೋಮಿಯ ಮಿ ಬಾಕ್ಸ್ 4K ಡಿವೈಸ್‌ಗೆ ಪೈಪೋಟಿ ನೀಡುವ ಫೀಚರ್ಸ್‌ಗಳನ್ನು ಪಡೆದಿದೆ.

ನೋಕಿಯಾ ಮೀಡಿಯಾ ಸ್ಟ್ರೀಮರ್ ಡಿವೈಸ್ 1920*1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದ್ದು, ಪೂರ್ಣ ಹೆಚ್‌ಡಿ ಜೊತೆಗ 60fps ಬೆಂಬಲ ಹೊಂದಿದೆ. ಹಾಗೆಯೇ 1GB RAM ಮತ್ತು 8GB ROM ಸ್ಟೋರೇಜ್ ಸೌಲಭ್ಯವನ್ನು ಪಡೆದಿರುವ ಈ ಡಿವೈಸ್ ಕ್ವಾಡ್ ಕೋರ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಡ್ಯುಯಲ್ ಬ್ಯಾಂಡ್ ವೈ-ಫೈ ಸಫೋರ್ಟ್ ಒಳಗೊಂಡಿದೆ. ಹಾಗೆಯೇ ಮಲ್ಟಿ I/O ಆಯ್ಕೆಯ ಬಟನ್ ಪಡೆದಿದೆ.

ಈ ಡಿವೈಸ್ ಆಂಡ್ರಾಯ್ಡ್ ಟಿವಿ 9.0 ಓಎಸ್ ನಲ್ಲಿ ಕೆಲಸ ಮಾಡಲಿದ್ದು, ಬಿಲ್ಟ್‌ಇನ್ Chromecast ಫೀಚರ್ ಅನ್ನು ಪಡೆದಿದೆ. ಈ ಆಯ್ಕೆಯ ಮೂಲಕ ಬಳಕೆದಾರರಿಗೆ ತಮ್ಮ ಮೊಬೈಲ್ ಫೋನ್ ಸ್ಕ್ರೀನ್ ಅನ್ನು ಟಿವಿಗೆ ಕನೆಕ್ಟ್ ಮಾಡಿ ವೀಕ್ಷಿಸಬಹುದಾಗಿದೆ. ಇನ್ನು ಈ ಡಿವೈಸ್ Google Play ಸ್ಟೋರ್ ನಲ್ಲಿ ಲಭ್ಯವಿರುವ ಎಲ್ಲಾ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ. ಇನ್ನು ಈ ರಿಮೋಟ್ ವಾಯಿಸ್ ಬೆಂಬಲಿತ ಸೇವೆಯನ್ನು ಪಡೆದಿದೆ. ಇದರೊಂದಿಗೆ ಜನಪ್ರಿಯ ನೆಟ್‌ಫ್ಲಿಕ್ಸ್ ಮತ್ತು ಜೀ5 ಹೊಂದಿದೆ.

ಅಂದಹಾಗೇ ನೋಕಿಯಾ ಮೀಡಿಯಾ ಸ್ಟ್ರೀಮರ್ ಬೆಲೆ 3,499 ರೂ.ಗಳಾಗಿದೆ. ಈ ಡಿವೈಸ್‌ನ ಬಹುತೇಕ ಫೀಚರ್ಸ್‌ಗಳು ಶಿಯೋಮಿ ಮಿ ಬಾಕ್ಸ್ 4 ಕೆಗೆ ಸಮನಾಗಿವೆ. ಇನ್ನು ಈ ಡಿವೈಸ್ ಫ್ಲಿಪ್‌ಕಾರ್ಟ್ ತಾಣದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ಈ ಡಿವೈಸ್‌ನ ರಿಮೋಟ್ ರಚನೆಯು ಆಕರ್ಷಕವಾಗಿದ್ದು, OTT ಆಪ್ಸ್ ಕನೆಕ್ಟ್‌ಗೆ ನೇರ ಬಟನ್‌ಗಳನ್ನು ಒಳಗೊಂಡಿದೆ. ಹೆಚ್‌ಡಿಎಮ್‌ಐ ಕೇಬಲ್ ಆಯ್ಕೆಗಳು ಇವೆ.


Click it and Unblock the Notifications








