ನೋಕಿಯಾದ ಹೊಸ ಪ್ರಯತ್ನ!..ಫೋನ್ ಕೆಟ್ಟರೆ ಮನೆಯಲ್ಲಿಯೇ ರಿಪೇರಿ ಮಾಡಬಹುದು!
ಎವರ್‌ಗ್ರೀನ್ ಮೊಬೈಲ್ ಬ್ರ್ಯಾಂಡ್ ನೋಕಿಯಾ ತನ್ನ ಫೋನ್‌ಗಳಲ್ಲಿ ಹಲವು ಹೊಸತನಗಳನ್ನು ಪರಿಚಯಿಸಿದೆ. ಅದೇ ಹಾದಿಯಲ್ಲಿ ಮುಂದೆ ಸಾಗಿರುವ ನೋಕಿಯಾ ಹೆಚ್‌ಎಮ್‌ಡಿ ಗ್ಲೋಬಲ್ ಇದೀಗ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದೆ. ಅದೇನೆಂದರೇ, ಬಳಕೆದಾರರಿಗೆ ತಮ್ಮ ಫೋನ್ ಅನ್ನು ಮನೆಯಲ್ಲಿಯೇ ಸರಿಪಡಿಸುವ ಸಾಮರ್ಥ್ಯವನ್ನು ಒದಗಿಸಲಿದೆ.
ಹೌದು, ನೋಕಿಯಾ ಹೆಚ್‌ಎಮ್‌ಡಿ ಗ್ಲೋಬಲ್ ಹೊಸದಾಗಿ ನೋಕಿಯಾ G42 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಇದೇ ಸೆಪ್ಟೆಂಬರ್ 11 ರಂದು ಅಧಿಕೃತವಾಗಿ ಭಾರತದಲ್ಲಿ ಈ ಫೋನ್ ಲಾಂಚ್ ಆಗಲಿದೆ. ಈ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ತಮ್ಮ ಫೋನ್ ಅನ್ನು ಮನೆಯಲ್ಲಿಯೇ ಸರಿಪಡಿಸುವ ಸಾಮರ್ಥ್ಯವನ್ನು ಒದಗಿಸಲಿದೆ ಎಂದು ಹೇಳಲಾಗಿದೆ.

ನೋಕಿಯಾ G42 5G ಫೋನ್ ಸಂಸ್ಥೆಯ ಮೊದಲ ಬಳಕೆದಾರರೇ ರಿಪೇರಿ ಮಾಡಬಹುದಾದ 5G ಡಿವೈಸ್ ಆಗಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಫೋನ್ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಹಾಗದರೇ ಈ ಫೋನಿನ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ನೋಕಿಯಾ G42 5G ಡಿಸ್‌ಪ್ಲೇ ರಚನೆ :
ನೋಕಿಯಾ G42 5G ಮೊಬೈಲ್ 6.56 ಇಂಚಿನ IPS LCD ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಪಡೆದಿದೆ. ಇದರ ಜೊತೆಗೆ 90Hz ರಿಫ್ರೆಶ್ ರೇಟ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಹಾಗೆಯೇ ಇದು ಗೊರಿಲ್ಲಾ ಗ್ಲಾಸ್ 3 ಮತ್ತು ಸೆಲ್ಫಿ ಶೂಟರ್‌ಗಾಗಿ ವಾಟರ್‌ಡ್ರಾಪ್ ನಾಚ್ ಸೌಲಭ್ಯಗಳನ್ನು ಒಳಗೊಂಡಿದೆ.
ನೋಕಿಯಾ G42 5G ಪ್ರೊಸೆಸರ್ ಮಾಹಿತಿ :
ನೋಕಿಯಾ G42 5G ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಜೊತೆಗೆ ಗ್ರಾಫಿಕ್ಸ್‌ಗಾಗಿ Adreno GPU ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಅಲ್ಲದೇ ಈ ಫೋನ್ 4GB/6GB RAM ಮತ್ತು 128GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಮೆಮೊರಿ ವಿಸ್ತರಿಸಬಹುದಾಗಿದೆ.ಜೊತೆಗೆ 5GB ವರ್ಚುವಲ್ RAM ಬೆಂಬಲವಿದೆ.
ನೋಕಿಯಾ G42 5G ಕ್ಯಾಮೆರಾ ಸೆನ್ಸಾರ್ :
ನೋಕಿಯಾ G42 5G ಫೋನ್ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಮ್ಯಾಕ್ರೋ ಲೆನ್ಸ್ ಮತ್ತು ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಡೆಪ್ತ್ ಮಾಡ್ಯೂಲ್ ಹೊಂದಿವೆ. ಇದರೊಂದಿಗೆ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.
ನೋಕಿಯಾ G42 5G ಬ್ಯಾಟರಿ ಹಾಗೂ ಇತರೆ ಮಾಹಿತಿ :
ನೋಕಿಯಾ G42 5G ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 20W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡಾ ಒಳಗೊಂಡಿದೆ. ಹಾಗೆಯೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS ಮತ್ತು USB ಟೈಪ್-C ಪೋರ್ಟ್ ಆಯ್ಕೆಗಳನ್ನು ಒಳಗೊಂಡಿದೆ. ಅಂದಹಾಗೆ ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್‌ನಲ್ಲಿ ಕೆಲಸ ಮಾಡಲಿದೆ.
ನೋಕಿಯಾ G42 5G ಫೋನ್ ಪರ್ಪಲ್ ಕಲರ್ ಆಯ್ಕೆಯಲ್ಲಿ ಲಭ್ಯವಾಗುವ ನಿರೀಕ್ಷೆಗಳಿವೆ. ಅದಾಗ್ಯೂ, ಸಂಸ್ಥೆಯು ಫೋನ್ ಬಿಡುಗಡೆ ವೇಳೆ ಹೊಸ ಕಲರ್ ಆಯ್ಕೆಯಲ್ಲಿ ಪರಿಚಯಿಸಬಹುದು. ಈ ಫೋನ್ ಇತತ್ತೀಚಿಗೆ ಯುರೋಪ್‌ನಲ್ಲಿ ಅನಾವರಣ ಆಗಿದ್ದು, €249 ಬೆಲೆಯನ್ನು ಪಡೆದಿದೆ. ಭಾರತದಲ್ಲಿ ಅಂದಾಜು 22,300ರೂ. ಎನ್ನಲಾಗಿದೆ.


Click it and Unblock the Notifications








