ಇಂದು ನೋಕಿಯಾ 55 ಇಂಚಿನ ಸ್ಮಾರ್ಟ್‌ಟಿವಿ ಸೇಲ್!..ಬೆಲೆ ಎಷ್ಟು ಗೊತ್ತಾ?
ಜನಪ್ರಿಯ ಮೊಬೈಲ್ ಸಂಸ್ಥೆ ನೋಕಿಯಾ ಇತ್ತೀಚಿಗಷ್ಟೆ ಸ್ಮಾರ್ಟ್ ಟಿವಿ ವಲಯಕ್ಕೆ ಲಗ್ಗೆ ಇಟ್ಟಿದ್ದು, ಆರಂಭದಲ್ಲಿಯೇ 55 ಇಂಚಿನ ಟಿವಿ ಲಾಂಚ್ ಮಾಡಿ ಅಚ್ಚರಿ ಮೂಡಿಸಿತ್ತು. ಹೊಸದಾಗಿ ಲಾಂಚ್ ಆಗಿದ್ದ, ನೋಕಿಯಾ 55 ಇಂಚಿನ ಸ್ಮಾರ್ಟ್ ಟಿವಿ ಸೇಲ್ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇಂದು ಮಧ್ಯಾಹ್ನ 12ಕ್ಕೆ ಆರಂಭವಾಗಲಿದೆ. ಈ ಸ್ಮಾರ್ಟ್ ಟಿವಿ ಖರೀದಿಗೆ ಅತ್ಯುತ್ತಮ ರಿಯಾಯಿತಿ ಕೊಡುಗೆಗಳು ಇವೆ.

ಹೌದು, ಜನಪ್ರಿಯ ನೋಕಿಯಾ ಸಂಸ್ಥೆಯ 55 ಇಂಚಿನ ಸ್ಮಾರ್ಟ್‌ಟಿವಿ ಸೇಲ್ ಇಂದು (ಜ.13) ಮಧ್ಯಾಹ್ನ 12ಕ್ಕೆ ಶುರುವಾಗಿದೆ. ಗ್ರಾಹಕರಿಗೆ HSBC ಕ್ರಿಡಿಟ್ ಹಾಗೂ ಡೆಬಿಟ್ ಕಾರ್ಡ್ ಮೂಲಕ ಟಿವಿ ಖರೀದಿಸಿದರೇ, ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿಯು 4K ಪ್ಯಾನೆಲ್ ಒಳಗೊಂಡಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ನ ಸಪೋರ್ಟ್ ಹೊಂದಿದೆ. ಕ್ವಾಡ್ ಕೋರ್ ಪ್ಯೂರ್‌ಎಕ್ಸ್ (PureX) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಅತ್ಯುತ್ತಮ ಸೌಂಡ್ ಸೌಲಭ್ಯ ಪಡೆದಿದೆ. ಹಾಗಾದರೇ ನೋಕಿಯಾದ ಹೊಸ 55 ಇಂಚಿನ ಸ್ಮಾರ್ಟ್‌ಟಿವಿಯ ಇನ್ನಿತರೆ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
ನೋಕಿಯಾದ ಈ ಹೊಸ ಸ್ಮಾರ್ಟ್‌ಟಿವಿಯು 55 ಇಂಚಿನ ರಚನೆಯಲ್ಲಿದ್ದು, ಅಲ್ಟ್ರಾ ಹೆಚ್‌ಡಿ ಡಿಸ್‌ಪ್ಲೇ ಮಾದರಿಯಲ್ಲಿದೆ. ಹಾಗೆಯೇ ಈ ಟಿವಿಯು ಡಿಸ್‌ಪ್ಲೇಯ ಸುತ್ತಲೂ ಅಂಚು ರಹಿತ ಡಿಸೈನ್ ಪಡೆದುಕೊಂಡಿದ್ದು, ಎಚ್‌ಡಿಆರ್ 10 ಬೆಂಬಲ್ ಸಹ ಒಳಗೊಂಡಿದೆ. ಟಿವಿ ಬಾಟಮ್‌ನಲ್ಲಿ ಸ್ಪೀಕರ್ಸ್‌ಗಳ ರಚನೆಯನ್ನು ಪಡೆದಿದೆ.

ಪ್ರೊಸೆಸರ್ ಮತ್ತು ಓಎಸ್
ನೋಕಿಯಾದ ಹೊಸ ಸ್ಮಾರ್ಟ್‌ಟಿವಿಯು ಕ್ವಾಡ್ ಕೋರ್ ಪ್ಯೂರ್‌ಎಕ್ಸ್ (PureX) ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲವನ್ನು ನೀಡಲಾಗಿದೆ. 2.25GB RAM ಸಾಮರ್ಥ್ಯದಲ್ಲಿದ್ದು, ಇಂಟೆಲಿಜೆಂಟ್ ಡಿಮ್ಮಿಂಗ್ (Dimming) ತಂತ್ರಜ್ಞಾನವನ್ನು ಈ ಟಿವಿಯು ಒಳಗೊಂಡಿದೆ.

ಸೌಂಡ್ ಮತ್ತು ವಿಶೇಷ ಫೀಚರ್ಸ್
ಈ ಸ್ಮಾರ್ಟ್‌ಟಿವಿಯು ಕ್ಲಿಯರ್ ವ್ಯೂವ್ ಮತ್ತು ಕ್ಲಿಯರ್ ಸೌಂಡ್ ತಂತ್ರಜ್ಞಾನ್‌ವನ್ನು ಹೊಂದಿದ್ದು, ಜೆಬಿಎಲ್ ಸೌಂಡ್ ಸಪೋರ್ಟ್ ಸಹ ಟಿವಿಯಲ್ಲಿದೆ. ಜೊತೆಗೆ ಡಾಲ್ಬಿ ಅಟೋಮ್, ಡಾಲ್ಬಿ ಡಿಜಿಟಲ್ ಮತ್ತು ಡಿಟಿಎಸ್ TruSurround ತಂತ್ರಜ್ಞಾನದ ಸೌಂಡ್ ಕ್ವಾಲಿಟಿ ಸೌಲಭ್ಯಗಳನ್ನು ಪಡೆದುಕೊಂಡಿದೆ. ಟಿವಿ ಬಾಟಮ್‌ನಲ್ಲಿ ಫೈರಿಂಗ್ ಸ್ಪೀಕರ್ಸ್‌ಗಳಿವೆ.

ಆಪ್ಸ್ ಮತ್ತು ವಾಯಿಸ್ ಕಂಟ್ರೋಲ್
ನೋಕಿಯಾದ ಹೊಸ ಸ್ಮಾರ್ಟ್‌ಟಿವಿಯು ನೆಟ್‌ಫ್ಲಿಕ್ಸ್, ಯೂಟ್ಯೂಬ್ ಹಾಗೂ ಗೂಗಲ್ ಅಸಿಸ್ಟಂಟ್ ಸೌಲಭ್ಯಗಳನ್ನು ಹೊಂದಿದೆ. ಹಾಗೆಯೇ ಕ್ರೋಮ್‌ಕಾಸ್ಟ್ ಕನೆಕ್ಟ್ ಆಯ್ಕೆ ನೀಡಲಾಗದ್ದು, ಈ ಆಯ್ಕೆ ಮೂಲಕ ಸ್ಮಾರ್ಟ್‌ಫೋನ್‌ಗೆ ಸರಳವಾಗಿ ಕನೆಕ್ಟ್ ಮಾಡಬಹುದಾಗಿದೆ.

ಬೆಲೆ ಮತ್ತು ಲಭ್ಯತೆ
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ. ನೋಕಿಯಾ 55 ಇಂಚಿನ ಸ್ಮಾರ್ಟ್ ಟಿವಿಯು ಫ್ಲಿಪ್‌ಕಾರ್ಟ್ ತಾಣದಲ್ಲಿ ಇಂದು(ಜ.10) ಸೇಲ್ ಆರಂಭಿಸಿದೆ. ಈ ಸ್ಮಾರ್ಟ್‌ಟಿವಿಯ ಬೆಲೆಯು 41,999ರೂ. ಆಗಿದೆ. ಆಕ್ಸಿಸ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿಸುವ ಗ್ರಾಹಕರಿಗೆ ಶೇ.5% ಡಿಸ್ಕೌಂಟ್ ಇರಲಿದೆ ಜೊತೆಗೆ ಇಎಮ್‌ಐ ಆಯ್ಕೆ ಸಹ ಸಿಗಲಿದೆ.


Click it and Unblock the Notifications








