40 ಇಂಚಿನ ನೋಕಿಯಾ ಸ್ಮಾರ್ಟ್‌ಟಿವಿಗೆ 40% ಡಿಸ್ಕೌಂಟ್: ಭರ್ಜರಿ ಆಫರ್!
ನೋಕಿಯಾದ ಸ್ಮಾರ್ಟ್‌ಫೋನ್‌ಗಳು ಇಂದು ವಿಶೇಷ ಫೀಚರ್ಸ್‌ನೊಂದಿಗೆ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಅದರಂತೆ ಸ್ಮಾರ್ಟ್‌ಟಿವಿಗಳಿಗೂ ಭಾರೀ ಬೇಡಿಕೆ ಇದ್ದು, ಉತ್ತಮ ಕಾರ್ಯಕ್ಷಮತೆ ಹಾಗೂ ದೀರ್ಘ ಬಾಳಿಕೆಗೆ ಇವು ಹೆಸರಾಗಿವೆ. ಈ ನಡುವೆ ನೋಕಿಯಾದ 40 ಇಂಚಿನ ಈ ಸ್ಮಾರ್ಟ್‌ಟಿವಿಗೆ ಬರೋಬ್ಬರಿ 40% ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.
ಹೌದು, ನೀವೇನಾದರೂ ಅತ್ಯುತ್ತಮ ಸ್ಮಾರ್ಟ್‌ಟಿವಿಯನ್ನು ಆಫರ್ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈ ನೋಕಿಯಾ ಸ್ಮಾರ್ಟ್‌ಟಿವಿಯನ್ನು ಖರೀದಿ ಮಾಡಬಹುದಾಗಿದೆ. ಈ ಟಿವಿಯ ವಿಶೇಷತೆ ಏನೆಂದರೆ ದೀರ್ಘಕಾಲದವರೆಗೆ ಕತ್ತಲೆಯ ಕೋಣೆಯಲ್ಲಿ ವೀಕ್ಷಿಸುವಾಗ ನಿಮ್ಮ ಕಣ್ಣುಗಳಿಗೆ ಆಯಾಸ ಆಗುವುದಿಲ್ಲ. ಯಾಕೆಂದರೆ ಇದಕ್ಕಾಗಿಯೇ ವಿಶೇಷ ಫೀಚರ್ಸ್ ಅನ್ನು ನೀಡಲಾಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರವನ್ನು ತಿಳಿಯೋಣ ಬನ್ನಿ.

ನೋಕಿಯಾ ಸ್ಮಾರ್ಟ್‌ಟಿವಿ ಫೀಚರ್ಸ್: ಈ ಸ್ಮಾರ್ಟ್‌ಟಿವಿ ಖರೀದಿ ಮಾಡುವ ಮುನ್ನ ಇದರ ಫೀಚರ್ಸ್ ಬಗ್ಗೆ ತಿಳಿದುಕೊಳ್ಳಿ. ಅದರಂತೆ ಈ ಟಿವಿ 40 ಇಂಚಿನ ಫುಲ್ ಹೆಚ್ ಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 1920 x 1080 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಇದರೊಂದಿಗೆ 60 Hz ರಿಫ್ರೆಶ್ ರೇಟ್ ಆಯ್ಕೆ ಇದ್ದು, 178 ಡಿಗ್ರಿ ಆಂಗಲ್‌ನಲ್ಲಿ ಸ್ಪಷ್ಟ ವೀಕ್ಷಣೆಗೆ ಅನುವು ಮಾಡಿಕೊಡುತ್ತದೆ.
ಸ್ಥಳೀಯ ಕಾಂಟ್ರಾಸ್ಟ್ ಕಂಟ್ರೋಲ್‌ನೊಂದಿಗೆ 270 ನಿಟ್ಸ್ ಬ್ರೈಟ್‌ನೆಟ್ ಆಯ್ಕೆ ಹೊಂದಿರುವುದರಿಂದ ಉತ್ತಮ ವೀಕ್ಷಣೆ ಅನುಭವ ಪಡೆದುಕೊಳ್ಳಬಹುದಾಗಿದ್ದು. ಇದು ಪರದೆಯನ್ನು 1000 ಬ್ಲಾಕ್‌ಗಳಾಗಿ ವಿಭಜಿಸುತ್ತದೆ, ಪ್ರತಿ ಬ್ಲಾಕ್ ಗರಿಷ್ಠ ಸ್ಪಷ್ಟತೆ ಮತ್ತು ಬಣ್ಣದ ಕಾಂಟ್ರಾಸ್ಟ್‌ನೊಂದಿಗೆ ಕಂಡುಬರಲಿದ್ದು, ಯಾವುದೇ ವಿಡಿಯೋಗಳಲ್ಲಿಯೂ ಸಹ ವಿಶೇಷ ವೀಕ್ಷಣೆಯ ಅನುಭವವನ್ನು ಪಡೆದುಕೊಳ್ಳಬಹುದು.
ಇದರೊಂದಿಗೆ ನೀಲಿ ಬೆಳಕಿನಿಂದ ನಿಮ್ಮ ಕಣ್ಣುಗಳನ್ನು ರಕ್ಷಣೆ ಮಾಡು ಫೀಚರ್ಸ್ ಪಡೆದುಕೊಂಡಿದೆ. ಅಂದರೆ ದೀರ್ಘಕಾಲದವರೆಗೆ ಕತ್ತಲೆಯ ಕೋಣೆಯಲ್ಲಿ ನೀವು ಸ್ಮಾರ್ಟ್‌ಟಿವಿ ವೀಕ್ಷಣೆ ಮಾಡಿದರೂ ಸಹ ನಿಮ್ಮ ಕಣ್ಣಿಗೆ ಯಾವುದೇ ಕಾರಣಕ್ಕೂ ಆಯಾಸದ ಅನುಭವ ಆಗುವುದಿಲ್ಲ. ಇದರೊಂದಿಗೆ ವೀಕ್ಷಣೆಯ ಅನುಭವವನ್ನು ಹೆಚ್ಚು ಮಾಡಿಕೊಳ್ಳಲು ಬಣ್ಣ ವಿಧಾನಗಳು ಮತ್ತು ಬ್ರೈಟ್‌ನೆಸ್ ಅನ್ನು ನಿಮ್ಮಿಷ್ಟದ ಹಾಗೆ ಹೊಂದಿಸಬಹುದು.

ಕ್ವಾಡ್ ಕೋರ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಟಿವಿ ಮಾಲಿ G31*2 ಗ್ರಾಫಿಕ್ ಪ್ರೊಸೆಸರ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 1GB RAM ಹಾಗೂ 8GB ಇಂಟರ್ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದ್ದು, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಡಿಸ್ನಿ+ಹಾಟ್‌ಸ್ಟಾರ್ ಸೇರಿದಂತೆ ವಿವಿಧ ಆಪ್‌ಗಳಿಗೆ ಬೆಂಬಲ ನೀಡಲಿದೆ. ಜೊತೆಗೆ ನಿಮ್ಮಿಷ್ಟದ ಆಪ್‌ಗಳನ್ನೂ ಸಹ ಇನ್‌ಸ್ಟಾಲ್ ಮಾಡಬಹುದು.
ಈ ಸ್ಮಾರ್ಟ್‌ಟಿವಿಯ ಆಡಿಯೋ ವಿಚಾರಕ್ಕೆ ಬರುವುದಾದರೆ 2ಸ್ಪೀಕರ್ ಹೊಂದಿರುವ ಈ ಟಿವಿ ಡಾಲ್ಬಿ ಆಡಿಯೋದೊಂದಿಗೆ 24W ಸೌಂಡ್ ಔಟ್‌ಪುಟ್ ನೀಡಲಿದೆ. ಅದರಲ್ಲೂ ಸ್ಪೋರ್ಟ್ಸ್, ಸಿನಿಮಾ, ಮ್ಯೂಸಿಕ್, ನ್ಯೂಸ್ ಸೇರಿದಂತೆ ವಿವಿಧ ವಿಭಾಗಗಳಿಗೆ ತಕ್ಕಂತೆ ಸೌಂಡ್ ನೀಡುವುದು ಮತ್ತಷ್ಟು ವಿಶೇಷ. ಇನ್ನುಳಿದಂತೆ MP3, M4A, AAC, FLAC ಆಡಿಯೋ ಮಾದರಿಗಳಿಗೆ ಇದು ಬೆಂಬಲ ನೀಡುತ್ತದೆ.
ಇದರ ಕನೆಕ್ಟಿವಿಟಿಗೆ ಸಂಬಂಧಿಸಿಂತೆ ಮೂರು ಹೆಚ್‌ಡಿಎಮ್‌ಐ, ಎರಡು ಯುಎಸ್‌ಬಿ ಪೋರ್ಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಜೊತೆಗೆ 5GHz ಡ್ಯುಯಲ್ ಬ್ಯಾಂಡ್ ವೈ ಫೈ ಹೊಂದಿದ್ದು, ಗೂಗಲ್ ಆಪ್ ಸ್ಟೋರ್ ಮೂಲಕ ಅಗತ್ಯ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಜೊತೆಗೆ ಸ್ಕ್ರೀನ್ ಮಿರರಿಂಗ್ ಸೌಲಭ್ಯ ಸಹ ಇದ್ದು, ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಪಿಸಿಗೆ ಬೆಂಬಲ ನೀಡುತ್ತದೆ.

ನೋಕಿಯಾ ಸ್ಮಾರ್ಟ್‌ಟಿವಿಯ ಆಫರ್ ಬೆಲೆ ವಿವರ: 40 ಇಂಚಿನ ಈ ಸ್ಮಾರ್ಟ್‌ಟಿವಿ ಸಾಮಾನ್ಯ ದರ 29,000ರೂ. ಗಳಾಗಿದ್ದು, ಇದನ್ನು ಈಗ 17,400ರೂ.ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಸ್ಮಾರ್ಟ್‌ಟಿವಿ ಮೇಲೆ 40% ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಈ ಮೂಲಕ ನೀವು ಬರೋಬ್ಬರಿ 7,000ರೂ. ಗಳನ್ನು ಉಳಿಸಿದಂತೆ ಆಗಲಿದೆ. ಈ ಸ್ಮಾರ್ಟ್‌ಟಿವಿಯನ್ನು ಪ್ರಮುಖ ಇ ಕಾಮರ್ಸ್ ತಾಣ ಆಗಿರುವ ಫ್ಲಿಪ್‌ಕಾರ್ಟ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








