Home
ಸುದ್ದಿಜಾಲ

ನೋಕಿಯಾ X30 5G ಫೋನ್‌ ಬೆಲೆ ಇಳಿಕೆ!..ಖರೀದಿಸಲು ಉತ್ತಮವೇ?

ಮೊಬೈಲ್‌ ಮಾರುಕಟ್ಟೆಯಲ್ಲಿ ನೋಕಿಯಾ ಸಂಸ್ಥೆಯು X ಸರಣಿಯಲ್ಲಿ ಕೆಲವು ಬಜೆಟ್‌ ದರದ ಫೋನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ನೋಕಿಯಾ X30 5G ಫೋನ್‌ ಫೀಚರ್ಸ್‌ ಹಾಗೂ ಪ್ರೈಸ್ ಟ್ಯಾಗ್‌ನಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆದರೆ ಈ ಸ್ಮಾರ್ಟ್‌ಫೋನ್‌ ಇದೀಗ ಅಮೆಜಾನ್ ಇ ಕಾಮರ್ಸ್‌ ತಾಣದಲ್ಲಿ ಸಖತ್ ಬೆಲೆ ಇಳಿಕೆ ಪಡೆದಿದ್ದು, ಗ್ರಾಹಕರು ಖುಷಿ ಪಡುವಂತೆ ಮಾಡಿದೆ.

ಹೌದು, ನೋಕಿಯಾದ ಇತ್ತೀಚಿನ ನೋಕಿಯಾ X30 5G ಮೊಬೈಲ್‌ ಅಮೆಜಾನ್ ಪ್ಲಾಟ್‌ಫಾರ್ಮ್ ತಾಣದಲ್ಲಿ ಈಗ 33% ರಷ್ಟು ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ 128 GB ಸ್ಟೋರೇಜ್‌ನ ವೇರಿಯಂಟ್‌ 54,999ರೂ. ಗಳ ಬೆಲೆಯನ್ನು ಹೊಂದಿದ್ದು, ಈಗ ಗ್ರಾಹಕರು 36,999ರೂ. ಗಳ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ.

ನೋಕಿಯಾ X30 5G ಫೋನ್‌ ಬೆಲೆ ಇಳಿಕೆ!..ಖರೀದಿಸಲು ಉತ್ತಮವೇ?

ನೋಕಿಯಾ X30 5G ಸ್ಮಾರ್ಟ್‌ಫೋನ್‌ 4200 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ಫ್ಲ್ಯಾಶ್‌ಚಾರ್ಜ್ ಚಾರ್ಜಿಂಗ್ ಸೌಲಭ್ಯವನ್ನು ಬೆಂಬಲಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ ಬ್ಲೂ ಮತ್ತು ವೈಟ್‌ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಪಡೆದಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ನೋಕಿಯಾ X30 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ : ನೋಕಿಯಾ X30 5G ಫೋನ್‌ 6.43 ಇಂಚಿನ ಅಮೋಲೆಡ್‌ ಪ್ಯೂರ್‌ ಡಿಸ್‌ಪ್ಲೇ ಆಯ್ಕೆಯು ಬಳಕೆದಾರರಿಗೆ ಹೆಚ್ಚು ಬ್ರೈಟ್‌ನೆಸ್‌ ಮತ್ತು ರೋಮಾಂಚಕ ಬಣ್ಣದ ಅನುಭವವನ್ನು ನೀಡುತ್ತದೆ. ಅದರಲ್ಲೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿರುವುದು ಸಂಗತಿಯಾಗಿದೆ. ಹಾಗೆಯೇ ಇದು 90hz ಸ್ಕ್ರೀನ್ ರಿಫ್ರೆಶ್ ರೇಟ್ ನೀಡಲಿದೆ.

ನೋಕಿಯಾ X30 5G ಫೋನ್‌ ಪ್ರೊಸೆಸರ್ : ಈ ನೋಕಿಯಾ X30 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಮೂರು ವರ್ಷಗಳ ಓಎಸ್‌ ನವೀಕರಣಗಳನ್ನು ಖಾತರಿಪಡಿದಿದೆ. ಅದರಂತೆ ಸದ್ಯಕ್ಕೆ ಅಂಡ್ರಾಯ್ಡ್‌ 12 ನಲ್ಲಿ ಈ ಫೋನ್ ರನ್ ಆಗುತ್ತದೆ. ಇನ್ನು 8GB RAM ಹಾಗೂ 256 GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯಲ್ಲಿ ಲಭ್ಯ ಇರಲಿದೆ.

ನೋಕಿಯಾ X30 5G ಕ್ಯಾಮೆರಾ ಸೆನ್ಸಾರ್ : ನೋಕಿಯಾ X30 5G ಫೋನ್‌ ರಿಯರ್‌ನಲ್ಲಿ ಡ್ಯುಯಲ್‌ ಕ್ಯಾಮೆರಾ ಆಯ್ಕೆ ಹೊಂದಿದೆ ಅದರಲ್ಲಿ 50 ಮೆಗಾ ಪಿಕ್ಸೆಲ್ ಪ್ಯೂರ್‌ ವ್ಯೂ ಪ್ರಮುಖ ಕ್ಯಾಮೆರಾ, 13 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿದ್ದು, ಈ ಕ್ಯಾಮೆರಾದಲ್ಲಿನ ಸೆನ್ಸರ್‌ ಎಐ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಫೀಚರ್ಸ್‌ ಪಡೆದುಕೊಂಡಿದೆ.

ಈ ಮೂಲಕ ಅದ್ಭುತವಾಗಿ ಫೋಟೊ ಸೆರೆಹಿಡಿಯಬಹುದಾಗಿದ್ದು, ಇದರೊಂದಿಗೆ ನೈಟ್ ಮೋಡ್ 2.0, ಡಾರ್ಕ್ ವಿಷನ್, ಟ್ರೈಪಾಡ್ ಮೋಡ್ ಮತ್ತು ನೈಟ್ ಸೆಲ್ಫಿ ಸೇರಿದಂತೆ ವಿವಿಧ ಕ್ಯಾಮೆರಾ ಸಾಮರ್ಥ್ಯವನ್ನು ಈ ಸ್ಮಾರ್ಟ್‌ಫೋನ್ ಪಡೆದುಕೊಂಡಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

ನೋಕಿಯಾ X30 5G ಬ್ಯಾಟರಿ ಹಾಗೂ ಇತರೆ ಸೌಲಭ್ಯ : ನೋಕಿಯಾ X30 5G ಸ್ಮಾರ್ಟ್‌ಫೋನ್ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 2 ದಿನಗಳ ಬ್ಯಾಟರಿ ಬ್ಯಾಕಪ್‌ ನೀಡಲಿದೆ. 4200 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯೊಂದಿಗೆ 33W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇನ್ನು ಗೋಪ್ರೋ ಕ್ವಿಕ್‌ ಆಪ್‌ ಅನ್ನು ಹೊಂದಿದ್ದು, ಬಳಕೆದಾರರು ಈ ಮೂಲಕ ಎಲ್ಲಿಂದಲಾದರೂ ಚಿತ್ರೀಕರಿಸಬಹುದು, ಎಡಿಟ್‌ ಮಾಡಬಹುದು ಮತ್ತು ಶೇರ್‌ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Nokia X30 5G Price Drop On Amazon. Offer Price and Specificatios and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+