ನೋಕಿಯಾ X30 5G ಸ್ಮಾರ್ಟ್‌ಫೋನ್ ಲಾಂಚ್; ಇದು 48,000ರೂ. ಬೆಲೆಗೆ ಯೋಗ್ಯವೇ?
ಭಾರತದಲ್ಲಿ ನೋಕಿಯಾ ಫೋನ್‌ಗಳಿಗೆ ಒಂದು ವಿಶೇಷವಾದ ಪ್ರೀತಿ ಇದೆ. ಈ ಕಾರಣಕ್ಕೆ ನೋಕಿಯಾದ ಯಾವುದೇ ಫೋನ್ ಲಾಂಚ್ ಆದರೂ ಭರ್ಜರಿಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತವೆ. ಇದರ ನಡುವೆ ಈಗ ಭಾರತದಲ್ಲಿ ಹೆಚ್ಎಮ್‌ಡಿ ಗ್ಲೋಬಲ್ ಹೊಸ ನೋಕಿಯಾ ಫೋನ್ ಅನ್ನು ಲಾಂಚ್ ಮಾಡಿದ್ದು, ಈ ಫೋನ್ ಆಕರ್ಷಕ ವಿನ್ಯಾಸ ಹಾಗೂ ಹಲವಾರು ಉಪಯೋಗ ಇರುವ ಕ್ಯಾಮೆರಾ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಹೌದು, ಸ್ಮಾರ್ಟ್‌ಫೋನ್ ವಲಯದಲ್ಲಿ ಸಾಕಷ್ಟು ಬ್ರ್ಯಾಂಡ್‌ಗಳು ವಿಭಿನ್ನ ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದ್ದು, ಇದರ ಸಾಲಿನಲ್ಲಿ ಈಗ ವಿಭಿನ್ನವಾಗಿ ನೋಕಿಯಾದ ನೋಕಿಯಾ X30 5G ( Nokia X30 5G ) ಎಂಬ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಗುರುತಿಸಿಕೊಳ್ಳಲಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಮೂರು ವರ್ಷಗಳ ಓಎಸ್ ನವೀಕರಣಗಳನ್ನು ಖಾತರಿಪಡಿಸುತ್ತದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಈ ಫೋನ್‌ನ ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ನೋಕಿಯಾ X30 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ
ನೋಕಿಯಾ X30 5G ಫೋನ್ 6.43 ಇಂಚಿನ ಅಮೋಲೆಡ್ ಪ್ಯೂರ್ ಡಿಸ್‌ಪ್ಲೇ ಆಯ್ಕೆಯು ಬಳಕೆದಾರರಿಗೆ ಹೆಚ್ಚು ಬ್ರೈಟ್‌ನೆಸ್ ಮತ್ತು ರೋಮಾಂಚಕ ಬಣ್ಣದ ಅನುಭವವನ್ನು ನೀಡುತ್ತದೆ. ಅದರಲ್ಲೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ ಬರುತ್ತಿರುವುದು ಇನ್ನಷ್ಟು ವಿಶೇಷ ಸಂಗತಿಯಾಗಿದೆ. ಹಾಗೆಯೇ ಇದು 90hz ಸ್ಕ್ರೀನ್ ರಿಫ್ರೆಶ್ ರೇಟ್ ನೀಡಲಿದೆ.
ನೋಕಿಯಾ X30 5G ಫೋನ್ ಪ್ರೊಸೆಸರ್ ವಿವರ
ಈ ನೋಕಿಯಾ X30 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಮೂರು ವರ್ಷಗಳ ಓಎಸ್ ನವೀಕರಣಗಳನ್ನು ಖಾತರಿಪಡಿದಿದೆ. ಅದರಂತೆ ಸದ್ಯಕ್ಕೆ ಅಂಡ್ರಾಯ್ಡ್ 12 ನಲ್ಲಿ ಈ ಫೋನ್ ರನ್ ಆಗುತ್ತದೆ. ಇನ್ನು 8GB RAM ಹಾಗೂ 256GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯಲ್ಲಿ ಲಭ್ಯ ಇರಲಿದೆ.

ನೋಕಿಯಾ X30 5G ಕ್ಯಾಮೆರಾ ರಚನೆ
ನೋಕಿಯಾ X30 5G ಫೋನ್ ರಿಯರ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಆಯ್ಕೆ ಹೊಂದಿದೆ ಅದರಲ್ಲಿ 50 ಮೆಗಾಪಿಕ್ಸೆಲ್ ಪ್ಯೂರ್ ವ್ಯೂ ಪ್ರಮುಖ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿದ್ದು, ಈ ಕ್ಯಾಮೆರಾದಲ್ಲಿನ ಸೆನ್ಸರ್ ಎಐ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಫೀಚರ್ಸ್ ಪಡೆದುಕೊಂಡಿದೆ. ಈ ಮೂಲಕ ಅದ್ಭುತವಾಗಿ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದ್ದು, ಇದರೊಂದಿಗೆ ನೈಟ್ ಮೋಡ್ 2.0, ಡಾರ್ಕ್ ವಿಷನ್, ಟ್ರೈಪಾಡ್ ಮೋಡ್ ಮತ್ತು ನೈಟ್ ಸೆಲ್ಫಿ ಸೇರಿದಂತೆ ವಿವಿಧ ಕ್ಯಾಮೆರಾ ಸಾಮರ್ಥ್ಯವನ್ನು ಈ ಸ್ಮಾರ್ಟ್‌ಫೋನ್ ಪಡೆದುಕೊಂಡಿದೆ.
ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇನ್ನು ಗೋಪ್ರೋ ಕ್ವಿಕ್ ಆಪ್ ಅನ್ನು ಹೊಂದಿದ್ದು, ಬಳಕೆದಾರರು ಈ ಮೂಲಕ ಎಲ್ಲಿಂದಲಾದರೂ ಚಿತ್ರೀಕರಿಸಬಹುದು, ಎಡಿಟ್ ಮಾಡಬಹುದು ಮತ್ತು ಶೇರ್ ಮಾಡಿಕೊಳ್ಳಬಹುದಾಗಿದೆ.
ನೋಕಿಯಾ X30 5G ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ
ನೋಕಿಯಾ X30 5G ಸ್ಮಾರ್ಟ್‌ಫೋನ್ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 2 ದಿನಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ. 4200mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯೊಂದಿಗೆ 33W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇನ್ನು ಗೋಪ್ರೋ ಕ್ವಿಕ್ ಆಪ್ ಅನ್ನು ಹೊಂದಿದ್ದು, ಬಳಕೆದಾರರು ಈ ಮೂಲಕ ಎಲ್ಲಿಂದಲಾದರೂ ಚಿತ್ರೀಕರಿಸಬಹುದು, ಎಡಿಟ್ ಮಾಡಬಹುದು ಮತ್ತು ಶೇರ್ ಮಾಡಿಕೊಳ್ಳಬಹುದಾಗಿದೆ.

ನೋಕಿಯಾ X30 5G ಬೆಲೆ ಹಾಗೂ ಲಭ್ಯತೆ
ನೋಕಿಯಾದ ಈ ವಿಶೇಷ ಫೋನ್‌ಗೆ 48,999 ರೂ.ಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ. ಅದಾಗ್ಯೂ ಇದು ನಿಖರ ಬೆಲೆಯಾಗಿರದೆ ಮುಂಬರುವ ದಿನಗಳಲ್ಲಿ ಬದಲಾಗಬಹುದು ಎಂದು ಸಂಸ್ಥೆ ಮಾಹಿತಿ ನೀಡಿದೆ. ಜೊತೆಗೆ ನೋಕಿಯಾ ಪ್ರಿಯರು ಫೆಬ್ರವರಿ 20 ರಿಂದ ಅಮೆಜಾನ್ ಹಾಗೂ ನೋಕಿಯಾದ ಅಧಿಕೃತ ಸೈಟ್‌ಗೆ ಭೇಟಿ ನೀಡುವ ಮೂಲಕ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ.


Click it and Unblock the Notifications








