Home
ಸುದ್ದಿಜಾಲ

ಎಂಟ್ರಿ ಕೊಡಲಿದೆ 'ನೋಕಿಯಾ XR21' ಫೋನ್‌!..ಮಾರುಕಟ್ಟೆಯಲ್ಲಿ ಕಮಾಲ್ ಮಾಡುತ್ತಾ?

ಮೊಬೈಲ್‌ ಮಾರುಕಟ್ಟೆಯಲ್ಲಿ ಇಂದಿಗೂ ಜನಪ್ರಿಯ ಸ್ಥಾನ ಪಡೆದಿರುವ ನೋಕಿಯಾ ಆಂಡ್ರಾಯ್ಡ್‌ನಲ್ಲಿ ಹಲವು ಫೋನ್‌ಗಳನ್ನು ಪರಿಚಯಿಸಿದೆ. ಇತ್ತೀಚಿಗಷ್ಟೆ ನೋಕಿಯಾ XR20 ಫೋನ್‌ ಬಿಡುಗಡೆ ಮಾಡಿ ಸದ್ದು ಮಾಡಿದ್ದು, ಇದೀಗ ಅದರ ಮುಂದುವರಿದ ಭಾಗವಾಗಿ ನೋಕಿಯಾ XR21 ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲು ಸಕಲ ರೀತಿ ಸಜ್ಜಾಗಿದೆ.

ಹೌದು, ನೋಕಿಯಾ ಕಂಪೆನಿ ಹೊಸದಾಗಿ ನೋಕಿಯಾ XR21 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಜ್ಜಾಗಿದ್ದು, ಅದರ ಕೆಲವು ಫೀಚರ್ಸ್‌ ಆನ್‌ಲೈನ್‌ನಲ್ಲಿ ಲೀಕ್‌ ಆಗಿವೆ. ಇನ್ನು ಈ ಫೋನ್‌ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸಲ್‌ ಇರಲಿದ್ದು, 4800mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದೆ ಎಂದು ಲೀಕ್ ಮಾಹಿತಿ ಮೂಲಕ ತಿಳಿದು ಬಂದಿದೆ. ಹಾಗೆಯೇ ಈ ಫೋನ್ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿರಲಿದೆ.

ಎಂಟ್ರಿ ಕೊಡಲಿದೆ 'ನೋಕಿಯಾ XR21' ಫೋನ್‌!..ಮಾರುಕಟ್ಟೆಯಲ್ಲಿ ಕಮಾಲ್ ಮಾಡುತ್ತಾ?

ಹಾಗೆಯೇ ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 695 SoC ಪ್ರೊಸೆಸರ್‌ ಹೊಂದಿರಲಿದ್ದು, ಜೊತೆಗೆ 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ. ಇದರೊಂದಿಗೆ IP68 ರೇಟಿಂಗ್‌ ಸಹ ಒಳಗೊಂಡಿರಲಿದ್ದು, ಧೂಳು ಹಾಗೂ ನೀರಿನಿಂದ ರಕ್ಷಣೆ ಸಿಗಲಿದೆ. ಹಾಗಾದರೆ ನೋಕಿಯಾ XR21 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿರಲಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ನೋಕಿಯಾ XR21 ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ : ನೋಕಿಯಾ XR21 ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.49 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿರಲಿದೆ.

ಎಂಟ್ರಿ ಕೊಡಲಿದೆ 'ನೋಕಿಯಾ XR21' ಫೋನ್‌!..ಮಾರುಕಟ್ಟೆಯಲ್ಲಿ ಕಮಾಲ್ ಮಾಡುತ್ತಾ?

ನೋಕಿಯಾ XR21 ಪ್ರೊಸೆಸರ್‌ ಯಾವುದು : ನೋಕಿಯಾ XR21 ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಹೊಂದಿರಲಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಓಎಸ್‌ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿರಲಿದೆ.

ನೋಕಿಯಾ XR21 ಕ್ಯಾಮೆರಾ ಸೆನ್ಸಾರ್ : ನೋಕಿಯಾ XR21 ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಶೂಟರ್ ಹೊಂದಿರಲಿದೆ. ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ.

ಎಂಟ್ರಿ ಕೊಡಲಿದೆ 'ನೋಕಿಯಾ XR21' ಫೋನ್‌!..ಮಾರುಕಟ್ಟೆಯಲ್ಲಿ ಕಮಾಲ್ ಮಾಡುತ್ತಾ?

ನೋಕಿಯಾ XR21 ಬ್ಯಾಟರಿ ಮತ್ತು ಇತರೆ : ನೋಕಿಯಾ XR21 ಸ್ಮಾರ್ಟ್‌ಫೋನ್‌ 4800 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದ್ದು, ಇದು 33W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈಫೈ 6, ಬ್ಲೂಟೂತ್ v5.1, ಯುಎಸ್‌ಬಿ ಟೈಪ್‌ C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ.

ಇನ್ನು ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಭಾರತದಲ್ಲಿ ನೋಕಿಯಾ XR21 ಸ್ಮಾರ್ಟ್‌ಫೋನ್‌ 6GB + 128GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಪಡೆದಿರಲಿದೆ.

ನೋಕಿಯಾ XR21 ನಿರೀಕ್ಷಿತ ಬೆಲೆ : ನೋಕಿಯಾ XR21 ಫೋನ್‌ 6GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು ಭಾರತದಲ್ಲಿ ಸುಮಾರು 20,000ರೂ. ಒಳಗೆ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Nokia XR21 will be a new premium smartphone from Nokia which will offer a rugged design.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+