Smartphones: ಅಮೆಜಾನ್, ಫ್ಲಿಪ್‌ಕಾರ್ಟ್ ವಿಶೇಷ ಸೇಲ್‌ನಲ್ಲಿ ಹೊಸ ಫೋನ್ ಖರೀದಿಗೂ ಮುನ್ನ ಇದನ್ನು ಗಮನಿಸಿ
ಸ್ಮಾರ್ಟ್‌ಫೋನ್‌ಗಳನ್ನು (Smartphones) ಖರೀದಿ ಮಾಡಲು ಸಾಕಷ್ಟು ಜನರು ಕಾತುರದಿಂದ ಕಾದು ಕುಳಿತಿದ್ದರು. ಅದರಂತೆ ಈಗ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ (Amazon, Flipkart) ಇದೀಗ ವಿಶೇಷ ಸೇಲ್‌ಗಳನ್ನು ಆಯೋಜನೆ ಮಾಡಿದ್ದು, ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ.
ಹೌದು, ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಇದೀಗ ರಿಪಬ್ಲಿಕ್ ಡೇ ಸೇಲ್ (Republic Day Sale)ಆಯೋಜನೆ ಮಾಡಿವೆ. ಈ ಸೇಲ್‌ನಲ್ಲಿ ಅಗ್ಗದ ದರದಲ್ಲಿ ಸ್ಮಾರ್ಟ್‌ಫೋನ್ ಸಿಗುತ್ತಿವೆ ಎಂದ ಮಾತ್ರಕ್ಕೆ ಕಣ್ಣುಮುಚ್ಚಿಕೊಂಡು ಇವುಗಳನ್ನು ಖರೀದಿ ಮಾಡಬೇಡಿ. ಬದಲಾಗಿ ವಿವಿಧ ಮಾನದಂಡಗಳ ಆಧಾರದ ಮೇಲೆ ನಿಮಗೆ ಯೋಗ್ಯವಾದ ಹಾಗೂ ಉತ್ತಮವಾದ ಸ್ಮಾರ್ಟ್‌ಫೋನ್ ಆಯ್ಕೆ ಒಳ್ಳೆಯದು. ಹಾಗಿದ್ರೆ, ಯಾವೆಲ್ಲಾ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಫೋನ್ ಖರೀದಿ ಮಾಡಬೇಕು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ಮತ್ತು ಐಒಎಸ್ (Android, iOS) ಇಂದು ಸ್ಮಾರ್ಟ್‌ಫೋನ್‌ಗಳಲ್ಲಿ ಅಗತ್ಯವಾಗಿ ಬಳಕೆ ಮಾಡುತ್ತಿರುವ ಆಪರೇಟಿಂಗ್ ಸಿಸ್ಟಮ್‌ಗಳಾಗಿವೆ. ಇದರಲ್ಲಿ ಆಂಡ್ರಾಯ್ಡ್ ಅನ್ನು ಹೆಚ್ಚಿನ ಜನರು ಬಳಕೆ ಮಾಡಿದ್ರೆ ಅಥವಾ ಆಂಡ್ರಾಯ್ಡ್ ಆಧಾರಿತ ಡಿವೈಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿದ್ದರೆ ಐಓಎಸ್ ತನ್ನದೇ ಆದ ಸೀಮಿತ ಡಿವೈಸ್‌ಗಳಲ್ಲಿ ಲಭ್ಯ ಇದೆ. ಅಂದರೆ ಆಪಲ್ ಡಿವೈಸ್‌ಗಳಲ್ಲಿ ಮಾತ್ರ ಇದನ್ನು ಕಾಣಬಹುದಾಗಿದೆ. ಆಡ್ರಾಯ್ಡ್ ಡಿವೈಸ್‌ಗಿಂತ ಐಒಎಸ್ ಡಿವೈಸ್‌ಗಳು ಹೆಚ್ಚಿನ ಬೆಲೆ ಹೊಂದಿರುತ್ತವೆ. ಪರಿಣಾಮ ಮೊದಲು ನಿಮ್ಮ ಆಯ್ಕೆ ಯಾವುದು ಎಂದು ನಿರ್ಧರಿಸಿ.
ಡಿಸ್‌ಪ್ಲೇ: 5.5 ಅಥವಾ 6 ಇಂಚಿನ ಹೆಚ್‌ಡಿ ಅಥವಾ QHD ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚಾಗಿ ಖರೀದಿ ಮಾಡಲಾಗುತ್ತದೆ. ನೀವು ಸ್ಟ್ರೀಮಿಂಗ್ ವಿಡಿಯೋಗಳನ್ನು ವೀಕ್ಷಿಸುವವರಾಗಿದ್ದರೆ , ಫೋಟೋಗಳು ಅಥವಾ ವಿಡಿಯೋ ಎಡಿಟಿಂಗ್ ಮಾಡುವುದು, ಡೌನ್‌ಲೋಡ್ ಮಾಡುವುದು, ಗೇಮ್ ಆಡುವುದು ಮತ್ತು ಚಲನಚಿತ್ರಗಳನ್ನು ವೀಕ್ಷಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರೆ ಪ್ರೀಮಿಯಂ ಫೀಚರ್ಸ್ ಡಿಸ್‌ಪ್ಲೇ ಇರುವ ಪೋನ್ ಅನ್ನು ಆಯ್ಕೆ ಮಾಡಿ.

ಬ್ಯಾಟರಿ: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ನಲ್ಲಿನ ಬ್ಯಾಟರಿ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಅಂದರೆ ಸ್ಮಾರ್ಟ್‌ಫೋನ್‌ನ ಶಕ್ತಿಯನ್ನು ಅದರ ಬ್ಯಾಟರಿ ಬ್ಯಾಕಪ್‌ನಿಂದ ನಿರ್ಧರಿಸಲಾಗುತ್ತದೆ. ನೀವು ಆಪ್‌ಗಳನ್ನು ಹೆಚ್ಚಾಗಿ ಬಳಕೆ ಮಾಡುವವರಾಗಿದ್ದರೆ, ಗೇಮ್ ಆಡುವವಾರಿದ್ದರೆ, ವಿಡಿಯೋ ಸ್ಟ್ರೀಮ್ ಮಾಡುವವರಾಗಿದ್ದರೆ ಉತ್ತಮ ಬ್ಯಾಟರಿ ಆಯ್ಕೆ ಇರುವ ಫೋನ್ ಆಯ್ಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಸಾಮರ್ಥ್ಯ 3500mAh ಸಾಮರ್ಥ್ಯದಿಂದಲೂ ಲಭ್ಯ ಇದೆ.
ಸ್ಟೋರೇಜ್ ಆಯ್ಕೆ: ಇನ್ನು ಸ್ಮಾರ್ಟ್‌ಫೋನ್‌ಗಳ ತಾಕತ್ತು ಈ ಸ್ಟೋರೇಜ್ ಆಯ್ಕೆಯಿಂದಲೂ ಪರಿಗಣನೆಗೆ ಒಳಗಾಗುತ್ತದೆ. ಉತ್ತಮ ಸ್ಟೋರೇಜ್ ಆಯ್ಕೆ ಇರುವ ಫೋನ್ ಉತ್ತಮ ಸಾಮರ್ಥ್ಯ ನೀಡಲಿದೆ. ಈ ನಡುವೆ ನೀವು ನಿಮ್ಮ ಫೋನ್‌ನಲ್ಲಿಹೆಚ್ಚಿನ ಹಾಡುಗಳನ್ನು ಆಲಿಸುವವರಾಗಿದ್ದರೆ, ಫೋಟೋಗಳು ಮತ್ತು ವಿಡಿಯೋಗಳನ್ನು ಸ್ಟೋರ್ ಮಾಡಲು ಮುಂದಾಗಿದ್ರೆ ಹೆಚ್ಚಿನ ಸ್ಟೋರೇಜ್ ಆಯ್ಕೆಯ ಫೋನ್ ಉತ್ತಮವಾಗಿರಲಿದೆ. ಈ ವಿಭಾಗದಲ್ಲಿ ನೀವು 128GB ಅಥವಾ 256GB ಸ್ಟೋರೇಜ್ ವೇರಿಯಂಟ್ ಆಯ್ಕೆಯ ಫೋನ್‌ಗಳನ್ನು ಖರೀದಿ ಮಾಡಬಹುದು.

ಕ್ಯಾಮೆರಾ: ಕ್ಯಾಮೆರಾವು ಸ್ಮಾರ್ಟ್‌ಫೋನ್‌ನ ಹೃದಯವಾಗಿದೆ. ಉತ್ತಮ ಕ್ಯಾಮೆರಾ ಫೀಚರ್ಸ್ ಇರುವ ಫೋನ್‌ಗಳನ್ನು ಭಾರತದಲ್ಲಂತೂ ಹೆಚ್ಚಿನ ಜನರು ಖರೀದಿ ಮಾಡುತ್ತಾರೆ. ಈ ನಡುವೆ ಕ್ಯಾಮೆರಾ ಆಧಾರಿತ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚಾಗಿ ಲಾಂಚ್ ಸಹ ಮಾಡಲಾಗುತ್ತಿದೆ. ನೀವು ಫೋಟೋಗ್ರಫಿ ಪ್ರಿಯರಾಗಿದ್ರೆ, ವ್ಲಾಗ್ ಮಾಡುವವರಾಗಿದ್ದರೆ ಮತ್ತು ವಿಡಿಯೋ ಸೆರೆಹಿಡುವವರಾಗಿದ್ರೆ ಉತ್ತಮ ಮೆಗಾಪಿಕ್ಸೆಲ್ ಆಯ್ಕೆ ಇರುವ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಇದರಲ್ಲಿ ಅಪರ್ಚರ್, ಶಟರ್ ವೇಗ, ಇಮೇಜ್ ಸ್ಟೆಬಿಲೈಸೇಶನ್ ಮತ್ತು ಆಟೋಫೋಕಸ್ ಫೀಚರ್ಸ್ ಈ ವೇಳೆ ಪ್ರಮುಖ ಪಾತ್ರ ವಹಿಸುತ್ತವೆ.
ಸಂಪರ್ಕ ಸೌಲಭ್ಯ: ಕನೆಕ್ಟಿವಿಟಿ ವಿಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಆಯ್ಕೆಗಳನ್ನು ಕಾಣಬಹುದಾಗಿದೆ. ಇದರಲ್ಲಿ ಯುಎಸ್‌ಬಿ ಇಂಟರ್ಫೇಸ್ ಹೊಂದಿರುವ ಸ್ಮಾರ್ಟ್‌ಫೋನ್ ಗಳು ಲಭ್ಯ ಇವೆ. ಅಲ್ಲದೆ ಉತ್ತಮ ವೈ-ಫೈ ಆವೃತ್ತಿ, ಇತ್ತೀಚಿನ ಬ್ಲೂಟೂತ್ ಆವೃತ್ತಿ, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಸೌಲಭ್ಯ ಇರುವ ಫೋನ್‌ಗಳನ್ನು ಈ ವೇಳೆ ಖರೀದಿ ಮಾಡಬಹುದಾಗಿದೆ.


Click it and Unblock the Notifications








