Home
ಸುದ್ದಿಜಾಲ

ನಥಿಂಗ್ ಇಯರ್ (2) ಭಾರತದಲ್ಲಿ ಇಂದಿನಿಂದ ಸೇಲ್‌; ಬೆಲೆ ಎಷ್ಟು?

ನಥಿಂಗ್ ಸ್ಮಾರ್ಟ್‌ಫೋನ್‌ಗಳಷ್ಟೇ ನಥಿಂಗ್ ಇಯರ್ (2) ಇಯರ್‌ಬಡ್ಸ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಅದರಲ್ಲೂ ಭಾರತೀಯ ಮಾರುಕಟ್ಟೆಯಲ್ಲಿ ನಂಥಿಂಗ್ ಡಿವೈಸ್‌ಗಳಿಗೆ ವಿಶೇಷವಾದ ಬೇಡಿಕೆ ಇದ್ದು, ಇಂದು ನಥಿಂಗ್ ಇಯರ್ (2) ಇಯರ್‌ಬಡ್ಸ್‌ಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.

ಹೌದು, ಇಂದಿನಿಂದ ನಥಿಂಗ್ ಇಯರ್ (2) ಸೀಮಿತ ಅವಧಿಯ ಸೇಲ್‌ ಆರಂಭ ಆಗಲಿದೆ. ಈ ಎರಡನೇ ತಲೆಮಾರಿನ ಇಯರ್ (2) TWS ಇಯರ್‌ಬಡ್‌ಗಳನ್ನು ಎರಡು ದಿನಗಳ ಹಿಂದಷ್ಟೇ ಭಾರತ ಮತ್ತು ಇತರ ದೇಶದ ಮಾರುಕಟ್ಟೆಗಳಲ್ಲಿ ಅನಾವರಣ ಮಾಡಲಾಗಿತ್ತು. ಹಾಗಿದ್ರೆ, ಈ ಇಯರ್‌ಬಡ್ಸ್‌ನ ಪ್ರಮುಖ ಫೀಚರ್ಸ್‌, ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬ ಸವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನಥಿಂಗ್ ಇಯರ್ (2) ಭಾರತದಲ್ಲಿ ಇಂದಿನಿಂದ ಸೇಲ್‌; ಬೆಲೆ ಎಷ್ಟು?

ನಥಿಂಗ್ ಇಯರ್ (2) ಶೈಲಿ: ಈ ಬಡ್ಸ್‌ಗಳು ನಥಿಂಗ್‌ನ ಸಾಂಪ್ರದಾಯಿಕ ಟ್ರಾನ್ಸ್ಪರೆಂಟ್ ವಿನ್ಯಾಸವನ್ನು ಹೊಂದಿದ್ದು, ಈ ಹಿಂದಿನ ಆವೃತ್ತಿಯ ಬಡ್ಸ್‌ಗಳಿಗಿಂತ ಕೊಂಚ ಭಿನ್ನ ಫೀಚರ್ಸ್‌ ಹಾಗೂ ಶೈಲಿ ಪಡೆದುಕೊಂಡಿವೆ. ಹಾಗೆಯೇ ಡ್ಯುಯಲ್-ಚೇಂಬರ್ ವಿನ್ಯಾಸವನ್ನು ಪಡೆದುಕೊಂಡಿರುವುದರಿಂದ ನಿಮ್ಮ ಕಿವಿಗೆ ಯಾವುದೇ ಸಮಸ್ಯೆ ಉಂಟು ಮಾಡದೆ ಬಳಕೆ ಮಾಡಿಕೊಳ್ಳುವಲ್ಲಿ ಅನುಕೂಲ ಮಾಡಿಕೊಡುತ್ತವೆ.

ನಥಿಂಗ್ ಇಯರ್ (2) ಪ್ರಮುಖ ಫೀಚರ್ಸ್‌: ಈ ಇಯರ್‌ಬಡ್ಸ್‌ ಸುಧಾರಿತ 11.6 ಎಂಎಂ ಕಸ್ಟಮ್ ಡ್ರೈವರ್‌,ಸ್ಮಾರ್ಟ್ ಆಕ್ಟಿವ್ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ನೊಂದಿಗೆ 40 dB ವರೆಗೆ ಶಬ್ದ ಕಡಿತವನ್ನು ನೀಡುತ್ತದೆ. ಜೊತೆಗೆ ಸುಧಾರಿತ ವಿಂಡ್ ಪ್ರೂಫ್ ಮತ್ತು ಕ್ರೌಡ್-ಪ್ರೂಫ್ ಕ್ಲಿಯರ್ ವಾಯ್ಸ್ ಟೆಕ್ನಾಲಜಿಯನ್ನು ಈ ಬಡ್ಸ್‌ಗಳು ಪಡೆದುಕೊಂಡಿವೆ.

ಇದಿಷ್ಟೇ ಅಲ್ಲದೆ ಈ ಬಡ್ಸ್‌ಗಳು AI ನಾಯ್ಸ್‌ ರೆಡ್ಯೂಕ್ಷನ್ ಅಲ್ಗಾರಿದಮ್ ಸೌಲಭ್ಯವನ್ನೂ ಪಡೆದುಕೊಂಡಿದ್ದು, ನೀವು ಇವುಗಳನ್ನು ಕಿವಿಯಲ್ಲಿ ಇರಿಸಿಕೊಂಡಾಗ ಅತ್ಯುತ್ತಮವಾದ ಅನುಭವವನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಇವು 20 ಮಿಲಿಯನ್ ಸೌಂಡ್ ಮಾಡ್ಯುಲ್‌ಗಳನ್ನು ಫಿಲ್ಟರ್ ಮಾಡಲಿವೆ ಎಂಬುದು ಮತ್ತಷ್ಟು ವಿಶೇಷ.

ನಥಿಂಗ್ ಇಯರ್ (2) ಭಾರತದಲ್ಲಿ ಇಂದಿನಿಂದ ಸೇಲ್‌; ಬೆಲೆ ಎಷ್ಟು?

ಈ ನಥಿಂಗ್ ಇಯರ್ (2) ಹೈ-ರೆಸ್ ಆಡಿಯೋ, LHDC 5.0 ಕೊಡೆಕ್‌ಗಳು ಮತ್ತು ಕಡಿಮೆ ಲ್ಯಾಗ್ ಮೋಡ್‌ನೊಂದಿಗೆ ಪ್ಯಾಕ್‌ ಆಗಿದ್ದು, ಇದರೊಂದಿಗೆ ನಥಿಂಗ್ ಎಕ್ಸ್ ಆಪ್‌ ಮೂಲಕ ಶ್ರವಣ ಪರೀಕ್ಷೆಯನ್ನು ಪೂರ್ಣಗೊಳಿಸಲಿದ್ದು, ಇದರಿಂದ ನಿಮ್ಮ ನೆಚ್ಚಿನ ವೈಯಕ್ತಿಕ ಸೌಂಡ್‌ ಪ್ರೊಫೈಲ್ ಅನ್ನು ಕ್ರಿಯೇಟ್‌ ಮಾಡಿಕೊಳ್ಳಬಹುದು. ಹಾಗೆಯೇ ಪ್ರೊಫೈಲ್ ಅನ್ನು ರಚಿಸಿದ ಬಳಿಕ ನಥಿಂಗ್ ಇಯರ್ (2) ಸೂಕ್ತ ಧ್ವನಿ ಗುಣಮಟ್ಟಕ್ಕಾಗಿ ನೈಜ ಸಮಯದಲ್ಲಿ ಈಕ್ವಲೈಜರ್ ಸೆಟ್ಟಿಂಗ್‌ಗಳನ್ನು ಸರಿಹೊಂದಿಸುತ್ತದೆ.

ಹಾಗೆಯೇ ಗೂಗಲ್ ಫಾಸ್ಟ್ ಪೇರ್ ಮತ್ತು ಡ್ಯುಯಲ್ ಸಂಪರ್ಕ ಬೆಂಬಲವನ್ನು ಈ ನಥಿಂಗ್ ಇಯರ್ (2) ಬಳಕೆದಾರರಿಗೆ ಎರಡು ಡಿವೈಸ್‌ಗಳಿಗೆ ಏಕಕಾಲದಲ್ಲಿ ಸಂಪರ್ಕಿಸಲು ಮತ್ತು ಸಂಗೀತವನ್ನು ಪ್ಲೇ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ಈ ಇಯರ್‌ಬಡ್ಸ್‌ ಮೂಲಕ ಮತ್ತಷ್ಟು ಹೊಸ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ನಥಿಂಗ್ ಇಯರ್ (2) ಭಾರತದಲ್ಲಿ ಇಂದಿನಿಂದ ಸೇಲ್‌; ಬೆಲೆ ಎಷ್ಟು?

ನಥಿಂಗ್ ಇಯರ್ (2) ಬ್ಯಾಟರಿ ಸಾಮರ್ಥ್ಯ: ಈ ಇಯರ್‌ಬಡ್ಸ್‌ 485mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಪ್ರತಿ ಇಯರ್‌ಬಡ್ 33mAh ಸೆಲ್‌ನಿಂದ ಪ್ಯಾಕ್‌ ಆಗಿವೆ. ಹಾಗೆಯೇ ಒಂದು ಪೂರ್ಣ ಚಾರ್ಜ್‌ನಲ್ಲಿ ಇವುಗಳನ್ನು 6.3 ಗಂಟೆಗಳ ವರೆಗೆ ಬಳಕೆ ಮಾಡಿಕೊಳ್ಳಬಹುದು ಎಂದು ನಥಿಂಗ್‌ ಸಂಸ್ಥೆ ಮಾಹಿತಿ ನೀಡಿದೆ.

ನಥಿಂಗ್ ಇಯರ್ (2) ಬೆಲೆ ಹಾಗೂ ಲಭ್ಯತೆ: ಭಾರತದಲ್ಲಿ ಇಂದಿನಿಂದ ಈ ನಥಿಂಗ್ ಇಯರ್ (2) ಮಾರಾಟಕ್ಕೆ ಮುಕ್ತವಾಗುತ್ತಿದ್ದು, ಇದಕ್ಕೆ 9,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ನೀವು ಫ್ಲಿಪ್‌ಕಾರ್ಟ್, ಮೈಂತ್ರಾ ಸೇರಿದಂತೆ ಇತರೆ ಆಯ್ದ ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ಖರೀದಿ ಮಾಡಬಹುದಾಗಿದೆ.

Best Mobiles in India

English summary
Nothing Year (2) is going on sale for a limited period from today. These second generation Ear (2) TWS earbuds were unveiled in India and other markets just two days ago.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+