Just In
Don't Miss
- News
Breaking; ಫೆ. 26ಕ್ಕೆ ದಾವಣಗೆರೆಗೆ ಕೇಜ್ರಿವಾಲ್ ಭೇಟಿ
- Sports
ಮತ್ತೆ ವಿವಾದದ ಸುಳಿಯಲ್ಲಿ ವಿನೋದ್ ಕಾಂಬ್ಳಿ: ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪ
- Movies
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂದು ನಥಿಂಗ್ ಇಯರ್ ಸ್ಟಿಕ್ ಸೇಲ್!..ಭರ್ಜರಿ ಇನ್‌ಸ್ಟಂಟ್ ಡಿಸ್ಕೌಂಟ್!
ಪ್ರಸ್ತುತ ಭಾರೀ ಸುದ್ದಿಯಲ್ಲಿರುವ ನಥಿಂಗ್ (Nothing) ಸಂಸ್ಥೆಯು ಇತ್ತೀಚಿಗಷ್ಟೆ ಭಾರತದಲ್ಲಿ ಬಿಡುಗಡೆ ಮಾಡಿರುವ ನಥಿಂಗ್ ಇಯರ್ ಸ್ಟಿಕ್ (Nothing Ear Stick) ಕೆಲವು ವಿಶೇಷತೆಗಳಿಂದ ಗ್ರಾಹಕರ ಗಮನ ಸೆಳೆದಿದೆ. ಈ ಡಿವೈಸ್ ಇಂದು ಮಧ್ಯಾಹ್ನ 12 ಗಂಟೆಗೆ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಗಳಾದ ಫ್ಲಿಪ್‌ಕಾರ್ಟ್ (Flipkart) ಮತ್ತು ಮೈಂತ್ರಾ (Myntra) ತಾಣಗಳ ಮೂಲಕ ಸೇಲ್ ಪ್ರಾರಂಭಿಸಲಿದೆ. ಭರ್ಜರಿ ಆಫರ್ ಕೂಡಾ ಸಿಗಲಿದೆ.

ಹೌದು, ನಥಿಂಗ್ ಸಂಸ್ಥೆಯು ನಥಿಂಗ್ ಇಯರ್ ಸ್ಟಿಕ್ (Nothing Ear Stick) ಸೇಲ್ ಇಂದು (ನ. 17) ಫ್ಲಿಪ್‌ಕಾರ್ಟ್ ಮತ್ತು ಮೈಂತ್ರಾ ಸೈಟ್‌ಗಳಲ್ಲಿ ಸೇಲ್ ಶುರುವಾಗಲಿದೆ. ಇನ್ನು ಈ ಡಿವೈಸ್ ಅನ್ನು ಖರೀದಿಸುವ ಗ್ರಾಹಕರಿಗೆ 1,000ರೂ. ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯವಾಗಲಿದೆ. ಅಂದಹಾಗೆ ಈ ಇನ್‌ಸ್ಟಂಟ್ ರಿಯಾಯಿತಿ ಕೊಡುಗೆಯು ಈಗಾಗಲೆ ನಥಿಂಗ್ ಉತ್ಪನ್ನ (ನಥಿಂಗ್ ಫೋನ್ 1 ಅಥವಾ ನಥಿಂಗ್ ಇಯರ್ 1) ಹೊಂದಿರುವ ಗ್ರಾಹಕರಿಗೆ ಮಾತ್ರ ಲಭ್ಯ.

ನಥಿಂಗ್ ಇಯರ್ ಸ್ಟಿಕ್ ಫೀಚರ್ಸ್ ಹೀಗಿವೆ:
ನಥಿಂಗ್ ಇಯರ್ ಸ್ಟಿಕ್ (Nothing Ear stick) ಇಯರ್‌ಬಡ್ಸ್ ಹೊಸ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಫ್ಲಿಪ್ ಓಪನಿಂಗ್‌ಗಿಂತ ಭಿನ್ನವಾಗಿ, ನಥಿಂಗ್ ಇಯರ್ ಸ್ಟಿಕ್ ಕೇಸ್ ಟ್ವಿಸ್ಟ್ ಓಪನಿಂಗ್‌ನೊಂದಿಗೆ ಬರುತ್ತದೆ. ಈ ಇಯರ್‌ಬಡ್‌ಗಳು ಪ್ರತಿಯೊಂದರಲ್ಲೂ ಮೂರು ಮೈಕ್ರೋಫೋನ್‌ಗಳನ್ನು ಒಳಗೊಂಡಿವೆ. ಇದರಲ್ಲಿ ಒಂದು ವಾಯಿಸ್ ಅನ್ನು ಸೆರೆಹಿಡಿಯಲು, ಇನ್ನೊಂದು ಕರೆಗಳ ಸಮಯದಲ್ಲಿ ಬ್ಯಾಕ್‌ಗ್ರೌಂಡ್ ನಾಯ್ಸ್ ಕ್ಯಾನ್ಸಲ್ ಮಾಡಲಿದೆ. ಮೂರನೇಯದು ಇಯರ್‌ಬಡ್‌ನೊಳಗೆ ಇಯರ್ ಕ್ಯಾನಲ್ ಗಾತ್ರವನ್ನು ಅಳೆಯುವುದಕ್ಕೆ ಸೂಕ್ತವಾಗಿದೆ.

ಇಯರ್‌ಬಡ್ಸ್‌ನ ಮೈಕ್ರೋಫೋನ್
ಇನ್ನು ಈ ಇಯರ್‌ಬಡ್ಸ್‌ನ ಮೈಕ್ರೋಫೋನ್‌ಗಳು ವಾಯ್ಸ್ ಕಾಲ್ ಸಮಯದಲ್ಲಿ ಗಾಳಿಯ ಶಬ್ದ ಮತ್ತು ಜನಸಂದಣಿಯ ಶಬ್ದವನ್ನು ಕೂಡ ಕೇಳದಂತೆ ಮಾಡಲಿದೆ ಎಂದು ನಥಿಂಗ್ ಕಂಪನಿ ಹೇಳಿಕೊಂಡಿದೆ. ಈ ಇಯರ್ ಸ್ಟಿಕ್ 'ಪ್ರೆಸ್ ಕಂಟ್ರೋಲ್' ಅನ್ನು ಒಳಗೊಂಡಿದ್ದು, ಒದ್ದೆ ಕೈಗಳಿಂದಲೂ ಕೂಡ ಕಾರ್ಯನಿರ್ವಹಿಸಲಿದೆ.

ನಥಿಂಗ್ ಇಯರ್ ಸ್ಟಿಕ್ ಇಯರ್‌ಬಡ್‌ಗಳು 12.6mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಧೂಳು, ನೀರು ಮತ್ತು ಬೆವರಿನಿಂದ ರಕ್ಷಿಸಲು IP54 ಪ್ರಮಾಣೀಕರಣವನ್ನು ಪಡೆದಿದೆ. ಈ ಇಯರ್‌ಬಡ್ಸ್ ಇನ್-ಇಯರ್ ಡಿಟೆಕ್ಷನ್ ಸೌಲಭ್ಯ ಅನ್ನು ಒಳಗೊಂಡಿವೆ.

ಇದಲ್ಲದೆ ನಥಿಂಗ್ ಇಯರ್ ಸ್ಟಿಕ್ ಬಳಕೆದಾರರಿಗೆ 7 ಗಂಟೆಗಳ ಪ್ಲೇ ಬ್ಯಾಕ್ ಟೈಂ ಒದಗಿಸಲಿದೆ. ಚಾರ್ಜಿಂಗ್ ಕೇಸ್‌ನಲ್ಲಿ 29 ಗಂಟೆಗಳ ಆಲಿಸುವ ಸಮಯವನ್ನು ನೀಡಲಿದ್ದು, 12 ಗಂಟೆಗಳ ವರೆಗೆ ಟಾಕ್ ಟೈಮ್ ಅನ್ನು ನೀಡುತ್ತದೆ. ಇದರ ಜೊತೆಗೆ ಚಾರ್ಜಿಂಗ್ ಕೇಸ್ USB ಟೈಪ್-C ಕೇಬಲ್ ಸಹ ಲಭ್ಯವಾಗಲಿದೆ. ಇದು AAC ಮತ್ತು SBC ಆಡಿಯೊ ಕೊಡೆಕ್‌ಗಳಿಗೆ ಬೆಂಬಲವನ್ನು ಈ ಸಾಧನವು ಒಳಗೊಂಡಿದೆ.

ನಥಿಂಗ್ ಇಯರ್ (ಸ್ಟಿಕ್) ಕೇಸ್ 87.1 × 29.8 × 29.8mm ಸುತ್ತಳತೆ ಹೊಂದಿದ್ದು, 46.3 ಗ್ರಾಂ ತೂಕ ಪಡೆದಿದೆ. ಅದೇ ರೀತಿ TWS ನ ಪ್ರತಿ ಇಯರ್‌ಬಡ್ 4.4ಗ್ರಾಂ ನಷ್ಟು ತೂಕ ಪಡೆದಿದ್ದು, ಹಾಗೆಯೇ 29.8 × 18.8 × 18.4mm ಸುತ್ತಳತೆಯನ್ನು ಹೊಂದಿದೆ. ನಥಿಂಗ್ ಇಯರ್ (ಸ್ಟಿಕ್) IP54 ರೇಟಿಂಗ್ ಸಹ ಪಡೆದಿದ್ದು, ನೀರು ಮತ್ತು ಧೂಳು-ನಿರೋಧಕವಾಗಿದೆ.

ಬೆಲೆ ಮತ್ತು ಲಭ್ಯತೆ
ನಥಿಂಗ್ ಇಯರ್ ಸ್ಟಿಕ್ (Nothing Ear stick) ಭಾರತದಲ್ಲಿ 8,499ರೂ. ಬೆಲೆಯನ್ನು ಪಡೆದಿದೆ. ಆದರೆ ನಥಿಂಗ್ ಉತ್ಪನ್ನ ಹೊಂದಿರುವ ಗ್ರಾಹಕರಿಗೆ 1000ರೂ. ರಿಯಾಯಿತಿ ಲಭ್ಯವಾಗಲಿದೆ. ಇನ್ನು ಈ ಡಿವೈಸ್ ಇದೇ ನವೆಂಬರ್ 17 (ಇಂದು) ರಂದು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಶುರು ಮಾಡಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470