ಇಯರ್ ಎಂಡ್‌ನಲ್ಲಿ ಸಿಗ್ತಾ ಇದೆ ಭರ್ಜರಿ ಆಫರ್! ಈ ಫೋನ್ ಅನ್ನು ಕೂಡಲೇ ಖರೀದಿಸಿ!
ನಥಿಂಗ್ ಫೋನ್ ಈ ವರ್ಷ ಟೆಕ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಡಿವೈಸ್ ಆಗಿದೆ. ಇದೇ ಸ್ಮಾರ್ಟ್‌ಫೋನ್ ಇದೀಗ ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್‌ನಲ್ಲಿ ಭಾರಿ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ ಅನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಆಫರ್‌ಗಳ ಮೂಲಕ 20,000ರೂ.ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಆದರೆ ಇದು ನೇರ ರಿಯಾಯಿತಿ ಮೂಲಕ ಲಭ್ಯವಾಗುವುದಿಲ್ಲ, ಬದಲಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗುವ ಎಲ್ಲಾ ಆಫರ್‌ಗಳನ್ನು ಸೇರಿಸಿದಾಗ ಈ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಹೌದು, ನಥಿಂಗ್ ಫೋನ್ ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್‌ನಲ್ಲಿ ಹಿಂದೆಂದಿಗಿಂತಲೂ ಉತ್ತಮವಾದ ಡಿಸ್ಕೌಂಟ್ ಅನ್ನು ಪಡೆದುಕೊಂಡಿದೆ. ಈ ಮೂಲಕ ನ್ಯೂ ಇಯರ್ ಟೈಂನಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕೆಂದು ಕೊಂಡವರಿಗೆ ಉತ್ತಮ ಅವಕಾಶ ನೀಡಿದೆ. ನೀವು ಫ್ಲಿಪ್‌ಕಾರ್ಟ್ ನೀಡಿರುವ ಎಲ್ಲಾ ಆಫರ್‌ಗಳನ್ನು ಒಟ್ಟು ಮಾಡಿದರೆ ಈ ಸ್ಮಾರ್ಟ್‌ಫೋನ್ ಮೌಲ್ಯ ಭಾರಿ ಕಡಿಮೆಯಾಗಲಿದೆ. ಹಾಗಾದ್ರೆ ನಥಿಂಗ್ ಫೋನ್ ಅನ್ನು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸೋದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಥಿಂಗ್ ಫೋನ್ ಪಡೆದುಕೊಂಡಿರುವ ಆಫರ್ ಏನು?
ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್ ಇಂದು ರಾತ್ರಿ 12 ಗಂಟೆಗೆ ಕೊನೆಯಾಗಲಿದೆ. ಈ ಅವಧಿಯಲ್ಲಿ ನಥಿಂಗ್ ಫೋನ್ (1) ಭಾರಿ ರಿಯಾಯಿತಿಯನ್ನು ಪಡೆದುಕೊಂಡಿದೆ. 32,999ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌ಫೋನ್ ಇದೀಗ 29,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದಲ್ಲದೆ ಫ್ಲಿಪ್‌ಕಾರ್ಟ್‌ನಲ್ಲಿರುವ ಎಲ್ಲಾ ಆಫರ್‌ಗಳನ್ನು ಒಟ್ಟುಗೂಡಿಸಿದರೆ ನಥಿಂಗ್ ಫೋನ್ (1) ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 20,000ರೂ. ಒಳಗಿನ ಬೆಲೆಯಲ್ಲಿ ಖರೀದಿಸಬಹುದು.

ಏನೆಲ್ಲಾ ಆಫರ್ ಲಭ್ಯ?
ನೀವು ಬ್ಯಾಂಕ್ ಆಫ್ ಬರೋಡಾ ಕಾರ್ಡ್ ಹೊಂದಿದ್ದರೆ, ನೀವು ಹೆಚ್ಚುವರಿಯಾಗಿ 2,000ರೂ. ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಫೆಡರಲ್ ಬ್ಯಾಂಕ್ ಕಾರ್ಡ್ ಬಳಸಿ ಸಾಧನವನ್ನು ಖರೀದಿಸಿದರೆ, 3000ರೂ. ಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಜೊತೆಗೆ ಎಕ್ಸ್‌ಚೇಂಜ್ ಆಫರ್‌ನಲ್ಲಿ 17,500ರೂ. ವರಗೆ(ಡಿವೈಸ್‌ನ ಗುಣಮಟ್ಟದ ಮೇಲೆ) ರಿಯಾಯಿತಿ ಸಿಗಲಿದೆ. ಇದೆಲ್ಲವನ್ನು ಒಟ್ಟುಗೂಡಿಸಿದರೆ ಈ ಸ್ಮಾರ್ಟ್‌ಫೋನ್ ನಿಮಗೆ ಕೇವಲ 16,000ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಫೀಚರ್ಸ್ ಹೇಗಿದೆ?
ನಥಿಂಗ್ ಫೋನ್ (1) 6.55 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹೊಂದಿದ್ದು, 1,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ HDR10+ ಬೆಂಬಲ, 402 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಹೊಂದಿದೆ.

ನಥಿಂಗ್ ಫೋನ್ (1) ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM + 128GB, 8GB RAM + 256 GB ಮತ್ತು 12GB RAM + 256 GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಮೂರು ವೇರಿಯೆಂಟ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ ಯಾವುದೇ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯವನ್ನು ಬೆಂಬಲಿಸುವುದಿಲ್ಲ ಎಂದು ನಥಿಂಗ್ ಕಂಪೆನಿ ಹೇಳಿದೆ.

ನಥಿಂಗ್ ಫೋನ್ (1) ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್ ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ JN1 ಸೆನ್ಸಾರ್ ಹೊಂದಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪನೋರಮಾ ನೈಟ್ ಮೋಡ್, ಪೋರ್ಟ್ರೇಟ್ ಮೋಡ್, ಸೀನ್ ಡಿಟೆಕ್ಷನ್, ಎಕ್ಸ್‌ಟ್ರೀಮ್ ನೈಟ್ ಮೋಡ್ ಮತ್ತು ಎಕ್ಸ್‌ಪರ್ಟ್ ಮೋಡ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೋನಿ IMX471 ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ನಥಿಂಗ್ ಫೋನ್ (1) ಸ್ಮಾರ್ಟ್‌ಫೋನ್ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ v5.2, NFC, GPS/A-GPS, ಗ್ಲೋನಾಸ್ ಮತ್ತು USB ಟೈಪ್-ಸಿ ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಒಳಗೊಂಡಿದೆ. ಇದು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಫೇಸ್ ಅನ್‌ಲಾಕ್ ಬೆಂಬಲವನ್ನು ಕೂಡ ಹೊಂದಿದೆ.


Click it and Unblock the Notifications