Home
ಸುದ್ದಿಜಾಲ

ಗುಡ್ ಫ್ರೈಡೆ ಆಫರ್‌; ನಥಿಂಗ್ ಫೋನ್ (1) ಗೆ ಎಂತಹ ಡಿಸ್ಕೌಂಟ್‌ ಗೊತ್ತಾ!?

ನಥಿಂಗ್ ಫೋನ್ (1) ಸ್ಮಾರ್ಟ್‌ಫೋನ್‌ ಖರೀದಿ ಮಾಡುವವರಿಗೆ ಇದು ಅತ್ಯುತ್ತಮ ಸಮಯ ಯಾಕೆಂದರೆ ಗುಡ್ ಫ್ರೈಡೆ ಹಿನ್ನೆಲೆ ಈ ಫೋನ್‌ಗೆ ಭರ್ಜರಿ ಆಫರ್‌ ಘೋಷಣೆ ಮಾಡಲಾಗಿದ್ದು, ಯಾರ್ಯಾರು ಅಗ್ಗದ ಬೆಲೆಗೆ ಉತ್ತಮ ಫೋನ್ ಖರೀದಿ ಮಾಡಬೇಕು ಎಂದಕೊಂಡಿದ್ದಾರೋ ಅವರಿಗೆ ಇದು ಬಹಳ ಸೂಕ್ತವಾಗಿದೆ.

ಹೌದು, ಸ್ಮಾರ್ಟ್‌ಫೋನ್‌ ವಲಯದಲ್ಲಿ ವಿಶೇಷವಾಗಿ ಗರುತಿಸಿಕೊಂಡಿರುವ ನಥಿಂಗ್ ಫೋನ್ (1) ಸ್ಮಾರ್ಟ್‌ಫೋನ್‌ ಅನ್ನು ನೀವು 1,500ರೂ. ಗಳಿಗೆ ಖರೀದಿ ಮಾಡಬಹುದು. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಆಧಾರಿತ ನಥಿಂಗ್ ಓಎಸ್ ಅನ್ನು ರನ್ ಮಾಡಲಿದ್ದು, 33W ವೇಗದ ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ. ಜೊತೆಗೆ 120Hz ರಿಫ್ರೆಶ್ ರೇಟ್‌ ಅನ್ನು ಸಹ ಹೊಂದಿದೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಫೋನ್‌ನ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ.

ಗುಡ್ ಫ್ರೈಡೆ ಆಫರ್‌; ನಥಿಂಗ್ ಫೋನ್ (1) ಗೆ ಎಂತಹ ಡಿಸ್ಕೌಂಟ್‌ ಗೊತ್ತಾ!?

ನಥಿಂಗ್ ಫೋನ್ (1) ಡಿಸ್‌ಪ್ಲೇ ವಿವರ: ಅಗ್ಗದ ದರದಲ್ಲಿ ಈ ಫೋನ್‌ ಖರೀದಿ ಮಾಡುವ ಮುನ್ನ ಇದು ಏನೆಲ್ಲಾ ಪ್ರಮುಖ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ ಎಂಬುದರ ಕಡೆ ಕಣ್ಣಾಯಿಸಿವುದು ಉತ್ತಮ. ಅದರಂತೆ ಈ ಫೋನ್ 6.55 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದುಕೊಂಡಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್‌ ಫೋನ್‌ನ ಪ್ರಮುಖ ಫೀಚರ್ಸ್‌ಗಳಲ್ಲಿ ಒಂದು. ಜೊತೆಗೆ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಆಯ್ಕೆಯನ್ನು ಪಡೆದುಕೊಂಡಿದೆ.

ನಥಿಂಗ್ ಫೋನ್ (1) ಪ್ರೊಸೆಸರ್‌ ಮಾಹಿತಿ: ಈ ವಿಶೇಷ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 778G+ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ ಆಧಾರಿತ ನಥಿಂಗ್ ಓಎಸ್ ಅನ್ನು ರನ್ ಮಾಡುತ್ತದೆ. ಜೊತೆಗೆ 12GB RAM ಹಾಗೂ 256GB ವರೆಗಿನ ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಈ ಸ್ಮಾರ್ಟ್‌ಫೋನ್‌ ಕಾಣಿಸಿಕೊಂಡಿದೆ.

ಗುಡ್ ಫ್ರೈಡೆ ಆಫರ್‌; ನಥಿಂಗ್ ಫೋನ್ (1) ಗೆ ಎಂತಹ ಡಿಸ್ಕೌಂಟ್‌ ಗೊತ್ತಾ!?

ನಥಿಂಗ್ ಫೋನ್ (1) ಕ್ಯಾಮೆರಾ ರಚನೆ: ಈ ಫೋನ್‌ ಪ್ರಮುಖವಾಗಿ ಇದರ ವಿನ್ಯಾಸದ ಹೊರತಾಗಿ ಕ್ಯಾಮೆರಾದಿಂದಲೂ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಯಾಕೆಂದರೆ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಸೆನ್ಸರ್‌ ಹಾಗೂ 50 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್ ಸೆನ್ಸರ್‌ ಆಯ್ಕೆ ಪಡೆದಿದ್ದು, ಸೆಲ್ಫಿ ಉದ್ದೇಶಕ್ಕಾಗಿ ಈ ಫೋನ್ 16 ಮೆಗಾಪಿಕ್ಸೆಲ್‌ ಸೆನ್ಸರ್‌ ಅನ್ನು ಹೊಂದಿದೆ.

ನಥಿಂಗ್ ಫೋನ್ (1) ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಫೋನ್ 4,500 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಇದು 33W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇನ್ನುಳಿದಂತೆ ಈ ಫೋನ್ ಸ್ಟೀರಿಯೋ ಸ್ಪೀಕರ್‌ ಸೌಲಭ್ಯದೊಂದಿಗೆ ಉತ್ತಮವಾದ ಸೌಂಡ್‌ ನೀಡಲಿದ್ದು, ವೈ-ಫೈ 802.11 a/b/g/n/ac/6, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.2 ಹಾಗೂ ಯುಎಸ್‌ಬಿ ಟೈಪ್ ಸಿ ಪೋರ್ಟ್‌ ಆಯ್ಕೆ ಪಡೆದುಕೊಂಡಿದೆ.

ನಥಿಂಗ್ ಫೋನ್ (1) ಆಫರ್‌ ಬೆಲೆ ಹಾಗೂ ಲಭ್ಯತೆ: ಈ ಫೋನ್‌ನ ಪ್ರಮುಖ ವಿಷಯಕ್ಕೆ ಬರುವುದಾದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ 8,000ರೂ. ಗಳ ರಿಯಾಯಿತಿ ಲಭ್ಯವಾಗುತ್ತಿದ್ದು, ಈ ಮೂಲಕ ನೀವು 29,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್ ಸಹ ಪಡೆದುಕೊಳ್ಳಬಹುದು.

ಗುಡ್ ಫ್ರೈಡೆ ಆಫರ್‌; ನಥಿಂಗ್ ಫೋನ್ (1) ಗೆ ಎಂತಹ ಡಿಸ್ಕೌಂಟ್‌ ಗೊತ್ತಾ!?

ಇನ್ನು 5% ಕ್ಯಾಶ್‌ಬ್ಯಾಕ್ ಪಡೆದಾಗಿಯೂ ಇನ್ನೂ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದುಕೊಂಡರೆ 28,500 ರೂ. ಬೆಲೆಗೆ ಇಳಿಯುವ ಈ ಫೋನ್‌ ಅನ್ನು 1,500ರೂ. ಗಳಿಗೆ ಕೊಂಡುಕೊಳ್ಳಬಹುದು. ಇದಕ್ಕಾಗಿ ನೀವು ವಿನಿಮಯ ಆಫರ್‌ ಸೌಲಭ್ಯ ಉಪಯೋಗಿಸಿಕೊಳ್ಳಿ. ಅಂದರೆ ನಿಮ್ಮ ಹಳೆಯ ಫೋನ್‌ ಉತ್ತಮವಾಗಿದ್ದು, ಹೊಸ ಫೋನ್‌ಗೆ ಅಪ್‌ಗ್ರೇಡ್ ಆಗಬೇಕು ಎಂದುಕೊಂಡಿದ್ದರೆ ಈ ಆಫರ್‌ನಲ್ಲಿ 27,000ರೂ. ವರೆಗೂ ರಿಯಾಯಿತಿ ಸಿಗಲಿದೆ.

Best Mobiles in India

English summary
Flipkart has announced a huge discount on Nothing Phone (1) smartphone. through which you can buy at a cheap price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+