Home
ಸುದ್ದಿಜಾಲ

ನಥಿಂಗ್ ಫೋನ್ (1) ಫೋನಿನಲ್ಲಿ ಏನುಂಟು, ಏನಿಲ್ಲ? ಇಲ್ಲಿದೆ ಕಂಪ್ಲಿಟ್‌ ಮಾಹಿತಿ!

ಮೊಬೈಲ್‌ ಲೋಕದಲ್ಲಿ ಸದ್ಯ ಭಾರೀ ಸದ್ದು ಮಾಡುತ್ತಿರುವ ನಥಿಂಗ್ ಫೋನ್ (1) - Nothing Phone (1) ಇದೇ ಜುಲೈ 12 ರಂದು ಮಾರುಕಟ್ಟೆಗೆ ಗ್ರ್ಯಾಂಡ್‌ ಎಂಟ್ರಿ ನೀಡಲು ಸಿದ್ಧವಾಗಿದೆ. ಆದರೆ ಬಿಡುಗಡೆ ಮುನ್ನವೇ ನಥಿಂಗ್ ಫೋನ್ (1) ಡಿಸೈನ್‌, ಲುಕ್, ಕ್ಯಾಮೆರಾ ಹಾಗೂ ಪ್ರೊಸೆಸರ್‌ ಸೇರಿದಂತೆ ಕೆಲವು ಫೀಚರ್ಸ್‌ಗಳ ಬಗ್ಗೆ ಕುತೂಹಲ ಹುಟ್ಟುಹಾಕಿದೆ. ಅದರ ಬೆನ್ನಲ್ಲೇ ಇದೀಗ ನಥಿಂಗ್ ಸಂಸ್ಥಾಪಕ ಕಾರ್ಲ್ ಪೀ ಫೋನ್ (1) ಪ್ರೊಸೆಸರ್‌ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.

ಇತ್ತೀಚಿನ

ಹೌದು, ಬಹುನಿರೀಕ್ಷಿತ ನಥಿಂಗ್ ಫೋನ್ (1) ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ ಪ್ರೊಸೆಸರ್‌ ನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ನಥಿಂಗ್ ಫೋನ್ (1) ನ ಪ್ರಮುಖ ಫೀಚರ್ಸ್‌ಗಳು ವೆಬ್‌ನಲ್ಲಿ ಕಾಣಿಸಿಕೊಂಡಿವೆ. ಇತ್ತೀಚಿನ ಲೀಕ್ ಮಾಹಿತಿ ಪ್ರಕಾರ, ನಥಿಂಗ್ ಫೋನ್ (1) ಫೋನ್‌ 50 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್‌ ಅನ್ನು ಒಳಗೊಂಡಿರಲಿದ್ದು, ಇದರೊಂದಿಗೆ 120Hz ರಿಫ್ರೇಶ್ ರೇಟ್ ಜೊತೆಗೆ OLED ಡಿಸ್‌ಪ್ಲೇ ಪ್ಯಾನೆಲ್ ಅನ್ನು ಹೊಂದಿರಲಿದೆ.

ನಥಿಂಗ್ ಫೋನ್ (1) ಫೋನಿನ ಲೀಕ್ ಫೀಚರ್ಸ್‌:

ನಥಿಂಗ್ ಫೋನ್ (1) ಫೋನಿನ ಲೀಕ್ ಫೀಚರ್ಸ್‌:

ನಥಿಂಗ್‌ನ ಮೊದಲ ಸ್ಮಾರ್ಟ್‌ಫೋನ್ ಪಂಚ್-ಹೋಲ್ ನಾಚ್ ಹೊಂದಿರಲಿದ್ದು, ಆಕರ್ಷಕ ಬೆಜೆಲ್‌ಗಳೊಂದಿಗೆ ಬರುತ್ತದೆ ಎಂದು ದೃಢಪಡಿಸಲಾಗಿದೆ. ಇತ್ತೀಚಿನ ಲೀಕ್ ಪ್ರಕಾರ ಮೊಬೈಲ್‌ 6.55 ಇಂಚಿನ OLED ಡಿಸ್‌ಪ್ಲೇ ಪ್ಯಾನೆಲ್ ಅನ್ನು ಬಳಗೊಂಡಿರಬಹುದು ಡಂದು ತಿಳಿಸುತ್ತದೆ. ಹಾಗೆಯೇ ಇದು 120Hz ರಿಫ್ರೇಶ್ ರೇಟ್ ಪಡೆದಿರುವ ಸಾಧ್ಯತೆಗಳಿವೆ. ಹಾಗೆಯೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನ ಸ್ಕ್ರೀನ್‌ನಿಂದ ಮುಚ್ಚಲಾಗುತ್ತದೆ.

ಮೆಗಾ

ನಥಿಂಗ್ ಫೋನ್ (1) ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿರುವ ಸಾಧ್ಯತೆಗಳಿವೆ. ಈ ಫೋನಿನ ಪ್ರಾಥಮಿಕ ಸಂವೇದಕವು f/1.8 ದ್ಯುತಿರಂಧ್ರದೊಂದಿಗೆ 50 ಮೆಗಾ ಪಿಕ್ಸಲ್‌ ಸೆನ್ಸಾರ್ ಹೊಂದಿರಲಿದೆ. ಹಾಗೆಯೇ 60fps ನಲ್ಲಿ 4k ವೀಡಿಯೊಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅದರೊಂದಿಗೆ ಅಲ್ಟ್ರಾ-ವೈಡ್-ಆಂಗಲ್ ಕಾರ್ಯವನ್ನು ತರಬಹುದಾದ ಮತ್ತೊಂದು ಸಂವೇದಕವು ಇದರೊಂದಿಗೆ ಇರಲಿದೆ.

ಆಂಡ್ರಾಯ್ಡ್

ನಥಿಂಗ್ ಫೋನ್ (1) ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ ಪ್ರೊಸೆಸರ್‌ ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ನಥಿಂಗ್ ಓಎಸ್‌ನೊಂದಿಗೆ ಪೂರ್ವ-ಲೋಡ್ ಆಗಿರಲಿದ್ದು, ಇದು ಆಂಡ್ರಾಯ್ಡ್ 12 ಅನ್ನು ಆಧರಿಸಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 8GB RAM ಮತ್ತು 128 GB ಯ ಸ್ಟೋರೇಜ್ ವೇರಿಯಂಟ್‌ ಆಯ್ಕೆಯಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ನಥಿಂಗ್ ಫೋನ್ (1) ಫ್ಲಾಟ್ ಎಡ್ಜ್ ವಿನ್ಯಾಸ ಮತ್ತು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟ ಲೋಹದ ಚಾಸಿಸ್ನೊಂದಿಗೆ ಬರುತ್ತದೆ. ಹ್ಯಾಂಡ್‌ಸೆಟ್ ಪಾರದರ್ಶಕ ವಿನ್ಯಾಸ ಭಾಷೆ ಮತ್ತು ಗ್ಲಾಸ್ ಬ್ಯಾಕ್ ಪ್ಯಾನೆಲ್ ಅನ್ನು ನೀಡುತ್ತದೆ ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಸಹ ಹೊಂದಿರುತ್ತದೆ.

ಸೇಲ್

ಇನ್ನು ನಥಿಂಗ್ ಫೋನ್ (Nothing Phone 1) ಇದೇ ಜುಲೈ 16 ರಂದು ಗ್ಲೋಬಲ್ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಹಾಗೆಯೇ ದೈತ್ಯ ಇ ಕಾಮರ್ಸ್ ತಾಣ ಫ್ಲಿಕ್‌ಕಾರ್ಟ್‌ನಲ್ಲಿ ಸೇಲ್ ಆರಂಭಿಸಲಿದ್ದು, ಈಗಾಗಲೇ ಪ್ರೀ ಬುಕಿಂಗ್ ಬಗ್ಗೆ ಮಾಹಿತಿ ಕಾಣಿಸಿದೆ. ನಥಿಂಗ್ ಫೋನ್ ಸಮ್‌ಥಿಂಗ್ (something) ಫೀಚರ್ಸ್‌ಗಳನ್ನು ಒಳಗೊಂಡಿದೆ. ಭಾರತದಲ್ಲಿ ನಥಿಂಗ್‌ ಫೋನ್‌ (1) ಪ್ರಿ ಆರ್ಡರ್‌ ಮಾಡುವುದಕ್ಕೆ ಪಾಸ್‌ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಹಾಗಾದ್ರೆ

ನಥಿಂಗ್ ಫೋನ್ ಅನ್ನು ಪ್ರಿ ಆರ್ಡರ್‌ ಮಾಡುವುದಕ್ಕೆ ಏನೆಲ್ಲಾ ಮಾಡಬೇಕು ಎನ್ನುವ ವಿವರಗಳನ್ನು ಟಿಪ್‌ಸ್ಟರ್‌ ಮುಕುಲ್‌ ಶರ್ಮಾ ಸೋರಿಕೆ ಮಾಡಿದ್ದಾರೆ. ಅಲ್ಲದೆ ಫೋನ್‌ ಬುಕ್‌ ಮಾಡುವಾಗ ಭದ್ರತಾ ಠೇವಣಿಯನ್ನು ಪಾವತಿಸಬೇಕು ಎನ್ನುವ ಅಂಶವನ್ನು ಕೂಡ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ನಥಿಂಗ್‌ ಫೋನ್‌ (1) ಅನ್ನು ನೀವು ಪ್ರಿ-ಆರ್ಡರ್ ಮಾಡಬೇಕಾದರೆ ಪ್ರಿ ಆರ್ಡರ್‌ ಪಾಸ್ ಬುಕ್ ಮಾಡುವುದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ನಥಿಂಗ್ ಫೋನ್ (1) ಪ್ರಿ-ಆರ್ಡರ್ ಪಾಸ್

ನಥಿಂಗ್ ಫೋನ್ (1) ಪ್ರಿ-ಆರ್ಡರ್ ಪಾಸ್

ಈಗಾಗಲೇ ಬಹಿರಂಗವಾಗಿರುವ ಮಾಹಿತಿ ಪ್ರಕಾರ ನಥಿಂಗ್ ಫೋನ್ (1) ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಲಾಂಚ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಜುಲೈ 12 ರಂದು ಬಿಡುಗಡೆಯಾಗಲಿದೆ. ಅದೇ ದಿನ ನಥಿಂಗ್ ಫೋನ್ (1) ಖರೀದಿಸಲು ಬಯಸುವ ಗ್ರಾಹಕರು ಫ್ಲಿಪ್‌ಕಾರ್ಟ್‌ಗೆ ಲಾಗ್‌ ಇನ್‌ ಮಾಡಿ, ನಥಿಂಗ್ ಫೋನ್ (1) ಮಾದರಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೆ ಪ್ರಿ-ಆರ್ಡರ್ ಪಾಸ್ ಪಡೆಯಲು ಭದ್ರತಾ ಠೇವಣಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಫ್ಲಿಪ್‌ಕಾರ್ಟ್‌

ಅಂದರೆ ನಥಿಂಗ್ ಫೋನ್ (1) ಅನ್ನು ಪ್ರಿ ಆರ್ಡರ್‌ ಮಾಡಲು ಬಯಸುವವರು ಮೊದಲಿಗೆ 2,000 ರೂಪಾಯಿಗಳನ್ನು ಭದ್ರತಾ ಠೇವಣಿಯಾಗಿ ಪಾವತಿಸಬೇಕಾಗುತ್ತದೆ. ಭದ್ರತಾ ಠೇವಣಿಯನ್ನು ಪಾವತಿಸುವ ಮೂಲಕ ಪ್ರಿ-ಆರ್ಡರ್ ಪಾಸ್ ಅನ್ನು ಖರೀದಿಸಬೇಕಾಗುತ್ತದೆ. ಇನ್ನು ಪ್ರಿ-ಆರ್ಡರ್‌ ಪಾಸ್‌ ಬುಕ್ಕಿಂಗ್‌ಗಾಗಿ ತೆರೆಯಲಾಗುವ ಫ್ಲಿಪ್‌ಕಾರ್ಟ್‌ ವಿಂಡೋ ಅದೇ ದಿನ 9:00PM ಕ್ಕೆ ತೆರೆಯುತ್ತದೆ. ಇದರ ಮೂಲಕ ನೀವು ನಥಿಂಗ್ ಫೋನ್ (1) ಅನ್ನು ಮುಂಗಡವಾಗಿ ಆರ್ಡರ್ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ನೀವು ಈ ಪಾಸ್ ಅನ್ನು ಪಡೆದುಕೊಳ್ಳಲು ವಿಫಲವಾದರೆ, ನಂತರದ ಹಂತದಲ್ಲಿ ನೀವು ನಥಿಂಗ್ ಫೋನ್ ಅನ್ನು ಪ್ರಿ ಆರ್ಡರ್ ಮಾಡಲು ಸಾಧ್ಯವಾಗುವುದಿಲ್ಲ.

ಮೊಬೈಲ್‌

ಇನ್ನು ನೀವು ನಥಿಂಗ್ ಫೋನ್ (1) ಖರೀದಿಸುವ ಮುನ್ನವೇ ಪ್ರಿ ಆರ್ಡರ್‌ಗಾಗಿ ಪಾವತಿಸುವ ಭದ್ರತಾ ಠೇವಣಿ ಹಣ ಫೋನ್‌ನ ಅಂತಿಮ ಬೆಲೆಯಿಂದ ಕಡಿತಗೊಳಿಸಲಾಗುವುದು ಎಂದು ಹೇಳಲಾಗಿದೆ. ಇದರ ಜೊತೆಗೆ, ಪ್ರಿ ಆರ್ಡರ್‌ ಪಾಸ್ ಅನ್ನು ಖರೀದಿಸು ಗ್ರಾಹಕರಿಗೆ ಕೆಲವು ವಿಶೇಷ ಬಹುಮಾನಗಳು ಕೂಡ ಲಭ್ಯವಾಗಲಿದೆ, ಇದರಲ್ಲಿ ಫ್ರೀಯಾಗಿ ಮೊಬೈಲ್‌ ಪಡೆದುಕೊಳ್ಳುವ ಅವಕಾಶವೂ ಕೂಡ ದೊರೆಯಲಿದೆ. ಅಂದರೆ ನಥಿಂಗ್ ಫೋನ್ (1) ಅನ್ನು ಖರೀದಿಸಲು ಬಯಸುವವರು ಪ್ರಿ ಆರ್ಡರ್‌ ಮಾಡುವಾಗ ಲಭ್ಯವಾಗುವ ಬಹುಮಾನಗಳಲ್ಲಿ ಈ ಸ್ಮಾರ್ಟ್‌ಫೋನ್‌ ಪ್ರೀಯಾಗಿ ದೊರೆಯುವ ಅವಕಾಶವನ್ನು ಸಹ ನೀಡಲಾಗಿದೆ.

Best Mobiles in India

English summary
Nothing Phone 1 Will Feature Snapdragon 778G+ Chipset, Carl Pei Confirms. details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+