Nothing phone 2: ಭಾರತದಲ್ಲಿ ನಥಿಂಗ್ ಫೋನ್ 2 ಬೆಲೆ ದಿಢೀರ್ ಇಳಿಕೆ; ಹೊಸ ಬೆಲೆ ಎಷ್ಟು ಗೊತ್ತಾ!?
ನಥಿಂಗ್ ಕಂಪೆನಿ ನಥಿಂಗ್ ಫೋನ್‌ಗಳ (Nothing phone) ಮೂಲಕ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸಂಚಲನವನ್ನೇ ಉಂಟು ಮಾಡಿದೆ. ಈ ಫೋನ್‌ಗಳ ಫೀಚರ್ಸ್‌ಗಿಂತ ಜನರು ಇವುಗಳ ಶೈಲಿಗೆ ಮಾರುಹೋಗಿದ್ದಾರೆ. ಅಷ್ಟರ ಮಟ್ಟಿಗೆ ಈ ಫೋನ್‌ಗಳು ಜನಪ್ರಿಯತೆ ಪಡೆದುಕೊಂಡಿವೆ. ಈ ಬೆಳವಣಿಗೆ ನಡುವೆ ನಥಿಂಗ್ ಫೋನ್ 2 ( Nothing phone 2) ಬೆಲೆ ಇಳಿಕೆ ಮಾಡಲಾಗಿದೆ.
ಹೌದು, ಒನ್‌ಪ್ಲಸ್, ಐಫೋನ್ ಹಾಗೂ ಸ್ಯಾಮ್‌ಸಂಗ್ ಸೇರಿದಂತೆ ಅನೇಕ ಟಾಪ್ ಬ್ರ್ಯಾಂಡ್‌ಗಳ ಫೋನ್‌ಗಳ ವಿರುದ್ಧ ಸೆಣಸಲು ನಥಿಂಗ್ ಫೋನ್ ಅನ್ನು ಲಾಂಚ್ ಮಾಡಲಾಗಿತ್ತು. ಅದರಂತೆ ಈ ಫೋನ್ ಮೇಲೆ ತಿಳಿಸಿದ ಬ್ರ್ಯಾಂಡ್‌ಗಳೊಂದಿಗೆ ತೀವ್ರ ಪೈಪೋಟಿ ನಡೆಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿವೆ. ಆದರೆ, ಈಗ ಮತ್ತಷ್ಟು ಜನರಿಗೆ ಹತ್ತಿರವಾಗುವ ಉದ್ದೇಶದಿಂದ ನಥಿಂಗ್ ತನ್ನ ನಥಿಂಗ್ ಫೋನ್ 2 ಬೆಲೆಯಲ್ಲಿ ಇಳಿಕೆ ಮಾಡಿದೆ. ಹಾಗಿದ್ರೆ, ಏನಿದು ಗುಡ್ ನ್ಯೂಸ್?, ಎಷ್ಟು ಬೆಲೆ ಇಳಿಕೆಯಾಗಿದೆ?, ಹೊಸ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ನಥಿಂಗ್ ಫೋನ್ 2 ಬೆಲೆ ಇಳಿಕೆ: 8GB RAM + 128GB ಇಂಟರ್ ಸ್ಟೋರೇಜ್ ಆಯ್ಕೆಯ ನಥಿಂಗ್ ಫೋನ್ 2 ಅನ್ನು ಮೊದಲು 44,999 ರೂ.ಗಳ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈಗ ಬೆಲೆ ಕಡಿಮೆ ಮಾಡಲಾಗಿದ್ದು, 39,999 ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಮೂಲಕ ನಥಿಂಗ್ ಫೋನ್ 2 ಸ್ಮಾರ್ಟ್‌ಫೋನ್ ಖರೀದಿ ಮಾಡುವವರಿಗೆ ಸಂತಸ ನೀಡಲಾಗಿದೆ.
ಇದರೊಂದಿಗೆ 12GB RAM + 256GB ಸ್ಟೋರೇಜ್ ಆಯ್ಕೆಯ ನಥಿಂಗ್ ಫೋನ್ 2 ಈ ಮೊದಲು 49,999 ರೂ.ಗಳ ಬೆಲೆಯನ್ನು ಹೊಂದಿತ್ತು. ಆದರೆ, ಈಗ ಅಧಿಕೃತವಾಗಿ ಬೆಲೆ ಇಳಿಕೆ ಕಂಡಿದ್ದು, ಈ ಮೂಲಕ ನೀವು 44,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ 12GB RAM + 512GB ಇಂಟರ್ ಸ್ಟೋರೇಜ್ ಆಯ್ಕೆ ಇರುವ ಫೋನ್ ಮೊದಲು 54,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿತ್ತು. ಆದರೆ, ಈಗ ಇದಕ್ಕೆ 49,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಪರಿಣಾಮ ಖರೀದಿ ಮಾಡುವವರು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ಅದಾಗ್ಯೂ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಅನ್ನು ಖರೀದಿ ಮಾಡಬಹುದು. ಹೇಗೆಂದರೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಾದ ಫ್ಲಿಪ್‌ಕಾರ್ಟ್ ಮತ್ತು ಕ್ರೋಮಾ ಸೈಟ್‌ಗಳಲ್ಲಿ ಬ್ಯಾಂಕ್ ಆಫರ್ ಹಾಗೂ ಕ್ಯಾಶ್‌ಬ್ಯಾಕ್ ಆಫರ್ ಆಯ್ಕೆ ನೀಡಲಾಗಿದೆ. ಇದರಿಂದ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಫೋನ್ ಪ್ರಮುಖ ಫೀಚರ್ಸ್ ಕಡೆ ಸ್ವಲ್ಪ ಕಣ್ಣಾಯಿಸೋಣ ಬನ್ನಿ.
ನಥಿಂಗ್ ಫೋನ್ 2 ಫೀಚರ್ಸ್: ಈ ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ+ (FHD+) OLED ಡಿಸ್‌ಪ್ಲೇ ಹೊಂದಿದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್, 120Hz ರಿಫ್ರೆಶ್ ರೇಟ್, 1600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿಕೊಂಡಿದೆ. ಇದರೊಂದಿಗೆ HDR10+ ಬೆಂಬಲ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸೇರಿದಂತೆ ವಿವಿಧ ಡಿಸ್‌ಪ್ಲೇ ಫೀಚರ್ಸ್ ಆಯ್ಕೆ ಇದರಲ್ಲಿದ್ದು, ಫೋನ್‌ನ ಹಿಂಭಾಗದ ಫಲಕವು ಪಾರದರ್ಶಕ ವಿನ್ಯಾಸ ಮತ್ತು ಎಲ್‌ಇಡಿ ಲೈಟ್ ಆಯ್ಕೆ ಪಡೆದಿದೆ.

ಈ ನಥಿಂಗ್ ಫೋನ್ 2 ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್‌ನ ನ ನಥಿಂಗ್ ಓಎಸ್ 2.0 ನಲ್ಲಿ ರನ್ ಆಗಲಿದೆ. ಜೊತೆಗೆ ಆಂಡ್ರಾಯ್ಡ್ ನವೀಕರಣಗಳು ಮತ್ತು ಭದ್ರತಾ ನವೀಕರಣದ ಆಯ್ಕೆಯನ್ನೂ ನೀಡಲಾಗಿದೆ. ಉಳಿದಂತೆ 8GB RAM ಹಾಗೂ 12GB RAM ಆಯ್ಕೆಯೊಂದಿಗೆ ನಾಲ್ಕು ಇಂಟರ್ ಸ್ಟೋರೇಜ್ ವೇರಿಯಂಟ್‌ನಲ್ಲಿ ಈ ಲಭ್ಯ ಇದೆ.
ಇದರೊಂದಿಗೆ ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ (ಸೋನಿ IMX890 ಸೆನ್ಸರ್) + 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸರ್ ನೊಂದಿಗೆ (ಸ್ಯಾಮ್‌ಸಂಗ್ JN1 ಸೆನ್ಸರ್) ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಇದರ ಜೊತೆಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಈ ಕ್ಯಾಮೆರಾ ಸೆನ್ಸರ್‌ಗಳು ಅತ್ಯುತ್ತಮವಾದ ಫೋಟೋಗಳನ್ನು ಸೆರೆಹಿಡಿಯಲಿವೆ.

ಈ ನಥಿಂಗ್ ಫೋನ್ 2 ಸ್ಮಾರ್ಟ್‌ಫೋನ್ 4,700mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 45W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದಲ್ಲದೆ 15W ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ಸಹ ಇದ್ದು, ಉಳಿದಂತೆ IP54 ರೇಟಿಂಗ್, ಸ್ಟೀರಿಯೋ ಸ್ಪೀಕರ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಆಯ್ಕೆ ಪಡೆದಿದ್ದು, ಅತ್ಯುತ್ತಮ ಫೋನ್ ಎನಿಸಿಕೊಂಡಿದೆ.


Click it and Unblock the Notifications








