Home
ಸುದ್ದಿಜಾಲ

ನಥಿಂಗ್ ಫೋನ್‌ (2) ಫೋನಿನ ಬೆಲೆ ಲೀಕ್‌!..ಮಾರುಕಟ್ಟೆಯಲ್ಲಿ ಭಾರೀ ಕುತೂಹಲ!

ಭಿನ್ನ ವಿನ್ಯಾಸದ ನಥಿಂಗ್ ಫೋನ್ (1) ಮೂಲಕ ಮೊಬೈಲ್‌ ಮಾರುಕಟ್ಟೆಯ ಗಮನ ಸೆಳೆದಿದ್ದ ನಥಿಂಗ್‌ ಸಂಸ್ಥೆಯು ಈಗ ಅದರ ಮುಂದಿನ ಆವೃತ್ತಿ ನಥಿಂಗ್ ಫೋನ್‌ (2) ಅನ್ನು ಬಿಡುಗಡೆ ಮಾಡುವ ಸೂಚನೆ ಹೊರಹಾಕಿದೆ. ಆದ್ರೆ, ಬಹುನಿರೀಕ್ಷಿತ ನಥಿಂಗ್ ಫೋನ್‌ (2) ಬಿಡುಗಡೆಗೆ ಮುನ್ನವೇ ಮಾರುಕಟ್ಟೆಯಲ್ಲಿ ಕುತೂಹಲ ಮೂಡಿಸಿದ್ದು, ಇದೀಗ ಈ ಫೋನಿನ ಪ್ರೈಸ್‌ ಮಾಹಿತಿ ಲೀಕ್‌ ಆಗಿದೆ.

ಹೌದು, ಮುಂದಿನ ವಾರದಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಹೇಳಲಾಗಿರುವ ನಥಿಂಗ್ ಫೋನ್‌ (2) 5G ಫೋನ್‌ ಬೆಲೆಯು ಸುಮಾರು 45,000ರೂ. ಗಳ ಒಳಗೆ ಇರಲಿದೆ ಎಂದು ಟಿಪ್‌ಸ್ಟಾರ್‌ ಯೋಗೇಶ್ ಬ್ರಾರ್ ಹೇಳಿದ್ದಾರೆ. ಹಾಗೆಯೇ ನಥಿಂಗ್ ಫೋನ್‌ (2) 5G ಫೋನ್‌ ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಮಾರಾಟ ಪ್ರಾರಂಭಿಸಲಿದೆ ಎಂದು ತಿಳಿದು ಬಂದಿದೆ.

ನಥಿಂಗ್ ಫೋನ್‌ (2) ಫೋನಿನ ಬೆಲೆ ಲೀಕ್‌!..ಮಾರುಕಟ್ಟೆಯಲ್ಲಿ ಭಾರೀ ಕುತೂಹಲ!

ಬರಲಿರುವ ನೂತನ ನಥಿಂಗ್‌ ಫೋನ್‌ ಗೂಗಲ್‌ ಪಿಕ್ಸಲ್‌ 7a ಮತ್ತು ಒನ್‌ಪ್ಲಸ್‌ 11R ಫೋನ್‌ಗಳಿಗೆ ಪೈಪೋಟಿ ನೀಡಲಿದೆ. ಅಂದಹಾಗೆ ನಥಿಂಗ್ ಫೋನ್ 2 ಫೋನಿನ ಫೀಚರ್ಸ್‌ ಬಗ್ಗೆ ನೋಡುವುದಾದರೆ ಈ ಫೋನ್‌ ಪೂರ್ಣ ಹೆಚ್‌ಡಿ+ ರೆಸಲ್ಯೂಶನ್‌ನೊಂದಿಗೆ ವಿಶಾಲ 6.7 ಇಂಚಿನ ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದೆ. ಹಾಗೆಯೇ ಇದು OLED ಪ್ಯಾನೆಲ್ ಅನ್ನು ಬಳಸುವ ಸಾಧ್ಯತೆಯಿದೆ. ಲೀಕ್ ಮಾಹಿತಿ ಪ್ರಕಾರ ಈ ಫೋನಿನ ಸ್ಕ್ರೀನ್‌ 120Hz ನಲ್ಲಿ ರಿಫ್ರೆಶ್ ರೇಟ್‌ ಆಗಿರಲಿದೆ ಎನ್ನಲಾಗಿದೆ.

ಹಾಗೆಯೇ ನಥಿಂಗ್ ಫೋನ್ 2 ಫೋನ್‌ ಆಂಡ್ರಾಯ್ಡ್ 13 ಆಧಾರಿತ ನಥಿಂಗ್ ಓಎಸ್ 2.0 ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್‌ 1 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಈ ಬಗ್ಗೆ ಕಂಪನಿಯು ಅಧಿಕೃತವಾಗಿ ಘೋಷಿಸಿದೆ. ಇದರೊಂದಿಗೆ ಈ ಫೋನ್‌ 3 ವರ್ಷಗಳ ಆಂಡ್ರಾಯ್ಡ್‌ ಓಎಸ್‌ ಅಪ್‌ಡೇಟ್‌ ಮತ್ತು 4 ವರ್ಷಗಳ ಭದ್ರತಾ ಅಪ್‌ಡೇಟ್‌ ಸ್ವೀಕರಿಸಲಿದೆ.

ಇನ್ನು ಈ ಫೋನಿನ ಕ್ಯಾಮರಾ ಸೆನ್ಸಾರ್‌ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ ಕೆಲವು ಲೀಕ್ ಮಾಹಿತಿ ಪ್ರಕಾರ ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸಪೋರ್ಟ್‌ ನೊಂದಿಗೆ ಹಿಂಭಾಗದಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗೆಯೇ ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಸಾಮರ್ಥ್ಯದ ಸೆನ್ಸಾರ್‌ ಒದಗಿಸುವ ಸಾಧ್ಯತೆಗಳು ಇವೆ.

ನಥಿಂಗ್ ಫೋನ್ (2) ಮೊಬೈಲ್‌ 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿರಲಿದೆ. ಇನ್ನು ಇದು ಎಷ್ಟು ವೇಗದ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಟಿಪ್‌ಸ್ಟರ್ ಮಾಹಿತಿ ಪ್ರಕಾರ ಇದು 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್‌ ಪಡೆದಿರಲಿದೆ ಎನ್ನಲಾಗಿದೆ.

ಜೊತೆಗೆ ಈ ಫೋನ್‌ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ ಇದು IP ರೇಟಿಂಗ್ ಸೌಲಭ್ಯ ಸಹ ಒಳಗೊಂಡಿರಲಿದೆ ಎನ್ನುವ ವದಂತಿಗಳಿವೆ. ಅಲ್ಲದೇ ಬಯೋಮೆಟ್ರಿಕ್ಸ್ ವಿಭಾಗದಲ್ಲಿ, ನಥಿಂಗ್ ಫೋನ್ 2 ಇನ್ ಡಿಸ್‌ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಪಡೆದಿರಲಿದೆ.

ಈ ಹಿಂದಿನ ನಥಿಂಗ್ ಫೋನ್ (1) ಮೊಬೈಲ್‌ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಫೋನಿನ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಇದು ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು,4500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ.

Best Mobiles in India

English summary
Nothing Phone 2 price in India leaked: check expected specifications details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+