Home
ಸುದ್ದಿಜಾಲ

ನಥಿಂಗ್ ಫೋನ್ (2) ಲಾಂಚ್‌ಗೆ ದಿನಗಣನೆ: ನಿರೀಕ್ಷಿತ ಫೀಚರ್ಸ್ ಏನು, ಬೆಲೆ ಎಷ್ಟು?

ನಥಿಂಗ್ ಸಂಸ್ಥೆಯು ತನ್ನ ವಿಭಿನ್ನ ಶೈಲಿಯ ಸ್ಮಾರ್ಟ್‌ ಡಿವೈಸ್‌ಗಳಿಗೆ ಹೆಸರಾಗಿದೆ. ಅದರಲ್ಲೂ ಮೊನ್ನೆಯಷ್ಟೇ ಹೊಸ ನಥಿಂಗ್ ಇಯರ್ 2 ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಿ ಭಾರೀ ಸಂಚಲನ ಉಂಟು ಮಾಡಿದೆ. ಇದರ ನಡುವೆ ಈಗ ನಥಿಂಗ್‌ಫೋನ್ (2 ) ಬಗ್ಗೆ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಹುಟ್ಟಿದೆ.

ಹೌದು, ನಥಿಂಗ್ ತನ್ನ ಮೊದಲ ಫೋನ್ ಆದ ನಥಿಂಗ್ ಫೋನ್ (1) ಕಳೆದ ವರ್ಷ ಲಾಂಚ್‌ ಮಾಡಿದ್ದು, ಆ ಫೋನ್‌ನ ಶೈಲಿಗೆ ಬಹುಪಾಲು ಮಂದಿ ಫಿದಾ ಆಗಿದ್ದಾರೆ. ಅದರಂತೆ ಇದರ ಮುಂದುವರಿದ ಸರಣಿಯಾಗಿ ನಥಿಂಗ್ ಫೋನ್ (2) (Nothing Phone 2) ಅನ್ನು ಲಾಂಚ್ ಮಡಲಾಗುತ್ತಿದ್ದು, ಈಗಾಗಲೇ ಇದು ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಹಾಗಿದ್ರೆ, ಲೀಕ್‌ ಆದ ಮಾಹಿತಿ ಪ್ರಕಾರ ಇದರ ಫೀಚರ್ಸ್ ಹಾಗೂ ಇನ್ನಿತರೆ ಪ್ರಮುಖ ವಿವರವನ್ನು ಗಮನಿಸೋಣ ಬನ್ನಿ.

ನಥಿಂಗ್ ಫೋನ್ (2) ಲಾಂಚ್‌ಗೆ ದಿನಗಣನೆ: ನಿರೀಕ್ಷಿತ ಫೀಚರ್ಸ್ ಏನು, ಬೆಲೆ ಎಷ್ಟು?

ಮುಂಬರುವ ನಥಿಂಗ್ ಸ್ಮಾರ್ಟ್‌ಫೋನ್ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನಿಂದ ಪ್ರಮಾಣೀಕರಣವನ್ನು ಪಡೆದಿದೆ ಎಂದು ತಿಳಿದುಬಂದಿದ್ದು, ಈ ಮೂಲಕ AIN065 ಮಾದರಿ ಸಂಖ್ಯೆ ಹೊಂದಿರಲಿದೆ. ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಈ ಸ್ಮಾರ್ಟ್‌ಫೋನ್‌ ಲಾಂಚ್ ಆಗಲಿದೆ ಎನ್ನಲಾಗಿದ್ದು, ಲೀಕ್‌ ಆದ ಮಾಹಿತಿಯಂತೆ ಈ ಫೋನ್ ಏನೆಲ್ಲಾ ಫೀಚರ್ಸ್‌ ಪಡೆದಿದೆ ತಿಳಿಯೋಣ.

ನಥಿಂಗ್ ಫೋನ್ (2) ಫೀಚರ್ಸ್‌ ವಿವರ: ಈ ಮುಂಬರುವ ಸ್ಮಾರ್ಟ್‌ಫೋನ್ 6.67 ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದ್ದು, ಇದು 120Hz ರಿಫ್ರೆಶ್ ರೇಟ್‌ ನೀಡಲಿದೆ ಎಂದು ತಿಳಿದುಬಂದಿದೆ. ಆದರೆ, ಬ್ರೈಟ್‌ನೆಸ್‌ ವಿವರ ಹಾಗೂ ಫಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಸೇರಿದಂತೆ ಇನ್ನಿತರೆ ವಿವರ ತಿಳಿದುಬಂದಿಲ್ಲ.

ನಥಿಂಗ್ ಫೋನ್ (2) ಯಾವ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ?: ನಥಿಂಗ್ ಫೋನ್ (2) ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ನಂಬಲಾಗಿದ್ದು, 12GB RAM ಹಾಗೂ 256GB ಇಂಟರ್ನಲ್ ಸ್ಟೋರೇಜ್ ಮೂಲಕ ಇದು ಕಾಣಿಸಿಕೊಳ್ಳಲಿದೆ.

ನಥಿಂಗ್ ಫೋನ್ (2) ಲಾಂಚ್‌ಗೆ ದಿನಗಣನೆ: ನಿರೀಕ್ಷಿತ ಫೀಚರ್ಸ್ ಏನು, ಬೆಲೆ ಎಷ್ಟು?

ನಥಿಂಗ್ ಫೋನ್ (2) ಕ್ಯಾಮೆರಾ ಸಾಮರ್ಥ್ಯ ಏನು?: ಫೋನ್ (2) ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ 50 MP + 50 MP + 50 MP ನ ಟ್ರಿಪಲ್‌ ಕ್ಯಾಮೆರಾ ರಚನೆ ಹೊಂದಿರಲಿದೆ ಎಂದು ಹೇಳಲಾಗುತ್ತಿದ್ದು, ಅದರಂತೆ ಸೆಲ್ಪಿ ಉದ್ದೇಶಕ್ಕಾಗಿ 32 MP ಕ್ಯಾಮೆರಾ ಆಯ್ಕೆ ಪಡೆದುಕೊಳ್ಳಲಿದೆ ಎನ್ನುವ ವದಂತಿಗಳಿವೆ.

ನಥಿಂಗ್ ಫೋನ್ (2) ಬ್ಯಾಟರಿ ಸಾಮರ್ಥ್ಯ: ಈ ಫೋನ್ 4700 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರಲಿದ್ದು, ಫಾಸ್ಟ್‌ ಚಾರ್ಜಿಂಗ್‌ ಬೆಂಬಲ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ ಚಾರ್ಜಿಂಗ್‌ ಉದ್ದೇಶಕ್ಕೆ ಈ ಫೋನ್ ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಅನ್ನು ಹೊಂದಿರಲಿದೆ ಎಂದು ನಂಬಲಾಗಿದೆ.

ನಥಿಂಗ್ ಫೋನ್ (2) ಬೆಲೆ ಎಷ್ಟಿರಬಹುದು?: ಲೀಕ್‌ ಮಾಹಿತಿ ಪ್ರಕಾರ ಈ ಫೋನ್‌ 40 ಸಾವಿರ ರೂ. ಗಳ ಆಸುಪಾಸಿನಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಅಂತೆಯೇ ಈ ಮೊದಲು ಲಾಂಚ್‌ ಆಗಿದ್ದ ನಥಿಂಗ್ ಫೋನ್ (1) ಫೋನ್‌ಗೆ 30,499 ರೂ. ಗಳನ್ನು ನಿಗದಿ ಮಾಡಲಾಗಿತ್ತು. ಹಾಗೆಯೇ ಭಾರತದಲ್ಲಿ ಈ ಫೋನ್‌ ಜುಲೈನಲ್ಲಿ ಲಾಂಚ್‌ ಆಗುವ ನಿರೀಕ್ಷೆ ಇದೆ.

ನಥಿಂಗ್ ಫೋನ್ (2) ಲಾಂಚ್‌ಗೆ ದಿನಗಣನೆ: ನಿರೀಕ್ಷಿತ ಫೀಚರ್ಸ್ ಏನು, ಬೆಲೆ ಎಷ್ಟು?

ನಥಿಂಗ್ ಇಯರ್ (2) ಲಾಂಚ್ : ಕೆಲವು ದಿನಗಳ ಹಿಂದೆ ನಥಿಂಗ್ ವಾಯರ್‌ಲೆಸ್‌ ಇಯರ್‌ಬಡ್‌ಗಳನ್ನು ಲಾಂಚ್‌ ಮಾಡಿದ್ದು, ಇದು ಭಾರತದಲ್ಲಿ 9,999 ರೂ. ಗಳ ಬೆಲೆ ಹೊಂದಿದೆ. ಈ ಬಡ್ಸ್ 11 ಎಂಎಂ ಕಸ್ಟಮ್ ಡ್ರೈವರ್ ಅನ್ನು ಒಳಗೊಂಡಿದ್ದು, ಅತ್ಯುತ್ತಮ ಬೇಸ್‌ ನೀಡಲಿವೆ. ಜೊತೆಗೆ ಡ್ಯುಯಲ್ ಕನೆಕ್ಷನ್ ಅನ್ನು ಸಹ ಹೊಂದಿದೆ.

Best Mobiles in India

English summary
Nothing Phone (2) smartphone has received certification from Bureau of Indian Standards (BIS)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+