Home
ಸುದ್ದಿಜಾಲ

ನಾಳೆ ಈ ಫೋನ್‌ ಲಾಂಚ್‌!..ಇದರ ಡಿಸೈನ್‌ಗೆ ನೀವು ಅಚ್ಚರಿ ಆಗೋದು ಫಿಕ್ಸ್‌!

ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ನಥಿಂಗ್ ಫೋನ್ (2a) ಮೊಬೈಲ್‌ ಅಧಿಕೃತವಾಗಿ ನಾಳೆ (ಮಾರ್ಚ್ 5 ರಂದು) ಬಿಡುಗಡೆ ಆಗಲಿದೆ. ಈ ಸ್ಮಾರ್ಟ್‌ಫೋನಿನ ಕೆಲವು ಲೀಕ್‌ ಫೀಚರ್ಸ್‌ಗಳು ಮೊಬೈಲ್‌ ಪ್ರಿಯರ ಗಮನ ಸೆಳೆದಿವೆ. ಈ ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 7200SoC ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡುವುದು ಕನ್ಫರ್ಮ್‌ ಎನ್ನಲಾಗಿದೆ.

ಹೌದು, ಜನಪ್ರಿಯ ನಥಿಂಗ್ ಸಂಸ್ಥೆಯ ನಥಿಂಗ್ ಫೋನ್ (2a) ಮೊಬೈಲ್‌ ಮಾರ್ಚ್ 5 ರಂದು ಸಂಜೆ 5 ಗಂಟೆಗೆ ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ಫೋನಿನ ಲಾಂಚ್‌ ಬಗ್ಗೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣ ಈಗಾಗಲೇ ಮೈಕ್ರೋಸೈಟ್‌ ಅನ್ನು ಕೂಡಾ ಲೈವ್‌ ಮಾಡಿದೆ.

ನಾಳೆ ಈ ಫೋನ್‌ ಲಾಂಚ್‌!..ಇದರ ಡಿಸೈನ್‌ಗೆ ನೀವು ಅಚ್ಚರಿ ಆಗೋದು ಫಿಕ್ಸ್‌!

ವಿಶೇಷವಾಗಿ ನಥಿಂಗ್ ಫೋನ್ (2a) ಮೊಬೈಲ್‌ ಡಿವೈಸ್‌ ಸಾಕಷ್ಟು ಕುತೂಹಲ ಮೂಡಿಸಿದ್ದು, ಹಾಗೆಯೇ ಈ ಬಾರಿ ಕ್ಯಾಮೆರಾ ಅಪ್‌ಗ್ರೇಡ್ ಅನ್ನು ಮಾಡಬಹುದು ಎಂಬ ಸೂಚನೆ ಇದೆ. ಇನ್ನುಳಿದಂತೆ ನಥಿಂಗ್ ಫೋನ್ (2a) ಫೋನಿನ ನಿರೀಕ್ಷಿತ ಫೀಚರ್ಸ್‌ಗಳು ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ನಥಿಂಗ್ ಫೋನ್ (2a) ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಮೊಬೈಲ್ ವಿನ್ಯಾಸದ ಥೀಮ್ ಅನ್ನು ಗಮನಿಸಿದರೆ ಇದು ಬಿಗ್‌ ಬ್ಯಾಟರಿ ಜೊತೆಗೆ ಬರಲಿದೆ ಎಂದು ಹೇಳಲಾಗಿದೆ.

ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 7200SoC ಪ್ರೊಸೆಸರ್‌ನೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ, ಈ ಫೋನ್ ಮಧ್ಯದಲ್ಲಿ ಇರಿಸಲಾದ ಹಿಂಬದಿಯ ಕ್ಯಾಮೆರಾ ರಚನೆ ಅನ್ನು ಪಡೆದಿರಲಿವಹುದು ಎಂದು ಅಂದಾಜಿಸಲಾಗಿದೆ.

ಇದಲ್ಲದೆ ಮುಂಬರುವ MWC 2024 ನಲ್ಲಿ ನಥಿಂಗ್ ಫೋನ್ (2a) ಅನ್ನು ಸಹ ಪ್ರದರ್ಶಿಸುವ ನಿರೀಕ್ಷೆಯಿದೆ. ಗ್ಲೊಬಲ್‌ ಈವೆಂಟ್‌ನಲ್ಲಿ ಈ ಫೋನ್‌ನ ಲುಕ್‌ ಅನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ಬಿಡುಗಡೆಯ ದಿನಾಂಕವು ಬಹಿರಂಗವಾಗಿರುವುದರಿಂದ, ಹೆಚ್ಚಿನ ಅಧಿಕೃತ ವಿವರಗಳು ಶೀಘ್ರದಲ್ಲೇ ಬರಲಿವೆ ಎಂದು ನಾವು ನಿರೀಕ್ಷಿಸುತ್ತೇವೆ.

ಇನ್ನು ಕಳೆದ ವರ್ಷ ನಥಿಂಗ್ ಫೋನ್ 2 ಬಿಡುಗಡೆ ಆಗಿತ್ತು. ಈ ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LTPO OLED ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇ 1,080x2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಸ್ನಾಪ್‌ಡ್ರಾಗನ್ 8+ ಜೆನ್‌ 1 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 13 ಆಧಾರಿತ ನಥಿಂಗ್ ಓಎಸ್ 2.0 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕೆಲಸ ನಿರ್ವಹಿಸಲಿದೆ.

ನಥಿಂಗ್ ಫೋನ್ 2 ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಅಲ್ಟ್ರಾ ವೈಡ್‌ ಆಂಗಲ್‌ ಲೆನ್ಸ್‌ ಅನ್ನು ಒಳಗೊಂಡಿದೆ.

ಇದಲ್ಲದೆ ಈ ಮೊಬೈಲ್‌ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಕ್ಯಾಮೆರಾ 60fps ನಲ್ಲಿ 4K, 30 ಅಥವಾ 60fps ನಲ್ಲಿ 1080p ಮತ್ತು 4K ಮತ್ತು 30fps ನಲ್ಲಿ ಲೈವ್ HDR ಅನ್ನು ಒಳಗೊಂಡಿದೆ.

ನಥಿಂಗ್ ಫೋನ್ 2 ಸ್ಮಾರ್ಟ್‌ಫೋನ್‌ 4,700mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದು 45W PPS ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಇದರಿಂದ ಸ್ಮಾರ್ಟ್‌ಫೋನ್‌ ಅನ್ನು ಕೇವಲ 55 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

ಇದಲ್ಲದೆ 15W Qi ವೈರ್‌ಲೆಸ್ ಚಾರ್ಜಿಂಗ್‌ ಜೊತೆಗೆ 130 ನಿಮಿಷಗಳಲ್ಲಿ ಫೋನ್ ಅನ್ನು ಕೇಬಲ್‌ಗಳಿಲ್ಲದೆ ಚಾರ್ಜ್ ಮಾಡುವುದಕ್ಕೆ ಕೂಡ ಅವಕಾಶ ನೀಡಲಾಗಿದೆ. ಇದೇ ಹಾದಿಯಲ್ಲಿ ಹೊಸ ನಥಿಂಗ್ ಫೋನ್ (2a) ಸಹ ಲಗ್ಗೆ ಇಡಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Nothing Phone (2a) is launching in India Tomorrow. Expected Specifications and price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+