ಹೊಸ ಬಣ್ಣದ ಆಯ್ಕೆಯಲ್ಲಿ ನಥಿಂಗ್ ಫೋನ್ (2a)! ಫೀಚರ್ಸ್ ಬಗ್ಗೆ ತಿಳಿಯಿರಿ..
ನಥಿಂಗ್ ಫೋನ್‌ಗಳು (Nothing phone) ಇತ್ತೀಚಿನ ದಿನಗಳಲ್ಲಿ ಪ್ರೀಮಿಯಂ ಫೋನ್‌ಗಳಿಗೆ ಸೆಡ್ಡು ಹೊಡೆಯುವಂತ ಫೀಚರ್ಸ್ ಆಯ್ಕೆ ಪಡೆದುಕೊಂಡಿವೆ. ಈ ನಡುವೆ ಹೊಸ ಬಣ್ಣದ ಆಯ್ಕೆಯಲ್ಲಿ ನಥಿಂಗ್ ಫೋನ್ (2a) (Nothing Phone 2a) ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ.
ಹೌದು, ಭಾರತದಲ್ಲಿ ಫೋನ್ (2a) ಸ್ಮಾರ್ಟ್‌ಫೋನ್ ಹೊಸ ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ ಎನ್ನಲಾಗಿದ್ದು, ಫ್ಲಿಪ್‌ಕಾರ್ಟ್ ಪೋಸ್ಟರ್‌ನಲ್ಲಿ ಡಿವೈಸ್ ಬಣ್ಣವನ್ನು ಲೇವಡಿ ಮಾಡಲಾಗಿದೆ. ಹಾಗಿದ್ರೆ, ಈ ಫೋನ್ ಯಾವ ಹೊಸ ಬಣ್ಣದಲ್ಲಿ ಮತ್ತೇ ಕಾಣಿಸಿಕೊಳ್ಳಲಿದೆ?, ಇದು ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನಥಿಂಗ್ ಫೋನ್ (2a) ಸ್ಮಾರ್ಟ್‌ಫೋನ್: ಲಂಡನ್ ಮೂಲದ ಸ್ಮಾರ್ಟ್‌ಫೋನ್ ತಯಾರಕರು ಭಾರತದಲ್ಲಿ ಮತ್ತೊಂದು ಹೊಸ ಬಣ್ಣದ ಆಯ್ಕೆಯಲ್ಲಿ ಈ ಫೋನ್ ಅನ್ನು ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ. ವರದಿಗಳಲ್ಲಿ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ, ಎ ಸ್ಟೋರಿ ಆಫ್ ಕಲರ್ ಮತ್ತು ಪವರ್‌ಫುಲ್ ಯೂನಿಕ್ ಎಂದು ನಥಿಂಗ್ (R) ಟೆಕ್ಸ್ಟ್‌ನೊಂದಿಗೆ ಉಲ್ಲೇಖ ಮಾಡಲಾಗಿದೆ.
ಈ ಡಿವೈಸ್ ಬಹು-ಬಣ್ಣದ ಕೊಡುಗೆಯಾಗಿರಬಹುದು ಅಥವಾ ಪ್ರಾಥಮಿಕ ಬಣ್ಣ ಮತ್ತು ಇತರ ಎರಡು ಬಣ್ಣಗಳ ಸೂಕ್ಷ್ಮ ಉಚ್ಚಾರಣೆಯನ್ನು ಹೊಂದಿರಬಹುದು ಎಂದು ನಂಬಲಾಗಿದೆ. ಈ ನಡುವೆ ನಥಿಂಗ್ ಫೋನ್ (2a) ನ ಹೊಸ ಬಣ್ಣದ ಆಯ್ಕೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತಿದೆ. ಈ ನಡುವೆ ಜುಲೈನಲ್ಲಿ ಪ್ರದರ್ಶಿಸಲಾಗುವ ಕಮ್ಯೂನಿಟಿ ಎಡಿಷನ್ ಭಿನ್ನವಾಗಿರಲಿದೆ ಎಂದು @heyitsyogesh ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ, ಫೋನ್ (2a) ನ ಫ್ಲಿಪ್‌ಕಾರ್ಟ್ ಪೋಸ್ಟ್ ಅನ್ನು ಈಗ ತೆಗೆದುಹಾಕಲಾಗಿದೆ.
ಕಮ್ಯೂನಿಟಿ ಎಡಿಷನ್ ಕುರಿತು ಹೇಳುವುದಾದರೆ ಈ ಸ್ಪರ್ಧೆಯು ನಾಲ್ಕು ಹಂತಗಳನ್ನು ಹೊಂದಿದೆ. ಅದರಲ್ಲಿ ಹಾರ್ಡ್‌ವೇರ್ ವಿನ್ಯಾಸ, ವಾಲ್‌ಪೇಪರ್ ವಿನ್ಯಾಸ, ಪ್ಯಾಕೇಜಿಂಗ್ ವಿನ್ಯಾಸ ಮತ್ತು ಮಾರ್ಕೆಟಿಂಗ್ ಅಭಿಯಾನ. ಈ ಕಂಪನಿಯು ಇತ್ತೀಚೆಗೆ ಹಾರ್ಡ್‌ವೇರ್ ವಿನ್ಯಾಸದ ವಿಜೇತರನ್ನು ಘೋಷಣೆ ಮಾಡಲಾಗಿದೆ. ಈಗ ಮುಖ್ಯ ವಿಷಯಕ್ಕೆ ಬರೋಣ. ಅಂದರೆ ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಏನು? ಇದರ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ನಥಿಂಗ್ ಫೋನ್ (2a) ಬಗ್ಗೆ ಮಾಹಿತಿ: ನಥಿಂಗ್ ಫೋನ್ (2a) 6.7 ಇಂಚಿನ ಫುಲ್‌ಹೆಚ್‌ಡಿ+ ಫ್ಲೆಕ್ಸಿಬಲ್ ಅಮೋಲೆಡ್ 120Hz ಡಿಸ್‌ಪ್ಲೇ ಹೊಂದಿದ್ದು, 1,300ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಪಡೆದುಕೊಂಡಿದೆ. ಇದೆಲ್ಲದರ ಜೊತೆಗೆ ಈ ಫೋನ್ ಡೈಮೆನ್ಸಿಟಿ 7200 ಪ್ರೊ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಆಂಡ್ರಾಯ್ಡ್ 14 ಆಧಾರಿತ ನಥಿಂಗ್ ಓಎಸ್ 2.5 ನಲ್ಲಿ ರನ್ ಆಗಲಿದೆ.
ಇನ್ನು ಈ ಫೋನ್ (2a) 45W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದ್ದು, 50 ಮೆಗಾಪಿಕ್ಸೆಲ್ (OIS) + 50 ಮೆಗಾಪಿಕ್ಸೆಲ್ ಹಿಂಭಾಗ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ವೈ-ಫೈ 6, ಬ್ಲೂಟೂತ್ ಆವೃತ್ತಿ 5.3, ಎನ್‌ಎಫ್‌ಸಿ ಮತ್ತು ಚಾರ್ಜ್ ಮಾಡಲು ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ಪಡೆದುಕೊಂಡಿದೆ. ಇದನ್ನು ನೀವು 23,999 ರೂ.ಗಳ ಆರಂಭಿಕೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
ನಥಿಂಗ್ ಫೋನ್ (3) ನಲ್ಲಿ ವಿಶೇಷ ಬಟನ್: ಈ ನಡುವೆ ನಥಿಂಗ್ ಫೋನ್ (3) ಸ್ಮಾರ್ಟ್‌ಫೋನ್ ಬಗ್ಗೆ ಕೆಲವು ಮಾಹಿತಿ ಲೀಕ್ ಆಗಿವೆ. ಎಕ್ಸ್ ನಲ್ಲಿ ಸಿಇಓ ಕಾರ್ಲ್ ಪೀ ಅವರು ಹಂಚಿಕೊಂಡಿರುವ ಹೊಸ ಚಿತ್ರದ ಪ್ರಕಾರ ಹೊಸ ನಥಿಂಗ್ ಫೋನ್ ಹೊಸ ಬಟನ್ ಅನ್ನು ಪಡೆದಿದ್ದು, ಸ್ವಲ್ಪ ವಿಭಿನ್ನವಾಗಿ ಕಾಣುತ್ತದೆ. ಇದು ನಥಿಂಗ್ ಫೋನ್ (3) ನ ಸಂಭವನೀಯ ವಿನ್ಯಾಸ ಎಂದು ಊಹಿಸಲಾಗಿದೆ. ಸ್ಮಾರ್ಟ್‌ಫೋನ್ ಬಲಭಾಗದಲ್ಲಿ ಪವರ್ ಬಟನ್ ಮತ್ತು ಎಡಭಾಗದಲ್ಲಿ ವಾಲ್ಯೂಮ್ ಕೀಗಳನ್ನು ಹೊಂದಿದೆ.
ಇದು ನಥಿಂಗ್ ಫೋನ್ (2) ಮತ್ತು ಫೋನ್ (2a) ನಲ್ಲಿ ಒಂದೇ ರೀತಿಯ ನಿಯೋಜನೆಯಾಗಿದೆ. ಆದರೆ ಪವರ್ ಬಟನ್‌ನ ಕೆಳಗೆ ಹೆಚ್ಚುವರಿ ಬಟನ್ ಇದೆ. ಇದು ಹೊಸದು, ಮತ್ತು ಇದು ಐಫೋನ್ 15 ಸರಣಿಯಂತಹ 'ಆಕ್ಷನ್' ಬಟನ್ ಎಂದು ನಂಬಲಾಗಿದೆ. ಅಲ್ಲದೆ ರಿಯಲ್‌ಮಿ 12 ಸಹ ಡೈನಾಮಿಕ್ ಬಟನ್ ಅನ್ನು ಹೊಂದಿದೆ. ಇವುಗಳು ಮೂಲತಃ ಶಾರ್ಟ್‌ಕಟ್ ಬಟನ್‌ಗಳಾಗಿದ್ದು, ನಿರ್ದಿಷ್ಟ ಕ್ರಿಯೆಗಳನ್ನು ನಿರ್ವಹಿಸಲು ನೀವು ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








