ಇನ್ನು ಕೆಲವೇ ದಿನಗಳಲ್ಲಿ Nothing Phone (2a) Plus ಖರೀದಿಗೆ ಲಭ್ಯ!..ಆಫರ್ ಏನು?
ಜನಪ್ರಿಯ ನಥಿಂಗ್ (Nothing) ಕಂಪನಿಯ ಹೊಸ ನಥಿಂಗ್ ಫೋನ್ (2a) ಪ್ಲಸ್ (Nothing Phone (2a) Plus) ಮೊಬೈಲ್ ಮೀಡ್‌ರೇಂಜ್ ದರದ ಫೋನ್ ಆಗಿದೆ. ಈಗಾಗಲೇ ಗ್ರಾಹಕರ ಗಮನ ಸೆಳೆದಿರುವ ಈ ಸ್ಟೈಲಿಶ್ ಫೋನ್ ಇದೇ ಆಗಷ್ಟ್ 7 ರಂದು ಅಧಿಕೃತ ಫ್ಲಿಪ್‌ಕಾರ್ಟ್ ಇ ಕಾಮರ್ಸ್ (Flipkart) ವೆಬ್‌ಸೈಟ್ ಮೂಲಕ ಫಸ್ಟ್ ಮಾರಾಟ ಶುರು ಮಾಡಲಿದೆ. ಇದು ಅಗ್ಗದ ದರದಲ್ಲಿ ಕಾಣಿಸಿಕೊಂಡಿದ್ದರೂ ಸಹ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್ ನಲ್ಲಿ ನಥಿಂಗ್ ಫೋನ್ (2a) ಪ್ಲಸ್ (Nothing Phone (2a) Plus) ಮೊಬೈಲ್ ಆಗಷ್ಟ್ 7 ರಂದು ಮಾರಾಟ (sale) ಶುರು ಮಾಡಲಿದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7350 ಪ್ರೊ SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಹಾಗೂ 12GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದ್ದು, 50 ಮೆಗಾ ಪಿಕ್ಸಲ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ.

ಹಾಗೆಯೇ ನಥಿಂಗ್ ಫೋನ್ (2a) ಪ್ಲಸ್ ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನು ಈ ಫೋನ್ ಬ್ಲ್ಯಾಕ್ ಹಾಗೂ ಗ್ರೇ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ. ಇನ್ನುಳಿದಂತೆ ನಥಿಂಗ್ ಫೋನ್ (2a) ಪ್ಲಸ್ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ನೋಡೋಣ ಬನ್ನಿರಿ.
ನಥಿಂಗ್ ಫೋನ್ (2a) ಪ್ಲಸ್ ಫೀಚರ್ಸ್
ನಥಿಂಗ್ ಫೋನ್ (2a) ಪ್ಲಸ್ ಮೊಬೈಲ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಜೊತೆಗೆ ಈ ಡಿಸ್‌ಪ್ಲೇಯು 2412 x 1084 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 120Hz ಹಾಗೂ 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ 5 ಸಪೋರ್ಟ್ ಪಡೆದಿದ್ದು, ಅಲ್ಲದೇ ಈ ಡಿಸ್‌ಪ್ಲೇಯು OLED ಸ್ಕ್ರೀನ್ ಹೊಂದಿದೆ.
ನಥಿಂಗ್ ಫೋನ್ (2a) ಪ್ಲಸ್ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7350 ಪ್ರೊ SoC ಪ್ರೊಸೆಸರ್ ಸೌಲಭ್ಯದ ಪವರ್ ಅನ್ನು ಪಡೆದಿದ್ದು, ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಜೊತೆಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಹಾಗೂ 12GB RAM ಮತ್ತು 256GB ಆಂತರೀಕ ಸ್ಟೋರೇಜ್ ಅಯ್ಕೆಯಲ್ಲಿ ಕಾಣಿಸಿಕೊಂಡಿದೆ..
ನಥಿಂಗ್ ಫೋನ್ (2a) ಪ್ಲಸ್ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇನ್ನು ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದೆ. ದ್ವಿತೀಯ ಕ್ಯಾಮೆರಾ ಸಹ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಒಳಗೊಂಡಿದೆ. ಮುಂಭಾಗದಲ್ಲಿ ಕೂಡಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ನಥಿಂಗ್ ಫೋನ್ (2a) ಪ್ಲಸ್ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದು 50W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ.
ಬೆಲೆ ಹಾಗೂ ಲಭ್ಯತೆ
8GB RAM ಮತ್ತು 256GB ವೇರಿಯಂಟ್ ಬೆಲೆ 27,999ರೂ. ಆಗಿದೆ. ಅಲ್ಲದೇ ಇದರ 12GB RAM ಮತ್ತು 256GB ವೇರಿಯಂಟ್ ಬೆಲೆ - 29,999ರೂ. ಆಗಿದೆ. ಇನ್ನು ಈ ಫೋನ್ ಬ್ಲ್ಯಾಕ್ ಹಾಗೂ ಗ್ರೇ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ. ಅಂದಹಾಗೆ ಈ ಮೊಬೈಲ್‌ನ ಫಸ್ಟ್ ಸೇಲ್ ಇದೇ ಅಗಸ್ಟ್ 7 ರಂದು ಫ್ಲಿಪ್‌ಕಾರ್ಟ್ ಮೂಲಕ ಶುರುವಾಗಲಿದೆ.


Click it and Unblock the Notifications








