Home
ಸುದ್ದಿಜಾಲ

ಇಂದು ಎಂಟ್ರಿ ಕೊಡಲಿದೆ Nothing Phone (2a) Plus ಫೋನ್‌; ಖರೀದಿಗೆ ಕ್ಯೂ ಖಚಿತ!

ಜನಪ್ರಿಯ ನಥಿಂಗ್‌ ಮೊಬೈಲ್‌ ಕಂಪನಿಯ ಬಹುನಿರೀಕ್ಷಿತ ನಥಿಂಗ್‌ ಫೋನ್‌ (2a) ಪ್ಲಸ್‌ (Nothing Phone (2a) Plus) ಮೊಬೈಲ್‌ ಇಂದು (ಜುಲೈ 31 ರಂದು) ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈಗಾಗಲೇ ಲೀಕ್‌ ಫೀಚರ್ಸ್‌ಗಳಿಂದ ಮೊಬೈಲ್‌ ಪ್ರಿಯರ ಗಮನ ಸೆಳೆದಿರುವ ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7350 ಪ್ರೊ SoC ಪ್ರೊಸೆಸರ್‌ ಸೌಲಭ್ಯ ಪಡೆದಿರುವುದು ಬಹುತೇಕ ಖಚಿತ ಆಗಿದೆ.

ಹೌದು, ನಥಿಂಗ್‌ ಕಂಪನಿಯು ನಥಿಂಗ್‌ ಫೋನ್‌ (2a) ಪ್ಲಸ್‌ (Nothing Phone (2a) Plus) ಮೊಬೈಲ್‌ ಅನ್ನು ಇಂದು ಮಧ್ಯಾಹ್ನ 2:30 ಗಂಟೆಗೆ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಈ ಫೋನ್‌ ವಿಭಿನ್ನ ಡಿಸೈನ್‌ ಜೊತೆಗೆ ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ ಎನ್ನಲಾಗಿದೆ.

ಇಂದು ಎಂಟ್ರಿ ಕೊಡಲಿದೆ Nothing Phone (2a) Plus ಫೋನ್‌; ಖರೀದಿಗೆ ಕ್ಯೂ ಖಚಿತ!

ಇದೇ ರೀತಿ ನಥಿಂಗ್‌ ಫೋನ್‌ (2a) ಪ್ಲಸ್‌ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೌಲಭ್ಯ ಪಡೆದಿದ್ದು, ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಪಡೆದಿರಲಿದೆ. ಇದಲ್ಲದೇ ಈ ಫೋನಿನ ಇನ್ನೊಂದು ಪ್ರಮುಖ ಹೈಲೈಟ್‌ ಎಂದರೆ ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ನಥಿಂಗ್‌ ಫೋನ್‌ (2a) ಪ್ಲಸ್‌ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ನಥಿಂಗ್‌ ಫೋನ್‌ (2a) ಪ್ಲಸ್‌ ನಿರೀಕ್ಷಿತ ಫೀಚರ್ಸ್‌

ನಥಿಂಗ್‌ ಫೋನ್‌ (2a) ಪ್ಲಸ್‌ ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಜೊತೆಗೆ ಬರಲಿದೆ. ಈ ಡಿಸ್‌ಪ್ಲೇಯು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಇನ್ನು ಡಿಸ್‌ಪ್ಲೇ 120Hz ಹಾಗೂ 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಲೆವೆಲ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್‌ 5 ಸಪೋರ್ಟ್‌ ಪಡೆದಿರಲಿದೆ ಎಂದು ಲೀಕ್‌ ಮಾಹಿತಿಗಳಿಂದ ತಿಳಿದಿದೆ. ಅಲ್ಲದೇ ಈ ಡಿಸ್‌ಪ್ಲೇಯು OLED ಸ್ಕ್ರೀನ್‌ ಪಡೆದಿರಲಿದೆ.

ನಥಿಂಗ್‌ ಫೋನ್‌ (2a) ಪ್ಲಸ್‌ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7350 ಪ್ರೊ SoC ಪ್ರೊಸೆಸರ್‌ ಸೌಲಭ್ಯದ ಪವರ್‌ ಅನ್ನು ಹೊಂದಿರಲಿದ್ದು, ಆಂಡ್ರಾಯ್ಡ್ 14 ಓಎಸ್‌ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB, 8GB RAM ಮತ್ತು 256GB ಹಾಗೂ 12GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಅಯ್ಕೆಯಲ್ಲಿ ಬರಲಿದೆ.

ನಥಿಂಗ್‌ ಫೋನ್‌ (2a) ಪ್ಲಸ್‌ ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿರುವ ಪಕ್ಕಾ ಎನ್ನುವಂತೆ ಇದ್ದು, ಇನ್ನು ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಇರಲಿದೆ. ಎರಡನೇ ಕ್ಯಾಮೆರಾ ಸಹ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಪಡೆದಿರಲಿದೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ.

ನಥಿಂಗ್‌ ಫೋನ್‌ (2a) ಪ್ಲಸ್‌ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿರಲಿದ್ದು, ಇದು 50W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಬೆಂಬಲಿಸಲಿದೆ ಎನ್ನಲಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಪಡೆದಿರಲಿದೆ. ಈ ನಥಿಂಗ್‌ ಫೋನ್‌ (2a) ಪ್ಲಸ್‌ ಫೋನ್‌ ಜುಲೈ 31 ರಂದು ಬಿಡುಗಡೆ ಆಗಲಿದ್ದು, ಈ ಬಗ್ಗೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ ಮೈಕ್ರೋ ಸೈಟ್‌ ಮೂಲಕ ತಿಳಿಸಿದೆ.

Best Mobiles in India

English summary
Nothing Phone 2a Plus india launch today. check launch timing, price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+