Home
ಸುದ್ದಿಜಾಲ

ನಾಳೆ ನಥಿಂಗ್‌ ಫೋನ್‌ 2a ಸ್ಪೆಷಲ್‌ ಎಡಿಷನ್‌ ಫಸ್ಟ್‌ ಸೇಲ್‌; ವಾವ್‌ ಎನಿಸುವ ಡಿಸೈನ್‌!

ಇತ್ತೀಚಿಗೆ ಮೊಬೈಲ್‌ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ನಥಿಂಗ್‌ ಸಂಸ್ಥೆಯ ಕೆಲವು ಭಿನ್ನ ಡಿಸೈನ್‌ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ನಥಿಂಗ್‌ (Nothing) ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ನಥಿಂಗ್‌ ಫೋನ್‌ 2a ಸ್ಪೆಷಲ್‌ ಎಡಿಷನ್‌ (Nothing Phone 2a Special Edition) ಸ್ಮಾರ್ಟ್‌ಫೋನ್‌ ಗ್ರಾಹಕರ ಗಮನ ಸೆಳೆದಿದೆ. ಇನ್ನು ಇದರ ಮೊದಲ ಸೇಲ್‌ ಇದೇ ಜೂನ್ 5 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದ ಮೂಲಕ ಪ್ರಾರಂಭ ಮಾಡಲಿದೆ.

ಹೌದು, ನಥಿಂಗ್‌ ಸಂಸ್ಥೆಯ ನಥಿಂಗ್‌ ಫೋನ್‌ 2a ಸ್ಪೆಷಲ್‌ ಎಡಿಷನ್‌ ಜೂನ್‌ 5 ರಂದು ಖರೀದಿಗೆ ಲಭ್ಯವಾಗಲಿದೆ. ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಬ್ಯಾಂಕ್‌ ಆಫರ್‌ ಸೇರಿದಂತೆ ಇತರೆ ಡಿಸ್ಕೌಂಟ್‌ಗಳು ಲಭ್ಯವಾಗಲಿವೆ. ಅಂದಹಾಗೆ ಈ ಫೋನ್‌ 12GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 7200 ಪ್ರೊ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಬೆಲೆ 27,999ರೂ. ಆಗಿದೆ.

ನಾಳೆ ನಥಿಂಗ್‌ ಫೋನ್‌ 2a ಸ್ಪೆಷಲ್‌ ಎಡಿಷನ್‌ ಸೇಲ್‌; ವಾವ್‌ ಎನಿಸುವ ಡಿಸೈನ್‌!

ಈ ಸ್ಪೆಷಲ್‌ ಎಡಿಷನ್‌ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಜೊತೆಗೆ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಹಾಗೆಯೇ ಇದು 50 ಮೆಗಾ ಪಿಕ್ಸಲ್‌ ಕ್ಯಾಮೆರಾ ಸೌಲಭ್ಯ ಸಹ ಪಡೆದುಕೊಂಡಿದೆ. ಇನ್ನುಳಿದಂತೆ ನಥಿಂಗ್‌ ಫೋನ್‌ 2a ಸ್ಪೆಷಲ್‌ ಎಡಿಷನ್‌ ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ನಥಿಂಗ್‌ ಫೋನ್‌ 2a ಸ್ಪೆಷಲ್‌ ಎಡಿಷನ್‌ ಫೀಚರ್ಸ್‌

ನಥಿಂಗ್‌ ಫೋನ್‌ 2a ಸ್ಪೆಷಲ್‌ ಎಡಿಷನ್‌ ಮೊಬೈಲ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, 1,080x2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ ಡಿಸ್‌ಪ್ಲೇಯು 30Hz ನಿಂದ 120Hz ವರೆಗಿನ ರಿಫ್ರೆಶ್ ರೇಟ್‌, 394ppi ಪಿಕ್ಸೆಲ್ ಸಾಂದ್ರತೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. HDR10+ ಬೆಂಬಲ ಮತ್ತು 1,300 nits ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದಿದೆ.

ನಥಿಂಗ್‌ ಫೋನ್‌ 2a ಸ್ಪೆಷಲ್‌ ಎಡಿಷನ್‌ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊ SoC ಪ್ರೊಸೆಸರ್‌ ಪಡೆದಿದ್ದು, ಇದು ಆಂಡ್ರಾಯ್ಡ್ 14 ಆಧಾರಿತ ನಥಿಂಗ್ ಓಎಸ್ 2.5 ಸಪೋರ್ಟ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಫೋನ್ 12GB RAM + 256GB ಸ್ಟೋರೇಜ್‌ ಆಯ್ಕೆ ಇದೆ.

ನಥಿಂಗ್‌ ಫೋನ್‌ 2a ಸ್ಪೆಷಲ್‌ ಎಡಿಷನ್‌ ಮೊಬೈಲ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ದ್ವಿತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ನಥಿಂಗ್‌ ಫೋನ್‌ 2a ಸ್ಪೆಷಲ್‌ ಎಡಿಷನ್‌ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು 45W ಫಾಸ್ಟ್‌ ಚಾರ್ಜಿಂಗ್‌ಗೆ ಸಪೋರ್ಟ್‌ ನೀಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ 5.3, NFC, GPS, GLONASS, GALILEO, QZSS, 360 ಡಿಗ್ರಿ ಆಂಟೆನಾ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಸಪೋರ್ಟ್‌.

Best Mobiles in India

English summary
Nothing Phone 2a Special Edition sale starts from tomorrow in India. Check Price, offer and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+