Nothing phone: ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ ನಥಿಂಗ್ ಫೋನ್ 2a! ನಿರೀಕ್ಷಿತ ಬೆಲೆ ಮತ್ತು ಫೀಚರ್ಸ್ ಏನು?
ನಥಿಂಗ್ ಫೋನ್‌ಗಳು (Nothing phone) ವಿಶೇಷದಲ್ಲಿ ವಿಶೇಷ ಎನಿಸಿವೆ. ಅದರಲ್ಲೂ ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಫೀಚರ್ಸ್ ಆಯ್ಕೆ ಹಾಗೂ ಈ ಫೋನ್‌ಗಳ ಶೈಲಿ ಎಲ್ಲರನ್ನೂ ಆರ್ಕಷಿಸುತ್ತವೆ. ಈ ಬೆಳವಣಿಗೆ ನಡುವೆ ನಥಿಂಗ್ ಫೋನ್ (2a) (Nothing phone 2a) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಹೌದು, ನಥಿಂಗ್ ಫೋನ್ (2a) ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಎಂಟ್ರಿ ಆಗಲಿದೆ ಎನ್ನಲಾಗಿದೆ. ಅಂತಿಮವಾಗಿ ಕಂಪೆನಿಯು ತನ್ನ ಮೌನವನ್ನು ಮುರಿದಿದ್ದು, ಈ ಫೋನ್‌ನ ಅಸ್ತಿತ್ವವನ್ನು ಖಚಿತಪಡಿಸಿದೆ. ಈ ನಡುವೆ ನಥಿಂಗ್ ಇನ್ನೂ ನಿಖರವಾದ ಲಾಂಚ್ ಡೇಟ್ ಅನ್ನು ಬಹಿರಂಗಪಡಿಸದಿದ್ದರೂ, ಕೆಲವು ಫೀಚರ್ಸ್ ಮಾಹಿತಿ ಬಹಳ ಸದ್ದು ಮಾಡುತ್ತಿವೆ. ಹಾಗಿದ್ರೆ, ಈ ಫೋನ್‌ನ ನಿರೀಕ್ಷಿತ ಫೀಚರ್ಸ್ ಏನು?, ಬೆಲೆ ಎಷ್ಟಿರಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ನಥಿಂಗ್ ಫೋನ್ (2a) ಸ್ಮಾರ್ಟ್‌ಫೋನ್: ನಥಿಂಗ್ ಫೋನ್ (2a) ಶೀಘ್ರದಲ್ಲೇ ಬರಲಿದೆ ಎನ್ನಲಾಗಿದೆ. ಕಂಪನಿಯು ಲಾಂಚ್ ಡೇಟ್ ಅನ್ನು ಬಹಿರಂಗಪಡಿಸದೇ ಇದ್ದರೂ ಸಹ ಹೊಸ ಫೋನ್ (2a) ತನ್ನ ಚೊಚ್ಚಲ ಪ್ರವೇಶಕ್ಕೆ ಸಿದ್ಧವಾಗಿದೆ ಎಂದು ತಿಳಿಸಿದೆ. ಈ ಮೂಲಕ ಭಾರತದಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿರುವ CMF ಬಡ್ಸ್ ಮತ್ತು CMF ನೆಕ್‌ಬ್ಯಾಂಡ್ ಪ್ರೊ ಉತ್ಪನ್ನಗಳ ಆಗಮನವನ್ನೂ ಸಹ ಕಂಪೆನಿ ಲೇವಡಿ ಮಾಡಿದೆ.
ಈ ಮುಂಬರುವ ಫೋನ್‌ನ ಫೀಚರ್ಸ್ ಬಗ್ಗೆ ಕಂಪೆನಿ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ. ಅದಾಗ್ಯೂ ಇದು ಮೂಲ ನಥಿಂಗ್ ಫೋನ್ (2) ಸ್ಮಾರ್ಟ್‌ಫೋನ್‌ನ (Nothing Phone (2) Smartphone) ಕೆಲವು ಜನಪ್ರಿಯ ಫೀಚರ್ಸ್ ಅನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ. ಹೊಸ ಫೋನ್ (2a) ಟೋನ್-ಡೌನ್ ಆವೃತ್ತಿಯಾಗಿದೆ ಎನ್ನಲಾಗಿದೆ ಈ ಮೂಲಕ ಫೋನ್ (2) ಗಿಂತ ಕಡಿಮೆ ಬೆಲೆಯನ್ನು ಇದು ಹೊಂದಿರಲಿದೆ ಎಂದು ತೋರುತ್ತದೆ.

ನಥಿಂಗ್ ಫೋನ್ (2a) ಅನ್ನು ದೈನಂದಿನ ಸ್ಮಾರ್ಟ್‌ಫೋನ್ ಅನುಭವವನ್ನು ಅನುಭವವನ್ನು ನೀಡುವುದರ ಮೇಲೆ ಕೇಂದ್ರೀಕರಿಸಲಾಗಿದೆ ಎನ್ನಲಾಗಿದೆ. ನಥಿಂಗ್‌ನ ಎಲ್ಲಾ ಪರಿಣತಿ ಮತ್ತು ಕರಕುಶಲತೆಯೊಂದಿಗೆ ಫೋನ್ (2a) ಕಾಣಿಸಿಕೊಳ್ಳಲಿದೆ ಎಂದು ತೋರುತ್ತದೆ. ನಥಿಂಗ್ ಫೋನ್ (1) ಗೆ (Nothing Phone 1) ಹೋಲಿಸಿದರೆ ಸ್ಪಷ್ಟವಾದ ಅಪ್‌ಗ್ರೇಡ್ ಅನ್ನು ಈ ಫೋನ್ ಖಾತ್ರಿಪಡಿಸುತ್ತದೆ.
ಇನ್ನು ಈ ಫೋನ್‌ನ ಹಿಂದಿನ ಸರಣಿ ಬಗ್ಗೆ ಮಾತನಾಡುವುದಾದರೆ ಅಂದರೆ ನಥಿಂಗ್ ಫೋನ್ (2) ಅನ್ನು ಭಾರತದಲ್ಲಿ 44,999 ರೂ.ಗಳ ಆರಂಭಿಕ ಬೆಲೆಯೊಂದಿಗೆ ಘೋಷಣೆ ಮಾಡಲಾಗಿತ್ತು. ಆದರೂ ನಥಿಂಗ್ ಫೋನ್ (2a) 40,000 ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಇದು ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಅಂದರೆ 35,000 ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ ಎಂದು ಕೆಲವು ವರದಿಗಳಿಂದ ತಿಳಿದುಬಂದಿದೆ.

ಇನ್ನು ಈ ಹೊಸ ಫೋನ್‌ನ ಜೊತೆಗೆ, ಕಂಪನಿಯು ಗ್ಲಿಫ್ ಡೆವಲಪರ್ ಕಿಟ್(Glyph Developer Kit) ಅನ್ನೂ ಸಹ ಪ್ರಾರಂಭಿಸುತ್ತಿದೆ ಎಂದು ತಿಳಿದುಬಂದಿದೆ. ಇದು ಥರ್ಡ್ ಪಾರ್ಟಿ ಆಂಡ್ರಾಯ್ಡ್ ಆಪ್‌ಗಳಿಗೆ ಗ್ಲಿಫ್ ಇಂಟರ್ಫೇಸ್ ಅನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯವನ್ನು ನೀಡುತ್ತದೆ. ಅದರಂತೆ ನಥಿಂಗ್ ಫೋನ್ (2a) ಸ್ಮಾರ್ಟ್‌ಫೋನ್‌ನ ಕೆಲವು ಲೀಕ್ ಫೀಚರ್ಸ್ ಕಡೆ ಕಣ್ಣಾಯಿಸುವುದಾದರೆ ಈ ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ OLED ಡಿಸ್ಪ್ಲೇ ಹೊಂದಿರಲಿದೆ ಎನ್ನಲಾಗಿದೆ.
ಈ ಫೋನ್ ಭಾರತದಲ್ಲಿ ಮಿಡ್ ರೇಂಜ್ ಫೋನ್‌ಗಳ ವಿಭಾಗದಲ್ಲಿ ಗುರುತಿಸಿಕೊಳ್ಳಲಿದ್ದು, ಅದರಂತೆ 6.7 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎಂದು ತೋರುತ್ತದೆ. ಅಲ್ಲದೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್ ಬಲ ಪಡೆದಿರಲಿದ್ದು, ಸಾಮಾನ್ಯ ವೇರಿಯಂಟ್ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಲೀಕ್ ಮಾಹಿತಿಗಳಲ್ಲಿ ಉಲ್ಲೇಖ ಮಾಡಲಾಗಿದೆ.
ಇದರೊಂದಿಗೆ ಈ ವಿಶೇಷ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಓಎಸ್ ನಲ್ಲಿ ರನ್ ಆಗುವ ನಿರೀಕ್ಷೆಯಿದ್ದು, ಇದರ ಕ್ಯಾಮೆರಾ ರಚನೆ ಬಗ್ಗೆ ಹೇಳುವುದಾದರೆ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ. ಅದರಲ್ಲಿ ಒಂದು ಲೆನ್ಸ್ 50 ಮೆಗಾಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿರಲಿದೆ ಎಂದು ತೋರುತ್ತದೆ. ನೀವೇನಾದರೂ ಈ ಫೋನ್ ಖರೀದಿ ಮಾಡಲು ಮುಂದಾಗಿದ್ದು, ಹೆಚ್ಚಿನ ಮಾಹಿತಿ ಬೇಕು ಎಂದಾದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications








