Home
ಸುದ್ದಿಜಾಲ

Nothing phone: ನಥಿಂಗ್ ಫೋನ್ 3 ನ ಫೀಚರ್ಸ್‌ ಲೀಕ್‌! ಮತ್ತಷ್ಟು ಆಕರ್ಷಕ ಶೈಲಿ, ಬೆಲೆ ಎಷ್ಟು?

ನಥಿಂಗ್ ಫೋನ್‌ಗಳು (Nothing phone) ಸ್ಯಾಮ್‌ಸಂಗ್‌, ಒನ್‌ಪ್ಲಸ್, ಆಪಲ್‌ ಫೋನ್‌ಗಳಿಗೆ ನೇರ ಸ್ಪರ್ಧೆ ನೀಡುವ ಸಾಮರ್ಥ್ಯ ಇರುವ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿವೆ. ಈಗಾಗಲೇ ಅನಾವರಣ ಆಗಿರುವ ನಥಿಂಗ್ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದ್ದು, ಇದೀಗ ನಥಿಂಗ್ ಫೋನ್ 3 ಸ್ಮಾರ್ಟ್‌ಫೋನ್‌ (Nothing Phone 3 smartphone) ಬಗ್ಗೆ ಕೆಲವು ಮಾಹಿತಿ ಲೀಕ್‌ ಆಗಿವೆ.

ಹೌದು, 2020 ರಲ್ಲಿ ನಥಿಂಗ್ ಫೋನ್‌ಗಳನ್ನು ಮೊದಲು ಲಾಂಚ್‌ ಮಾಡಲಾಗಿದ್ದು, ಯಾವುದೇ ವಿಳಂಬವಿಲ್ಲದ ಅನುಭವ ನೀಡಲು ಶಕ್ತಿಯುತ ಪ್ರೊಸೆಸರ್ ಮತ್ತು ಉತ್ತಮ ವಿನ್ಯಾಸದಿಂದಾಗಿ ಬಹಳ ಜನಪ್ರಿಯ ಫೋನ್‌ ಆಗಿ ಗುರುತಿಸಿಕೊಂಡಿದೆ. ಈ ಫೋನ್‌ಗಳು ಪ್ರಾರಂಭವಾಗಿ ಮೂರು ವರ್ಷಗಳು ತುಂಬಿದ್ದು, ಹೊಸ ನಥಿಂಗ್ ಫೋನ್ 3 ಅನ್ನು ಲಾಂಚ್‌ ಮಾಡಲು ಕಂಪೆನಿ ಮುಂದಾಗಿದೆ ಎಂದು ತಿಳಿದುಬಂದಿದೆ. ಅದರಂತೆ ಈ ಫೋನ್‌ ಬಗ್ಗೆ ಲೀಕ್‌ ಆದ ಕೆಲವು ಮಾಹಿತಿಯನ್ನು ಇಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನಥಿಂಗ್ ಫೋನ್ 3 ನ ಫೀಚರ್ಸ್‌ ಲೀಕ್‌! ಮತ್ತಷ್ಟು ಆಕರ್ಷಕ ಶೈಲಿ, ಬೆಲೆ ಎಷ್ಟು?

ನಥಿಂಗ್ ಫೋನ್ 3 : ಮುಂಬರಲಿರುವ ನಥಿಂಗ್ ಫೋನ್ 3 ಸ್ಮಾರ್ಟ್‌ಫೋನ್ 2024 ರ ಮೊದಲಾರ್ಧದಲ್ಲಿ ಲಾಂಚ್‌ ಆಗಲಿದೆ ಎಂಬ ಮಾಹಿತಿ ಇದೆ. ಆದರೆ ಈ ಬಗ್ಗೆ ನಿಖರವಾದ ಮಾಹಿತಿಗೆ ಕಾಯಬೇಕಿದೆ. ಆದಾಗ್ಯೂ ಮತ್ತೊಂದು ಮಾಹಿತಿ ಪ್ರಕಾರ ನಥಿಂಗ್ ಫೋನ್ ಜುಲೈ 3 ರಂದು ಲಾಂಚ್‌ ಮಾಡಲಾಗುತ್ತದೆ ಎನ್ನಲಾಗಿದೆ. ಯಾಕೆಂದರೆ ಕಂಪನಿಯು ನಥಿಂಗ್ ಫೋನ್‌ 1 ಮತ್ತು ಫೋನ್ 2 ಇದೇ ಸಮಯದಲ್ಲಿ ಲಾಂಚ್‌ ಮಾಡಿತ್ತು.

ಈ ಮುಂಬರುವ ನಥಿಂಗ್ ಫೋನ್ 3 ಸ್ಮಾರ್ಟ್‌ಫೋನ್ ಬೆಲೆ ಇನ್ನೂ ಸ್ಪಷ್ಟವಾಗಿಲ್ಲ ಅದಾಗ್ಯೂ ಇದು 45,000 ರೂ.ಗಳಿಗಿಂತ ಕ್ಕಿಂತ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ನಥಿಂಗ್ ಫೋನ್ 3 ಅನ್ನು ಗ್ಲಿಫ್ ಲೈಟ್‌ಗಳ ಜೊತೆಗೆ ಸಿಗ್ನೇಚರ್ ಟ್ರಾನ್ಫರೆಂಟ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ವಿನ್ಯಾಸಗೊಳಿಸಲಾಗುವುದು ಎಂದು ಹೇಳಲಾಗಿದೆ. ಅದರಲ್ಲೂ ನೋಟಿಫಿಕೇಶನ್‌ಗಾಗಿ ಎಲ್‌ಇಡಿ ಸ್ಟ್ರಿಪ್‌ಗಳ ಮೇಲೆ ಈ ಬಾರಿ ಹೆಚ್ಚು ಕೇಂದ್ರೀಕರಿಸುತ್ತದೆ ಎಂದು ತಿಳಿದುಬಂದಿದೆ. ಈ ಮೂಲಕ ಈ ಹೊಸ ಫೋನ್‌ ಕಲಾತ್ಮಕವಾಗಿ ಕಾಣಿಸಿಕೊಳ್ಳಲಿದೆ ಎಂದು ಆಂಡ್ರಾಯ್ಡ್‌ ಪೊಲೀಸ್‌ ವರದಿ ಮಾಡಿದೆ.

ನಥಿಂಗ್ ಫೋನ್ 3 ನ ಫೀಚರ್ಸ್‌ ಲೀಕ್‌! ಮತ್ತಷ್ಟು ಆಕರ್ಷಕ ಶೈಲಿ, ಬೆಲೆ ಎಷ್ಟು?

ಇದರೊಂದಿಗೆ ಈ ಹೊಸ ಫೋನ್ ಇತ್ತೀಚಿನ ಆಂಡ್ರಾಯ್ಡ್‌ ಆವೃತ್ತಿಯಲ್ಲಿ ರನ್ ಆಗಬಹುದು ಎನ್ನಲಾಗಿದ್ದು, ಸ್ನಾಪ್‌ಡ್ರಾಗನ್ 8+ ಜನ್ 1 ಚಿಪ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಮೂರು ವರ್ಷಗಳ ನವೀಕರಣಗಳನ್ನು ಹೊಂದಿರುತ್ತದೆ ಮತ್ತು ನಾಲ್ಕು ವರ್ಷಗಳ ದ್ವಿ-ಮಾಸಿಕ ಭದ್ರತಾ ಪ್ಯಾಚ್ ನವೀಕರಣಗಳನ್ನು ಪಡೆಯಲಿದೆ ಎಂದು ತಿಳಿದುಬಂದಿದೆ.

ಇನ್ನು ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಗಮನಾರ್ಹ ಬದಲಾವಣೆ ನಿರೀಕ್ಷೆ ಮಾಡಬಹುದು. ರಾತ್ರಿ ಛಾಯಾಗ್ರಹಣ ಸಂಬಂಧಿಸಿದಂತೆ ಅತ್ಯುತ್ತಮ ಫೀಚರ್ಸ್‌ ಆಯ್ಜೆ ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಜೊತೆಗೆ ರಿಯರ್‌ ಪ್ಯಾನಲ್‌ನಲ್ಲಿ ನಥಿಂಗ್ ಫೋನ್ 1 ಮತ್ತು ನಥಿಂಗ್ ಫೋನ್ 2 ಮಾದರಿಯಂತೆಯೇ ವಿಭಿನ್ನವಾಗಿ ಜೋಡಿಸಲಾದ 3 ಎಲ್‌ಇಡಿ ಗ್ಲಿಫ್ ಎಲ್ಇಡಿ ಲೈಟ್ ಸ್ಟ್ರಿಪ್‌ಗಳನ್ನು ಫೋನ್ ಹೊಂದಿರಲಿದೆ ಎಂದು ಊಹಿಸಲಾಗಿದೆ. ಅಷ್ಟೇ ಅಲ್ಲದೆ ಈ ವೇಳೆ ನಥಿಂಗ್ ಫೋನ್ 2A ಸ್ಮಾರ್ಟ್‌ಫೋನ್ ಅನ್ನೂ ಸಹ ಲಾಂಚ್‌ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ನಥಿಂಗ್ ಫೋನ್ 3 ನ ಫೀಚರ್ಸ್‌ ಲೀಕ್‌! ಮತ್ತಷ್ಟು ಆಕರ್ಷಕ ಶೈಲಿ, ಬೆಲೆ ಎಷ್ಟು?

ನಥಿಂಗ್ ಫೋನ್ 2A ಸ್ಮಾರ್ಟ್‌ಫೋನ್ (Nothing Phone 2A smartphone) ಬೆಲೆ ಅಂದಾಜು. 33,000 ರೂ.ಗಳಾಗಿರಬಹುದು ಎನ್ನಲಾಗಿದ್ದು, ಈ ಫೋನ್ 120Hz ರಿಫ್ರೆಶ್‌ ರೇಟ್‌ನೊಂದಿಗೆ OLED ಡಿಸ್‌ಪ್ಲೇ ಹೊಂದಿರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಮೀಡಿಯಾಟೆಕ್‌ ಡೈಮೆನ್ಸಿಟಿ 7200 SoC ಪ್ರೊಸೆಸರ್‌ ಬಲ ಹಾಗೂ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಳ್ಳಲಿದೆ ಎಂದು ಊಹಿಸಲಾಗಿದೆ. ಹಾಗೆಯೇ ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಆಧಾರಿತ ನಥಿಂಗ್ OS 2.5 ನಲ್ಲಿ ರನ್‌ ಆಗಲಿದೆ ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

Best Mobiles in India

English summary
Nothing phone are capable of giving direct competition to Samsung, OnePlus, Apple phones. Meanwhile, some features of the Nothing Phone 3 smartphone have been leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+