ಇಂದು ಹೊಸ Nothing ಫೋನ್ ಸೇಲ್; 2000 ರಿಯಾಯಿತಿ.. ಬಜೆಟ್ ಬೆಲೆ.. ಹೇಗಿವೆ ಫೀಚರ್ಸ್
ಸ್ಮಾರ್ಟ್‌ಫೋನ್ ಪ್ರಿಯರ ಕಾಯುವಿಕೆ ಮುಗಿಯಿತು. ಕೊನೆಗೂ ಇಂದು ಹೊಸ ನಥಿಂಗ್ ಫೋನ್ ಗ್ರಾಹಕರ ಕೈ ಸೇರಲಿದೆ. ಹೌದು, ಟೆಕ್ ಬ್ರ್ಯಾಂಡ್ ನಥಿಂಗ್ ಇತ್ತೀಚೆಗೆ ಎರಡು ಹೊಸ ಸೊಗಸಾದ ಮೊಬೈಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅವುಗಳೇ ನಥಿಂಗ್ ಫೋನ್ 3a (Nothing Phone 3a) ಮತ್ತು ನಥಿಂಗ್ ಫೋನ್ 3a ಪ್ರೊ (Nothing Phone 3a Pro) ಸ್ಮಾರ್ಟ್‌ಫೋನ್‌ಗಳು. ಈ ಪೈಕಿ ನಥಿಂಗ್ ಫೋನ್ (3a) ಪ್ರೊ ಫೋನ್ ಟೆಕ್ ಪ್ರಿಯರ ಮನಸ್ಸು ಗೆದ್ದಿದೆ. ಅಂದಹಾಗೆ, ಈ ಮೊಬೈಲ್ ಇಂದು (ಮಾರ್ಚ್ 11) ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.
ನಥಿಂಗ್ ಫೋನ್ (3a) ಪ್ರೊ ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50MP + 50MP + 32MP ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಈ ಮೊಬೈಲ್ 6.77 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 256GB ಸ್ಟೋರೇಜ್, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ. ಈ ಫೋನಿನ ಬೆಲೆ, ಲಭ್ಯತೆ ಮತ್ತು ಮತ್ತಷ್ಟು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ನಥಿಂಗ್ ಫೋನ್ (3a) ಪ್ರೊ ಬೆಲೆ ಮತ್ತು ಆಫರ್
ನಥಿಂಗ್ ಫೋನ್ (3a) ಪ್ರೊ ಫೋನಿನ 8GB RAM + 128GB ಸ್ಟೋರೇಜ್ ಬೆಲೆ 29,999 ರೂ. ಆಗಿದೆ. 8GB RAM + 256GB ಸ್ಟೋರೇಜ್ ರೂಪಾಂತರವು 31,999 ರೂ.ಗೆ ಮಾರಾಟವಾಗಲಿದೆ. ಇಂದು (ಮಾರ್ಚ್ 11) ಮಧ್ಯಾಹ್ನ 12 ಗಂಟೆಯಿಂದ ಈ ಫೋನ್ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಕಂಪನಿಯು ಕೆಲವು ಲಾಂಚ್ ಆಫರ್ ಘೋಷಿಸಿದೆ. ಎಚ್‌ಡಿಎಫ್‌ಸಿ, ಐಡಿಎಫ್‌ಸಿ ಫ್ರಿಸ್ಟ್ ಬ್ಯಾಂಕ್ ಮತ್ತು ಒನ್‌ಕಾರ್ಡ್ ವಹಿವಾಟುಗಳ ಮೇಲೆ 2,000 ರೂ. ರಿಯಾಯಿತಿ ನೀಡುತ್ತದೆ. ಈ ನಥಿಂಗ್ ಫೋನ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ನಥಿಂಗ್ ಫೋನ್ (3a) ಪ್ರೊ ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ನಥಿಂಗ್ ಫೋನ್ (3a) ಪ್ರೊ ಸ್ಮಾರ್ಟ್‌ಫೋನ್ 6.77 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 1080 x 2392 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಪಾಂಡಾ ಗ್ಲಾಸ್ ರಕ್ಷಣೆ ಹೊಂದಿದೆ.
ಪ್ರೊಸೆಸರ್ ಯಾವುದು?
ನಥಿಂಗ್ ಫೋನ್ (3a) ಪ್ರೊ ಫೋನ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ ನಥಿಂಗ್ ಓಎಸ್ 3.1 ಜೊತೆಗೆ ಕೆಲಸ ಮಾಡುತ್ತದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 720 ಜಿಪಿಯು ಹೊಂದಿದೆ. ಹಾಗೆಯೇ 8GB ಮತ್ತು 12GB RAM, 128GB ಮತ್ತು 256GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಟ್ರಿಪಲ್ ಕ್ಯಾಮೆರಾ ಸೆಟಪ್
ನಥಿಂಗ್ ಫೋನ್ (3a) ಪ್ರೊ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಹೇಗಿದೆ ಬ್ಯಾಟರಿ ಬ್ಯಾಕಪ್
ನಥಿಂಗ್ ಫೋನ್ (3a) ಪ್ರೊ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 50W ವೈರ್ಡ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಇದು ಸ್ಪ್ಲಾಶ್ ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಯುಎಸ್‌ಬಿ ಟೈಪ್ ಸಿ ಆಡಿಯೋ, ಸ್ಟೀರಿಯೊ ಸ್ಪೀಕರ್‌ಗಳನ್ನು ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.4, ಜಿಪಿಎಸ್, ಯುಎಸ್‌ಬಿ ಟೈಪ್ ಸಿ, ಎನ್‌ಎಫ್‌ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








