Home
ಸುದ್ದಿಜಾಲ

ನಥಿಂಗ್‌ ಸಬ್‌ ಬ್ರ್ಯಾಂಡ್‌ CMF ನಿಂದ ಚೊಚ್ಚಲ ಫೋನ್‌! ಫೀಚರ್ಸ್‌ ಲೀಕ್‌

ಸ್ಮಾರ್ಟ್‌ಫೋನ್‌ಗಳು ಇಂದು ವಿವಿಧ ಫೀಚರ್ಸ್‌ ಅಯ್ಕೆ ಮೂಲಕ ಬಳಕೆದಾರರಿಗೆ ವಿಶೇಷವಾದ ಅನುಭವ ನೀಡುತ್ತವೆ. ಅದರಂತೆ ನಥಿಂಗ್‌ ಫೋನ್‌ಗಳು (Nothing phone) ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಪ್ರೀಮಿಯಂ ಫೋನ್‌ಗಳೊಂದಿಗೆ ಪೈಪೋಟಿ ನೀಡುತ್ತಿವೆ. ಆದರೆ ಈಗ ಇದರ ಸಬ್‌ಬ್ರ್ಯಾಂಡ್‌ ಆಗಿರುವ ಸಿಎಮ್‌ಎಫ್‌ (CMF) ಹೊಸ ಫೋನ್‌ ಲಾಂಚ್‌ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಹೌದು, ಸಿಎಮ್‌ಎಫ್‌ ಇದೀಗ ಮೊದಲ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ಈ ಫೋನ್‌ನ ಕೆಲವು ಫೀಚರ್ಸ್‌ಗಳು ಇದೀಗ ಲೀಕ್‌ ಆಗಿದ್ದು, ಸಿಎಮ್‌ಎಫ್‌ ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡಲಿದೆ. ಅಲ್ಲದೆ ಈ ಫೋನ್‌ ಅನ್ನು ಸಿಎಮ್‌ಎಫ್ ಫೋನ್ (1) (CMF Phone 1) ಎಂದು ಕರೆಯುವ ಸಾಧ್ಯತೆಯಿದೆ. ಹಾಗಿದ್ರೆ ಈ ಫೋನ್‌ ಯಾವಾಗ ಲಾಂಚ್‌ ಆಗಲಿದೆ?, ಏನೆಲ್ಲಾ ಫೀಚರ್ಸ್‌ ಪಡೆದಿರಲಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ನಥಿಂಗ್‌ ಸಬ್‌ ಬ್ರ್ಯಾಂಡ್‌ CMF ನಿಂದ ಚೊಚ್ಚಲ ಫೋನ್‌! ಫೀಚರ್ಸ್‌ ಲೀಕ್‌

ಸಿಎಮ್‌ಎಫ್ ಫೋನ್ (1): ನಥಿಂಗ್ ಫೋನ್ 2a ನಂತರ, ಸಿಎಮ್‌ಎಫ್‌ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಮೊದಲ ಸ್ಮಾರ್ಟ್‌ಫೋನ್ ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಸಿಎಮ್‌ಎಫ್‌ ಇತ್ತೀಚೆಗೆ ಒಂದು ಜೋಡಿ ಇಯರ್‌ಬಡ್‌ಗಳು ಮತ್ತು ಸ್ಮಾರ್ಟ್‌ವಾಚ್ ಅನ್ನು ಲಾಂಚ್ ಮಾಡಿತ್ತು. ಈಗ ಅದು ತನ್ನ ಸ್ಮಾರ್ಟ್‌ಫೋನ್ ಅನ್ನು ಪ್ರಾರಂಭಿಸಲು ಸಜ್ಜಾಗಿದೆ, ಇದರ ಜೊತೆಗೆ ಈ ಫೋನ್‌ ಬಜೆಟ್‌ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ 91ಮೊಬೈಲ್ಸ್‌ ವರದಿ ಮಾಡಿದೆ.

ಕೆಲವು ಪ್ರಮುಖ ಲೀಕ್‌ ಮಾಹಿತಿ ಪ್ರಕಾರ ಪ್ರಕಾರ ಸಿಎಮ್‌ಎಫ್‌ ಫೋನ್ 1 ಸುಮಾರು 12,000 ರೂಪಾಯಿಗಳ ಬೆಲೆಯೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಬಹುದು ಎಂದು ಹೇಳಲಾಗಿದೆ. ಈ ಮೂಲಕ ಈ ಫೋನ್ ನಥಿಂಗ್ ಫೋನ್ 2a ಗಿಂತ ಗಮನಾರ್ಹವಾಗಿ ಕಡಿಮೆ ದರದಲ್ಲಿ ಲಭ್ಯ ಇರಲಿದೆ. ಯಾಕೆಂದರೆ ಈ ಫೋನ್ 23,999 ರೂ.ಗಳ ಬೆಲೆ ಹೊಂದಿದೆ.

ಇನ್ನು ಈ ಫೋನ್‌ನ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಪ್ಲಾಸ್ಟಿಕ್ ಬಾಡಿಯನ್ನು ಹೊಂದಿರಬಹುದು ಎಂದು ಹೇಳಲಾಗಿದ್ದು, ಇದು ಪ್ರವೇಶ ಮಟ್ಟದ ಡಿವೈಸ್‌ಗೆ ಸೂಕ್ತವಾದ ಆಯ್ಕೆಯಾಗಿದೆ. ಹಾಗೆಯೇ ಈ ಫೋನ್‌ನ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್‌ನಿಂದ ರಕ್ಷಿಸಬಹುದು ಎನ್ನಲಾಗಿದ್ದು, ಕಿತ್ತಳೆ, ಬಿಳಿ ಮತ್ತು ಕಪ್ಪು ಬಣ್ಣದ ಆಯ್ಕೆಯಲ್ಲಿ ಈ ಫೋನ್‌ ಲಾಂಚ್‌ ಆಗಲಿದೆ ಎಂದು ಲೀಕ್‌ ವರದಿಗಳಲ್ಲಿ ಉಲ್ಲೇಖ ಮಡಲಾಗಿದೆ.

ನಥಿಂಗ್‌ ಸಬ್‌ ಬ್ರ್ಯಾಂಡ್‌ CMF ನಿಂದ ಚೊಚ್ಚಲ ಫೋನ್‌! ಫೀಚರ್ಸ್‌ ಲೀಕ್‌

ಹಾಗೆಯೇ ಈ ಫೋನ್ 6.5 ಇಂಚಿನ ಡಿಸ್‌ಪ್ಲೇ ಹೊಂದಿರಬಹುದು ಎಂದು ಹೇಳಲಾಗಿದ್ದು, ಇದರ ಕ್ಯಾಮೆರಾದ ಬಗ್ಗೆ ವಿವರಗಳು ವಿರಳವಾಗಿದ್ದರೂ, ಇದು ಒಂದೇ ರಿಯರ್‌ ಪ್ಯಾನಲ್‌ ಅನ್ನು ಹೊಂದಿರಲಿದೆ ಎಂದು ಕೆಲವು ಮಾಹಿತಿಗಳಿಂದ ತಿಳಿದುಬಂದಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 5G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಬಹುದು ಎಂದು ನಂಬಲಾಗಿದೆ.

ಸಾಫ್ಟ್‌ವೇರ್ ವಿಷಯದಲ್ಲಿ, ಫೋನ್ ನಥಿಂಗ್ ಓಎಸ್‌ನಲ್ಲಿ ರನ್ ಆಗಬಹುದು ಎಂದು ಹೇಳಲಾಗುತ್ತಿದೆ. ಆದರೂ ಇದು ಸಂಪೂರ್ಣ ಫೀಚರ್ಸ್‌ ಅನ್ನು ನೀಡದಿರಬಹುದು. ಇದರ ಜೊತೆಗೆ ಈ ಫೋನ್‌ಗೆ ಮೂರು ವರ್ಷಗಳ ಓಎಸ್ ನವೀಕರಣಗಳು ಮತ್ತು ನಾಲ್ಕು ವರ್ಷಗಳ ಭದ್ರತಾ ನವೀಕರಣದ ಭರವಸೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಹೆಚ್ಚುವರಿಯಾಗಿ, ಇದು 33W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿರಲಿದೆ ಎಂದು ಹೇಳಲಾಗಿದೆ.

ಒಟ್ಟಾರೆಯಾಗಿ, ಸೋರಿಕೆಯಾದ ಲೀಕ್‌ ಮಾಹಿತಿ ಗಮನಿಸಿದ್ರೆ ಇದು ಅಗ್ಗದ ಬೆಲೆಯ ಫೋನ್‌ಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಎರಡು ಮಾತಿಲ್ಲ. ಈ ನಡುವೆ ಸ್ಮಾರ್ಟ್‌ಫೋನ್ ಕಂಪನಿಯು ಇತ್ತೀಚೆಗೆ ನಥಿಂಗ್ ಫೋನ್ 2a ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಘೋಷಣೆ ಮಾಡಿದೆ. ನಥಿಂಗ್ ಫೋನ್ 2a ಟ್ರಾನ್ಫರೆಂಟ್‌ ಬ್ಯಾಕ್ ಮತ್ತು ಗ್ಲಿಫ್ ಇಂಟರ್‌ಫೇಸ್‌ನೊಂದಿಗೆ ವಿಶೇಷವಾದ ಫೋನ್‌ ಎಂದು ಗುರುತಿಸಿಕೊಂಡಿದೆ.

ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 7200 ಪ್ರೊ ಪ್ರೊಸೆಸರ್‌ನಲ್ಲಿಕಾರ್ಯನಿರ್ವಹಿಸಲಿದ್ದು, ಅಮೋಲೆಡ್‌ ಡಿಸ್ಪ್ಲೇ ಮತ್ತು ಸಮರ್ಥ ಕ್ಯಾಮೆರಾ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಅಲ್ಲದೆ ಬ್ಯಾಟರಿ ಬಾಳಿಕೆ ಅತ್ಯುತ್ತಮವಾಗಿದೆಯಾದರೂ ಫೋನ್ ಬಾಕ್ಸ್‌ನಲ್ಲಿ ಚಾರ್ಜರ್‌ ಇರುವಿದಿಲ್ಲ. ಇನ್ನು ವಿನ್ಯಾಸವು ಗಮನ ಸೆಳೆಯುವಂತಿದ್ದು, ಹಗುರವಾದ ನಿರ್ಮಾಣ ಮತ್ತು ಆರಾಮದಾಯಕ ಹಿಡಿತವನ್ನು ಹೊಂದಿದೆ.

ನಥಿಂಗ್‌ ಸಬ್‌ ಬ್ರ್ಯಾಂಡ್‌ CMF ನಿಂದ ಚೊಚ್ಚಲ ಫೋನ್‌! ಫೀಚರ್ಸ್‌ ಲೀಕ್‌

ಭಾರತದಲ್ಲಿ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕಾಗಿ ನಥಿಂಗ್ ಫೋನ್ 2a ಬೆಲೆ 23,999 ರೂ.ಗಳಾಗಿದೆ. ಹಾಗೆಯೇ 12GB RAM ಮತ್ತು 256GB ಸ್ಟೋರೇಜ್ ಸ್ಮಾರ್ಟ್‌ಫೋನ್‌ಗೆ 27,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ನಡುವೆ ಈ ಫೋನ್‌ಗಳಿಗೆ ವಿಶೇಷ ಕೊಡುಗೆ ಸಹ ಲಭ್ಯ ಇದ್ದು, ಈ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
It is learnt that CMF is now gearing up to launch its first smartphone. Some of the features of this phone have been leaked now and CMF will be launching its first smartphone in the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+