ಸ್ಮಾರ್ಟ್‌ಫೋನ್‌ಗೆ ಬದಲಾಗುವ ವೃಸ್ಟ್‌ಬ್ಯಾಂಡ್!!!
ನಿಮ್ಮ ವೃಸ್ಟ್ ಬ್ಯಾಂಡ್ ಅನ್ನು ಸ್ಮಾರ್ಟ್‌ಫೋನ್ ಅನ್ನಾಗಿಸುವ ಹೊಸ ತಂತ್ರಜ್ಞಾನ ಬಂದಿದೆ. ನಿಮ್ಮ ಕೈಯಲ್ಲಿ ವೃಸ್ಟ್ ಬ್ಯಾಂಡ್ ಅನ್ನು ಧರಿಸಿ ಕೈ ತಿರುಗಿಸಿದರೆ ಸಾಕು ಥಟ್ಟನೆ ಇದು ಸ್ಮಾರ್ಟ್‌ಫೋನ್ ಆಗಿ ಬದಲಾಗಿಬಿಡುತ್ತದೆ.
ಇದನ್ನೂ ಓದಿ: ಕೇವಲ 299 ಕ್ಕೆ ಗೂಗಲ್‌ನಲ್ಲಿ ಶಾಪಿಂಗ್ ಮಾಡಿ
ಬ್ರಾಸ್‌ಲೆಟ್ ಮಾದರಿಯಲ್ಲಿರುವ ಈ ವೃಸ್ಟ್ ಬ್ಯಾಂಡ್ ಅನ್ನು 6 ತಿಂಗಳ ಅವಧಿಯಲ್ಲಿ ತಯಾರಿಸಲಾಗಿದೆ. ಸ್ಟ್ಯಾಂಡ್‌ಲೋನ್ ಡಿವೈಸ್ ಆಗಿ ಈ ವೃಸ್ಟ್ ಬ್ಯಾಂಡ್ ಬಂದಿದ್ದು ನಿಮ್ಮ ಕೈಯನ್ನು ತಿರುಗಿಸಿದಾಗ ಇದು ಆಂಡ್ರಾಯ್ಡ್ ಇಂಟರ್ಫೇಸ್ ಆಗಿ ಮಾರ್ಪಡುತ್ತದೆ.

ಇದರಲ್ಲಿರುವ ಪ್ರೊಕ್ಸಿಮಿಟಿ ಸೆನ್ಸಾರ್‌ಗಳು ಬಳಕೆದಾರರ ಬೆರಳುಗಳು ಎಲ್ಲಿವೆ ಎಂಬುದನ್ನು ಕಂಡುಹುಡುಕುತ್ತದೆ ಮತ್ತು ಇನ್ನೊಂದು ಆಂಡ್ರಾಯ್ಡ್ ಡಿವೈಸ್‌ನೊಂದಿಗೆ ಇಂಟರ್ಯಾಕ್ಟ್ ಆಗಲು ಅವರನ್ನು ಅನುಮತಿಸುತ್ತವೆ. ಈ ಡಿವೈಸ್ ಬಳಕೆದಾರರನ್ನು ಇಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು ಅನುಮತಿಸುತ್ತವೆ.
ಪ್ರಸ್ತುತ ಸ್ಮಾರ್ಟ್‌ಫೋನ್‌ಗೆ ಪ್ಯಾರ್ ಮಾಡಲು, ಒಳಬರುತ್ತಿರುವ ಕರೆಗಳಿಗೆ ಉತ್ತರಿಸಲು ಮತ್ತು ಅವರ ಸ್ಮಾರ್ಟ್‌ಫೋನ್‌ನಲ್ಲಿ ಸ್ಪೀಕರ್ ಫೋನ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ಅನುಮತಿಸುತ್ತದೆ.
ಇನ್ನು ವೃಸ್ಟ್ ಬ್ಯಾಂಡ್‌ನಲ್ಲಿರುವ ಸಂಪರ್ಕ ಅಂಶಗಳನ್ನು ಗಮನಿಸಿದಾಗ ಇದು ವೈ-ಫೈ, ಬ್ಲ್ಯೂಟೂತ್ ಮತ್ತು ಮೈಕ್ರೋ ಯುಎಸ್‌ಬಿ ಪೋರ್ಟ್ ಅನ್ನು ಹೊಂದಿದೆ. 16ಜಿಬಿ ಹಾಗೂ 32ಜಿಬಿ ಸಂಗ್ರಹಣಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಇದನ್ನು ಲಭ್ಯವಾಗಿಸಿದೆ.
ಈ ವೃಸ್ಟ್‌ಬ್ಯಾಂಡ್ ಮಾರುಕಟ್ಟೆಯನ್ನು ಶೀಘ್ರದಲ್ಲಿಯೇ ತಲುಪಲಿದೆ ಎಂಬುದು ಮಾಹಿತಿಯಾಗಿದೆ.


Click it and Unblock the Notifications