ನಿಮ್ಮ ಹೆಸರು, ಫೋಟೊ, ಅಡ್ರೆಸ್ ಆನ್‌ಲೈನ್‌ನಲ್ಲಿ ಸಿಗುವ ಸಮಯ ದೂರವಿಲ್ಲ!!

ಭವಿಷ್ಯದಲ್ಲಿ ಪ್ರತಿಯೋರ್ವ ಸಾರ್ವಜನಿಕರ ಹೆಸರು, ಫೋಟೊ ಮತ್ತು ವಿಳಾಸಗಳೆಲ್ಲವೂ ಆನ್‌ಲೈನ್‌ನಲ್ಲಿ ಸಿಗುವ ಸಮಯ ದೂರವಿಲ್ಲ ಎನ್ನಬಹುದು.!!

|

ಆನ್‌ಲೈನ್‌ನಲ್ಲಿ ಪ್ರಸಿದ್ದ ವ್ಯಕ್ತಿಗಳ ಹೆಸರು ಮತ್ತು ವಿಳಾಸ ಮಾತ್ರ ದೊರೆಯುವುದು ಎಂದು ನೀವು ತಿಳಿದಿದ್ದರೆ ಇನ್ಮುಂದೆ ತಪ್ಪಾಗಬಹುದು.! ಏಕೆಂದರೆ ಭವಿಷ್ಯದಲ್ಲಿ ಪ್ರತಿಯೋರ್ವ ಸಾರ್ವಜನಿಕರ ಹೆಸರು, ಫೋಟೊ ಮತ್ತು ವಿಳಾಸಗಳೆಲ್ಲವೂ ಆನ್‌ಲೈನ್‌ನಲ್ಲಿ ಸಿಗುವ ಸಮಯ ದೂರವಿಲ್ಲ ಎನ್ನಬಹುದು.!!

ಹೌದು, ಆಧಾರ್ ಮೂಲಕ ಪ್ರತಿ ನಾಗರಿಕನ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿರುವ ಸರ್ಕಾರ ಮನೆಯ ವಿಳಾಸ ಹಾಗೂ ನೌಕರಿ ಮಾಡುವ ವಿಳಾಸವನ್ನೂ ಇನ್ನು ಮ್ಯಾಪ್ ಮಾಡಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ.! ಸಂಪರ್ಕ ಸಚಿವಾಲಯದ ಅಡಿಯಲ್ಲಿ ಬರುವ ಅಂಚೆ ಇಲಾಖೆಗೆ ಈ ಪ್ರಾಯೋಗಿಕ ಯೋಜನೆಯ ಹೊಣೆ ನೀಡಲಾಗಿದೆ.!!

 ನಿಮ್ಮ ಹೆಸರು, ಫೋಟೊ, ಅಡ್ರೆಸ್ ಆನ್‌ಲೈನ್‌ನಲ್ಲಿ ಸಿಗುವ ಸಮಯ ದೂರವಿಲ್ಲ!!

ಗೂಗಲ್ ಮ್ಯಾಪಿನಂತೆ ಸರಕಾರವೂ ಇ-ಪ್ರದೇಶಗಳನ್ನು ಗುರುತಿಸಲಿದ್ದು, ವಿಳಾಸದೊಂದಿಗೆ ಆಸ್ತಿಯ ಹೆಸರು, ಮಾಲೀಕತ್ವ, ಆಸ್ತಿಗೆ ಸಲ್ಲಿಸಿದ ತೆರಿಗೆ ಸೇರಿ ಮುಂತಾದ ವಿವರಗಳೂ ಇರಲಿವೆ. ಅಲ್ಲದೇ ವಿದ್ಯುತ್, ಗ್ಯಾಸ್, ನೀರಿನ ಪೂರೈಕೆ ಮುಂತಾದ ಕಾರ್ಯಗಳೂ ಕೂಡ ಈ ಮಾಹಿತಿಯ ಮೂಖಾಂತರವೇ ನಡೆಯಲಿವೆ ಎನ್ನುತ್ತಿವೆ ವರದಿಗಳು.!!

ಮೂರು ಪಿನ್‌ ಕೋಡ್ ಪ್ರದೇಶದಡಿಯಲ್ಲಿ ಎಲ್ಲ ಆಸ್ತಿ ವಿವರಗಳಿಗೂ ಆರು ಸಂಖ್ಯೆಗಳುಳ್ಳ ಡಿಜಿಟಲ್ ವಿಳಾಸ ನೀಡಲಾಗುವುದು ಎಂದು ವರದಿಗಳು ತಿಳಿಸಿದ್ದು, ಇದಕ್ಕಾಗಿ ಇ-ಲೊಕೇಷನ್ (e-location) ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ದಿಲ್ಲಿ ಹಾಗೂ ನೋಯ್ಡಾದ ಎರಡು ಅಂಚೆ ಕೋಡ್‌ ಪ್ರದೇಶದಡಿ ಈ ಯೋಜನೆ ಅಳವಡಿಕೆಗೆ ಅನುಮೋದನೆ ನೀಡಲಾಗಿದೆ.

 ನಿಮ್ಮ ಹೆಸರು, ಫೋಟೊ, ಅಡ್ರೆಸ್ ಆನ್‌ಲೈನ್‌ನಲ್ಲಿ ಸಿಗುವ ಸಮಯ ದೂರವಿಲ್ಲ!!

ಆಲ್ಫಾ ಸಂಖ್ಯೆಗಳುಳ್ಳ ಆರಂಕಿಯ ಕೋಡ್ ಮೂಲಕ ದೇಶಾದ್ಯಂತ ಈ ಯೋಜನೆ ವಿಸ್ತರಿಸುವ ಚಿಂತನೆ ಸರ್ಕಾರಕ್ಕಿದ್ದು, ಪ್ರತಿಯೋರ್ವ ಸಾರ್ವಜನಿಕರ ಹೆಸರು, ಫೋಟೊ ಮತ್ತು ವಿಳಾಸಗಳೆಲ್ಲವೂ ಪಡೆರಯುವ ವ್ಯವಸ್ಥೆ ಆನ್‌ಲೈನ್‌ನಲ್ಲಿ ಸಿಗುತ್ತದೆಯೋ ಅಥವಾ ಸರ್ಕಾರದ ಬಳೀ ಮಾತ್ರ ಉಳಿಯುವುದೋ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.!!

ಓದಿರಿ: ಭವಿಷ್ಯದ ನಗರ ನಿರ್ಮಾಣಕ್ಕೆ ಮುಂದಾದ ವಿಶ್ವದ ನಂ.1 ಶ್ರೀಮಂತ ಬಿಲ್‌ಗೆಟ್ಸ್!!..ಹೇಗಿರಲಿದೆ ನಗರ?

Best Mobiles in India

English summary
ministry of communications is working on a project that will accord a six-character alphanumeric digital address. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X