ಭವಿಷ್ಯದ ನಗರ ನಿರ್ಮಾಣಕ್ಕೆ ಮುಂದಾದ ವಿಶ್ವದ ನಂ.1 ಶ್ರೀಮಂತ ಬಿಲ್‌ಗೆಟ್ಸ್!!..ಹೇಗಿರಲಿದೆ ನಗರ?

|

ಹೆಚ್ಚು ಹಣವಿದ್ದವನು ಒಂದು ಸಾಮ್ರಾಜ್ಯ ನಿರ್ಮಿಸಿಕೊಳ್ಳಬಹುದು ಎಂದರೆ ಅದು ಅತಿಶಯೋಕ್ತಿ ಅಲ್ಲ. ಆದರೆ, ಈ ಕಾಲದಲ್ಲಿಯೂ ಅಂತಹ ಕಾರ್ಯಕ್ಕೆ ಯಾರು ಮುಂದಾಗುತ್ತಾರೆ ಎಂದು ಆಶ್ಚರ್ಯಪಡಬೇಡಿ. ಏಕೆಂದರೆ ಪ್ರಸ್ತುತ ವಿಶ್ವದ ನಂಬರ್ ಒನ್ ಶ್ರೀಮಂತ ಬಿಲ್‌ಗೆಟ್ಸ್ ತನ್ನದೇ ಆದ ನಗರವನ್ನು ನಿರ್ಮಿಸಲು ಮುಂದಾಗಿದ್ದಾನೆ.!!

ಹೌದು, ವಿಶ್ವದ ನಂಬರ್ ಒನ್ ಶ್ರೀಮಂತನಾಗಿರುವ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್‌ಗೆಟ್ಸ್ ತನ್ನದೇ ಸ್ಮಾರ್ಟ್‌ಸಿಟಿ ನಿರ್ಮಾಣಕ್ಕೆ ಮುಂದಾಗಿದ್ದು, ತಂತ್ರಜ್ಞಾನವೇ ಹೊತ್ತು ನಿಲ್ಲರಿರುವ ಮತ್ತು ದುಬೈ ಎಂಬ ಹೆಸರನ್ನು ಮರೆಸಬಹುದಾದ ಭವಿಷ್ಯದ ನಗರವೊಂದನ್ನು ಶೀಘ್ರದಲ್ಲಿಯೇ ನಿರ್ಮಿಸಲು ಮುಂದಾಗಿದ್ದಾರೆ.!

ವಿಶ್ವದಲ್ಲಿಯೇ ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿಕೊಂಡಿ ನಿರ್ಮಾಣವಾಗುವ ಈ ನಗರಕ್ಕೆ ಈಗಾಗಲೇ ಯೋಜನೆಗಳು ಸಿದ್ದಗೊಂಡಿದ್ದು, ಹಾಗಾದರೆ, ಬಿಲ್‌ಗೆಟ್ಸ್ ನಿರ್ಮಾಣದ ಸ್ಮಾರ್ಟ್‌ಸಿಟಿ ಹೆಸರೇನು? ನಿರ್ಮಾಣವಾಗಲಿರುವ ನಗರ ಹೇಗಿರಲಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

25000 ಎಕರೆ ಭೂಮಿಯಲ್ಲಿ ನಗರ!!

25000 ಎಕರೆ ಭೂಮಿಯಲ್ಲಿ ನಗರ!!

ಭವಿಷ್ಯದ ನಗರ ರೂಪಿಸಲು ಬಿಲ್‌ಗೇಟ್ಸ್ ಒಡೆತನದ ರಿಯಲ್ ಎಸ್ಟೇಟ್ ಹೂಡಿಕೆ ಸಂಸ್ಥೆಯು ಫಿನಿಕ್ಸ್ ನಗರದಿಂದ 50 ಕಿ.ಮಿ ದೂರದ ಟೊನೊಪಾ ಎಂಬ ಪ್ರದೇಶದಲ್ಲಿ 25000 ಎಕರೆ ಭೂಮಿಯನ್ನು ಖರೀದಿಸಿದೆ. ಈ ಭೂಮಿ ಖರೀದಿಗಾಗಿ ಈಗಾಗಲೇ 80 ದಶಲಕ್ಷ ಡಾಲರ್ (5222400000.00 ರೂ.) ಅನ್ನು ಬಿಲ್‌ಗೇಟ್ಸ್ ಒಡೆತನದ ರಿಯಲ್ ಎಸ್ಟೇಟ್ ಸಂಸ್ಥೆ ಖರ್ಚು ಮಾಡಿದೆ.!

ಭವಿಷ್ಯದ ನಗರದ ಹೆಸರು ಬೆಲ್ಮಾಂಟ್!!

ಭವಿಷ್ಯದ ನಗರದ ಹೆಸರು ಬೆಲ್ಮಾಂಟ್!!

ಬಿಲ್‌ಗೇಟ್ಸ್ ಒಡೆತನದ ರಿಯಲ್ ಎಸ್ಟೇಟ್ ಹೂಡಿಕೆ ಮಾಡಿ ನಿರ್ಮಿಸುತ್ತಿರುವ ಈ ಸಿಟಿ ಬಿಲ್‌ಗೇಟ್ಸ್ ಚಿಂತನೆ ಮೀರಿಸುವ ಸಾಧ್ಯತೆಗಳನ್ನು ಒಳಗೊಂಡಿದೆ. ಸಾವಿರಾರು ಜನರ ಪರಿಶ್ರಮದಿಂದ ಈ ಭವಿಷ್ಯದ ನಗರ ನಿರ್ಮಾಣವಾಗುತ್ತಿದ್ದು, ಈ ಭವಿಷ್ಯದ ನಗರಕ್ಕೆ 'ಬೆಲ್ಮಾಂಟ್' ಎಂದು ಹೇಸರಿಡಲಾಗುವುದು ಎಂದು ಹೇಳಲಾಗಿದೆ.!!

ಹೇಗೆ ನಿರ್ಮಾಣವಾಗಲಿದೆ ಬೆಲ್ಮಾಂಟ್ ನಗರ?

ಹೇಗೆ ನಿರ್ಮಾಣವಾಗಲಿದೆ ಬೆಲ್ಮಾಂಟ್ ನಗರ?

ಉನ್ನತ-ತಂತ್ರಜ್ಞಾನದ ಮೂಲಕ ಭವಿಷ್ಯದ ನಗರ 'ಬೆಲ್ಮಾಂಟ್' ನಿರ್ಮಾಣವಾಗಲಿದ್ದು, ನಗರದಲ್ಲಿ ಸುಮಾರು 3800 ಎಕರೆ ವಾಣಿಜ್ಯ ಮತ್ತು ಕಚೇರಿ ಸ್ಥಳಕ್ಕೆ ಅವಕಾಶ ಕಲ್ಪಿಸಲಿದೆ ಮತ್ತು 470 ಎಕರೆ ಸಾರ್ವಜನಿಕ ಶಾಲೆಗಳಿಗೆ ಮತ್ತು ವಸತಿ ಘಟಕಗಳಿಗೆ ಲಭ್ಯವಿದ್ದರೆ, ಇನ್ನುಳಿದ ಜಾಗ ರಸ್ತೆ ಮತ್ತು ವಸತಿ ಪ್ರದೇಶಗಳಿಗೆ ಬಳಕೆಯಾಗಲಿದೆ.!!

ತಂತ್ರಜ್ಞಾನವನ್ನೇ ಹೊದ್ದಿರಲಿದೆ!!

ತಂತ್ರಜ್ಞಾನವನ್ನೇ ಹೊದ್ದಿರಲಿದೆ!!

ಬಿಲ್ ಗೇಟ್ಸ್ ನಾವೀನ್ಯತೆಗಾಗಿ ಹೆಸರುವಾಸಿಯಾಗಿದ್ದು ಸ್ಮಾರ್ಟ್‌ಸಿಟಿಗಾಗಿ ಅವರು ಸರಿಯಾದ ಸ್ಥಳವನ್ನು ಆಯ್ಕೆ ಮಾಡಿದ್ದಾರೆ. ಭೂಮಿಯನ್ನು ಖರೀದಿಸುವುದರಲ್ಲಿಯೂ ಸ್ಮಾರ್ಟ್ ಚಲನೆಯನ್ನು ತೋರಿದ್ದು, ಭವಿಷ್ಯದ ನಗರವನ್ನು ರೂಪಿಸಲು ಯಾವ ಯಾವ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು ಎನ್ನುವುದು ಅವರ ಕಲ್ಪನೆಯಲ್ಲಿರಬಹುದು ಎಂದು ಟೆಕ್ನಾಲಜಿ ಕೌನ್ಸಿಲ್‌ನ ರಾನ್ ಸ್ಕಾಟ್ ಹೇಳಿದ್ದಾರೆ.!!

ಭವಿಷ್ಯದ ನಗರ ನಿರ್ಮಾಣ ಯಾವಾಗ?

ಭವಿಷ್ಯದ ನಗರ ನಿರ್ಮಾಣ ಯಾವಾಗ?

ಭವಿಷ್ಯದ ನಗರ ನಿರ್ಮಾಣಕ್ಕಾಗಿ ಈಗಾಗಲೇ ಜಾಗವನ್ನು ಖರೀದಿಸಿಲಾಗಿದ್ದು, ಆದರೆ, ನಗರ ನಿರ್ಮಾಣ ಕಾರ್ಯ ಎಂದು ಶುರುವಾಗಲಿದೆ ಎಂಬ ಮಾಹಿತಿ ಮಾತ್ರ ಸ್ಪಷ್ಟವಾಗಿಲ್ಲ. ಆದರೆ, ಮುಂದಿನ 5 ರಿಂದ 10 ವರ್ಷಗಳಲ್ಲಿ ಭವಿಷ್ಯದ ನಗರವೊಂದನ್ನು ನಾವು ನೋಡಬಹುದು ಎಂದು ರಾನ್ ಸ್ಕಾಟ್ ಅವರು ಅಭಿಪ್ರಾಯಪಟ್ಟಿದ್ದಾರೆ!!

5000mAh ಬ್ಯಾಟರಿ ಫೋನ್ 'ಜಿಯೋನಿ ಎಮ್7 ಪವರ್' ಲಾಂಚ್!..ಟ್ರೆಂಡ್ ಹೆಚ್ಚಿಸಿದ ಡಿಸ್‌ಪ್ಲೇ!!5000mAh ಬ್ಯಾಟರಿ ಫೋನ್ 'ಜಿಯೋನಿ ಎಮ್7 ಪವರ್' ಲಾಂಚ್!..ಟ್ರೆಂಡ್ ಹೆಚ್ಚಿಸಿದ ಡಿಸ್‌ಪ್ಲೇ!!

Best Mobiles in India

English summary
The smart city will be called Belmont. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X