UPI: ಇನ್ಮುಂದೆ ಸುಲಭವಾಗಿ ಯುಪಿಐ ಮೂಲಕ ರೈಲು ಟಿಕೆಟ್ ಖರೀದಿಸಬಹುದು!
ಬೆಂಗಳೂರು ರೈಲು ನಿಲ್ದಾಣದಿಂದ (Bangalore Railway Station) ದಿನಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಅಂದರೆ ಜನಸಂದಣಿಯ ಸರಾಸರಿ ಹರಿವು ದಿನಕ್ಕೆ 2 ರಿಂದ 2.5 ಲಕ್ಷ ಪ್ರಯಾಣಿಕರಿಂದ 3 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ವರೆಗೆ ಇರಲಿದೆ. ಈ ಕಾರಣಕ್ಕೆ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸುವಂತಹ ಪರಿಣಾಮಕಾರಿ ಕಾರ್ಯತಂತ್ರಗಳನ್ನು ಇಲಾಖೆ ಹೊಂದಿಲ್ಲ ಎಂದು ಸಾಕಷ್ಟು ದೂರು ಕೇಳಿಬಂದಿದ್ದವು.
ಬೆಂಗಳೂರು ಐಟಿ ಕಂಪನಿಗಳು ಮತ್ತು ಕೆಲಸ ಮಾಡುವ ವೃತ್ತಿಪರರಿಗೆ ಹೆಸರುವಾಸಿಯಾಗಿರುವುದು ನಿಮ್ಮೆಲ್ಲರಿಗೂ ತಿಳಿದ ವಿಚಾರ. ಈ ಕಾರಣಕ್ಕೆ ಇಲ್ಲಿನ ರೈಲು ನಿಲ್ದಾಣಗಳು (Railway station) ಯಾವಾಗಲೂ ಅತ್ಯಂತ ಜನನಿಬಿಡವಾಗಿದೆ. ಅದರಲ್ಲೂ ಬೆಂಗಳೂರು ಸಿಟಿ ರೈಲು ನಿಲ್ದಾಣವು ನಗರದಲ್ಲಿ ಅತ್ಯಂತ ಜನನಿಬಿಡವಾದ ಸ್ಥಳವಾಗಿದ್ದು, ಟಿಕೆಟ್ ಖರೀದಿ ಮಾಡಲು ನೂರಾರು ಮೀಟರ್‌ಗಟ್ಟಲೇ ಕ್ಯೂ ನಿಲ್ಲಬೇಕಿತ್ತು. ಆದರೆ, ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ.

ಹೌದು, ಬೆಂಗಳೂರಿನಿಂದ ಬೇರೆ ಕಡೆ ರೈಲಿನಲ್ಲಿ ಹೊರಡುವುದು ಉತ್ತಮ ಎನಿಸಿದರೂ ಸಹ ಟಿಕೆಟ್ ಖರೀದಿ ವಿಚಾರಕ್ಕೆ ಬಂದರೆ ಸಾಕಪ್ಪಾ ಈ ಬೆಂಗಳೂರು ಸಹವಾಸ ಎಂದೆನಿಬಿಡುತ್ತದೆ. ಅಷ್ಟರಮಟ್ಟಿಗೆ ಜನ ಕಿಕ್ಕಿರಿದು ಟಿಕೆಟ್ ಖರೀದಿ ಮಾಡಲು ಬರುತ್ತಾರೆ. ಆದರೆ, ಇದಕ್ಕೆ ಈಗ ಕಡಿವಾಣ ಹಾಕಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಆಗಾಗ್ಗೆ ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ ಬಹಳ ಸುಲಭವಾಗಿ ಯುಪಿಐ (UPI) ಮೂಲಕ ಟಿಕೆಟ್ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಏನಿದು ಹೊಸ ಸೇವೆ? ಇದರಿಂದ ಆಗುವ ಇನ್ನಷ್ಟು ಪ್ರಯೋಜನ ಏನು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ಯುಪಿಐ ಮೂಲಕ ರೈಲು ಟಿಕೆಟ್ ಖರೀದಿ: ಬೆಂಗಳೂರು ರೈಲು ನಿಲ್ದಾಣದಿಂದ (Bangalore Railway Station) ದಿನಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಅಂದರೆ ಜನಸಂದಣಿಯ ಸರಾಸರಿ ಹರಿವು ದಿನಕ್ಕೆ 2 ರಿಂದ 2.5 ಲಕ್ಷ ಪ್ರಯಾಣಿಕರಿಂದ 3 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ವರೆಗೆ ಇರಲಿದೆ. ಈ ಕಾರಣಕ್ಕೆ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸುವಂತಹ ಪರಿಣಾಮಕಾರಿ ಕಾರ್ಯತಂತ್ರಗಳನ್ನು ಇಲಾಖೆ ಹೊಂದಿಲ್ಲ ಎಂದು ಸಾಕಷ್ಟು ದೂರು ಕೇಳಿಬಂದಿದ್ದವು.

ಈ ಬೆಳವಣಿಗೆ ಭಾಗವಾಗಿ ಈಗ ಬೆಂಗಳೂರು ರೈಲ್ವೆ ವಿಭಾಗದಲ್ಲಿ ಮೊದಲ ಉಪಕ್ರಮ ಆರಂಭ ಮಾಡಲಾಗಿದೆ. ಕೆಎಸ್‌ಆರ್ ರೈಲು ನಿಲ್ದಾಣದ ಕೌಂಟರ್‌ಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸಲು ಯುಪಿಐ ಸಕ್ರಿಯಗೊಳಿಸಿದ ಪಾವತಿಯನ್ನು ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಶೀಘ್ರದಲ್ಲೇ ಈ ವ್ಯವಸ್ಥೆಯನ್ನು ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳಲ್ಲಿ ಆರಂಭಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಇನ್ನು ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸಲು ದೀರ್ಘ ಸರತಿ ಉಂಟಾಗಲಿದ್ದು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಯನ್ನು ಸ್ವೀಕರಿಸು ಕೆಲಸ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ನಿಲ್ದಾಣದ ಮುಖ್ಯ ಪ್ರವೇಶದಲ್ಲಿರುವ ಯುಟಿಎಸ್ ಕಚೇರಿಯ ಕೌಂಟರ್ ಸಂಖ್ಯೆ 8 ರಲ್ಲಿ ಮಾರ್ಚ್ 2 ರಿಂದ ಈ ಸೇವೆ ಆರಂಭಿಸಲಾಗಿದೆ ಎಂದು ವಿವರಿಸಿದ್ದಾರೆ.

ಈ ನಡುವೆ ಇ-ಟಿಕೆಟ್‌ಗಳನ್ನು ಖರೀದಿಸಲು ಮೊಬೈಲ್‌ಗಳಲ್ಲಿ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ (UTS) ಸಹ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಇದರಲ್ಲಿ ಕೊಂಚ ಸಮಸ್ಯೆ ಏನೆಂದರೆ ರೈಲ್ವೆ ನಿಲ್ದಾಣದ 30 ಮೀಟರ್‌ಗಳ ಒಳಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಆಗುವುದಿಲ್ಲ. ಪಾಕೆಟ್‌ನಲ್ಲಿ ಹಣ ಇಟ್ಟುಕೊಳ್ಳದವರು ಅಥವ ನಿಲ್ದಾಣದ ಒಳಗೆ ಟಿಕೆಟ್ ಕಾಯ್ದಿರಿಸಲು ಬಯಸುವವರಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ.
ಯುಟಿಎಸ್ ಆಪ್ ಬಳಕೆ ಮಾಡುವುದು ಹೇಗೆ?
ಹಂತ 1: ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಯುಟಿಎಸ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ. ಇದೆಲ್ಲಾ ಆದ ಮೇಲೆ ಮೆನುವಿನಿಂದ 'ಪ್ಲಾಟ್‌ಫಾರ್ಮ್ ಬುಕಿಂಗ್' ಆಯ್ಕೆಮಾಡಿ.
ಹಂತ 1: ನಂತರದಲ್ಲಿ ಪೇಪರ್‌ಲೆಸ್ ಫಾರ್ಮ್ಯಾಟ್ ಆಯ್ಕೆಮಾಡಿ. ಬಳಿಕ ನಿಲ್ದಾಣದ ಹೆಸರು ಮತ್ತು ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಿ ಮತ್ತು ಮುಂದುವರೆಯಲು ಕ್ಲಿಕ್ ಮಾಡಿ. ಇದೆಲ್ಲವನ್ನು ಮಾಡಿದ ಮೇಲೆ ವ್ಯಾಲೆಟ್ ಅಥವಾ ಇತರ ಪಾವತಿ ಆಯ್ಕೆಗಳನ್ನು ಬಳಸಿಕೊಂಡು ಪಾವತಿಸಲು ಕ್ಲಿಕ್ ಮಾಡಿ. ಯಶಸ್ವಿ ಪಾವತಿಯ ನಂತರ ನಿಮ್ಮ ಟಿಕೆಟ್ ಅನ್ನು ಡಿಸ್‌ಪ್ಲೇ ಮೇಲೆ ಪ್ರದರ್ಶಿಸಲಾಗುತ್ತದೆ.


Click it and Unblock the Notifications








