Home
ಸುದ್ದಿಜಾಲ

ಲಾಂಚ್‌ ಆಗಿಯೇ ಬಿಡ್ತು, ಈ ವಿಭಿನ್ನ ಇಯರ್‌ಬಡ್ಸ್‌; ಇದನ್ನು 360 ಡಿಗ್ರಿ ತಿರುಗಿಸಬಹುದು!

ವಿಭಿನ್ನ ರಚನೆಯ ಸ್ಮಾರ್ಟ್‌ ಆಡಿಯೋ ಉತ್ಪನ್ನಗಳಿಗೆ ಹೆಸರುವಾಸಿಯಾದ ನು ರಿಪಬ್ಲಿಕ್ ( Nu Republic ) ಸಂಸ್ಥೆಯು ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್‌ (Cyberstud SPIN fidget spinner) ಇಯರ್‌ಬಡ್ಸ್‌ ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ಡಿವೈಸ್‌ ಮೆಟಲ್ ಗ್ಲೈಡರ್‌ಗಳೊಂದಿಗೆ ಸ್ಟನ್ನಿಂಗ್‌ ಲುಕ್‌ನಲ್ಲಿದ್ದು, 360 ಡಿಗ್ರಿ ತಿರುಗುವ ರಚನೆ ಅನ್ನು ಪಡೆದಿದೆ. ಅಲ್ಲದೇ ಇಯರ್‌ಬಡ್ಸ್ ತೆಗೆಯುವಾಗ ಮತ್ತು ಇಡುವಾಗ ಸ್ವೂಶ್ ಸೌಂಡ್‌ (Swoosh Sound) ಕೇಳುತ್ತದೆ.

ಹೌದು, ನು ರಿಪಬ್ಲಿಕ್ ( Nu Republic ) ಸಂಸ್ಥೆಯು ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್‌ ( Cyberstud SPIN fidget spinner ) ಇಯರ್‌ಬಡ್ಸ್ ಡಿವೈಸ್‌ ಅನ್ನು ಇದೀಗ ಅಧಿಕೃತವಾಗಿ ಘೋಷಿಸಿದೆ. ಈ ಇಯರ್‌ಬಡ್ಸ್‌ 40 ms ನ ಕಡಿಮೆ ಲೇಟೆನ್ಸಿ ಸೌಲಭ್ಯ ಪಡೆದಿದ್ದು, ಗೇಮಿಂಗ್‌ ಪ್ರಿಯರಿಗೆ ಹೆಚ್ಚು ಆಕರ್ಷಕ ಎನುಸುತ್ತದೆ.

ಲಾಂಚ್‌ ಆಗಿಯೇ ಬಿಡ್ತು, ಈ ವಿಭಿನ್ನ ಇಯರ್‌ಬಡ್ಸ್‌; 360 ಡಿಗ್ರಿ ತಿರುಗಿಸಬಹುದು!

ಹಾಗೆಯೇ ಈ ಇಯರ್‌ಬಡ್‌ಗಳು ಇತ್ತೀಚಿನ ವೈರ್‌ಲೆಸ್ ತಂತ್ರಜ್ಞಾನ ಬ್ಲೂಟೂತ್ V5.3 ಸೌಲಭ್ಯ ಪಡೆದಿದೆ. ಇದರ ಜೊತೆಗೆ ವೇಗದ ಚಾರ್ಜಿಂಗ್ ತಂತ್ರಜ್ಞಾನ, ಗೇಮ್‌ ಹಾಗೂ ಮ್ಯೂಸಿಕ್‌ ಒಳಗೊಂಡಂತೆ ಡ್ಯುಯಲ್ ಮೋಡ್‌ಗಳು ಆಯ್ಕೆ ಪಡೆದಿದೆ. ಅಲ್ಲದೇ ಕಡಿಮೆ ಸುಪ್ತತೆ (40MS) ಸೇರಿದಂತೆ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಹಾಗಾದರೇ ಈ ಸ್ಟೈಲಿಶ್‌ ಇಯರ್‌ಬಡ್ಸ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್‌ - ಫೀಚರ್ಸ್‌

ಇದು ಭಾರತದಲ್ಲಿ ಮೊದಲ ಫಿಡ್ಜೆಟ್ ಸ್ಪಿನ್ನರ್ ಮಾದರಿಯ ಇಯರ್‌ಬಡ್ಸ್ ಎನ್ನಲಾಗಿದೆ. ಇದು ಗೇಮಿಂಗ್ ಮತ್ತು ದೈನಂದಿನ ಟೆಕ್ ಅನುಭವಗಳನ್ನು ಹೆಚ್ಚಿಸುವ ಆಕರ್ಷಕ ಮತ್ತು ಕ್ರಿಯಾತ್ಮಕ ಪರಿಕರವನ್ನು ಒದಗಿಸುತ್ತದೆ. ಅಲ್ಲದೇ ಸ್ವೂಶ್ ಸೌಂಡ್‌ನೊಂದಿಗೆ ಮೆಟಲ್ ಗ್ಲೈಡರ್‌ಗಳೊಂದಿಗೆ ಆಕರ್ಷಕ ಕೇಸ್ ರಚನೆ ಇದೆ. ಇಯರ್‌ಬಡ್ಸ್ ತೆಗೆಯುವಾಗ ಮತ್ತು ಇಡುವಾಗ ಕತ್ತಿ ಜಳಪಿಸಿದಂತಹ ಶಬ್ದ ಕೇಳಿಸುತ್ತದೆ.

ಇದು 20Hz ನಿಂದ 20kHz ವರೆಗಿನ ಶ್ರೇಣಿಯನ್ನು ಪಡೆದಿದ್ದು, ಅತ್ಯುತ್ತಮ ಆಡಿಯೋ ಅನುಭವವನ್ನು ಒದಗಿಸಲಿದೆ. ಜೊತೆಗೆ ಬಳಕೆದಾರರು ಗೇಮಿಂಗ್ ಸೆಷನ್‌ನಲ್ಲಿ ಇದ್ದರೂ ಕೂಡಾ ಮ್ಯೂಸಿಕ್‌ ಮೋಡ್‌ ಮೂಲಕ ಮ್ಯೂಸಿಕ್ ಆನಂದಿಸಬಹುದು. ಈ ಇಯರ್‌ಬಡ್‌ಗಳು X Bass ತಂತ್ರಜ್ಞಾನ ಮತ್ತು ENC ಮೋಡ್ ಕೂಡಾ ಪಡೆದಿವೆ. ಒಮ್ಮೆ ಚಾರ್ಜ್ ಮಾಡಿದರೆ 310 ಗಂಟೆಗಳ ಸ್ಟ್ಯಾಂಡ್ ಬೈ ಟೈಮ್‌ ನೀಡುತ್ತದೆ.

ಈ ನೂತನ ಇಯರ್‌ಬಡ್‌ಗಳು ಉತ್ತಮ ಬ್ಲೂಟೂತ್ ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು, ಸುಮಾರು 15 ಮೀಟರ್‌ಗಳ ಅಂತರದ ವರೆಗೆ ವಿಸ್ತರಿಸುತ್ತದೆ. ಇದು ಯಾವುದೇ ಅಡಚಣೆಗಳಿಲ್ಲದೆ ತಡೆರಹಿತ ಕನೆಕ್ಟಿವಿಟಿ ಒದಗಿಸುತ್ತದೆ. ಇನ್ನು ಸ್ಟೈಲಿಶ್ ಸ್ಪಿನ್ನಿಂಗ್ ಫಿಡ್ಜೆಟ್ ಕೇಸ್ ವಿಭಿನ್ನ ಮನರಂಜನೆಯನ್ನು ಕೂಡಾ ನೀಡುತ್ತದೆ. ಅಲ್ಲದೇ ಇದು 70 ಗಂಟೆಗಳ ವರೆಗೆ ಪ್ಲೇಟೈಮ್ ಅನ್ನು ಸಪೋರ್ಟ್ ಮಾಡುತ್ತದೆ.

ಈ ಡಿವೈಸ್‌ ಡ್ಯುಯಲ್ ಮೋಡ್ ಸೌಲಭ್ಯ ಪಡೆದಿದ್ದು, ಒಂದೇ ಸಮಯಕ್ಕೆ ಗೇಮ್‌ ಹಾಗೂ ಮ್ಯೂಸಿಕ್‌ ಕೇಳಲು ಸಾಧ್ಯವಾಗುತ್ತದೆ. ಹಾಗೆಯೇ ಅತ್ಯುತ್ತಮ ಗೇಮಿಂಗ್ ಅನುಭವಕ್ಕಾಗಿ 40ms ಕಡಿಮೆ ಲೇಟೆನ್ಸಿ ಆಯ್ಕೆ ಸಹ ಪಡೆದಿದೆ. ಅಲ್ಲದೇ ಈ ಇಯರ್‌ಬಡ್‌ಗಳು ಸ್ಪ್ಲಾಶ್ ಮತ್ತು ಬೆವರು ನಿರೋಧಕ ರಚನೆ ಪಡೆದಿರುವುದು ಪ್ಲಸ್‌ ಪಾಯಿಂಟ್‌ಗಳಲ್ಲಿ ಒಂದು. ಅಂದಹಾಗೆ ನು ರಿಪಬ್ಲಿಕ್ನ ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್ಸ್‌ 2499 ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.

Best Mobiles in India

English summary
Nu Republic cyberstud spin fidget spinner earbuds launched. Check Price, Specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+