ಶೀಘ್ರದಲ್ಲೇ ಲಾಂಚ್ ಆಗಲಿದೆ ವಿಭಿನ್ನ ಇಯರ್‌ಬಡ್; ಇದರ ಲುಕ್‌ಗೆ ಗ್ರಾಹಕರು ಫಿದಾ!
ಪ್ರಸ್ತುತ ಆಡಿಯೋ ಡಿವೈಸ್‌ಗಳಲ್ಲಿ ಹಲವು ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿವೆ. ಆ ಪೈಕಿ ಭಿನ್ನ ಸ್ಮಾರ್ಟ್ ಆಡಿಯೋ ಡಿವೈಸ್‌ಗಳ ಮೂಲಕ ಗುರುತಿಸಿಕೊಂಡಿರುವ ಸ್ವದೇಶಿ ಮೂಲದ ನು ರಿಪಬ್ಲಿಕ್ ( Nu Republic ) ಸಂಸ್ಥೆಯು ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಹೊಸದೊಂದು ಇಯರ್‌ಬಡ್ಸ್ ಡಿವೈಸ್ ಲಾಂಚ್ ಮಾಡಲು ಸಕಲ ಸಜ್ಜಾಗಿದೆ. ಬರಲಿರುವ ನೂತನ ಇಯರ್‌ಬಡ್ಸ್ ಡಿವೈಸ್ ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್ (Cyberstud SPIN fidget spinner) ಆಗಿದೆ. ಇದು 360 ಡಿಗ್ರಿ ತಿರುಗುವ ರಚನೆ ಅನ್ನು ಪಡೆದಿರಲಿದೆ ಎಂದು ವರದಿಯಾಗಿದೆ.
ಹೌದು, ನು ರಿಪಬ್ಲಿಕ್ ( Nu Republic ) ಸಂಸ್ಥೆಯು ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್ ( Cyberstud SPIN fidget spinner ) ಇಯರ್‌ಬಡ್ಸ್ ಡಿವೈಸ್ ಅನ್ನು ಸದ್ಯದಲ್ಲೇ ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಎಂಟ್ರಿ ಕೊಡಲಿರುವ ನೂತನ ಇಯರ್‌ಬಡ್ಸ್ 40 ms ನ ಕಡಿಮೆ ಲೇಟೆನ್ಸಿ ಸೌಲಭ್ಯ ಪಡೆದಿರಲಿದೆ. ಇದು ಟೆಕ್ ಉತ್ಪನ್ನಗಳ ಪ್ರಿಯರಿಗೆ ಹಾಗೂ ಗೇಮಿಂಗ್ ಪ್ರಿಯರಿಗೆ ಹೆಚ್ಚು ಆಕರ್ಷಕ ಎನುಸುತ್ತದೆ.

ಹೊಸ ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್ ಇಯರ್‌ಬಡ್ಸ್ ಡಿವೈಸ್ ಸೈಬರ್ಪಂಕ್ - ಎಸ್ಕ್ಯೂ ವಿನ್ಯಾಸವನ್ನು ಪಡೆದಿದ್ದು, ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಇದೆ. ಹಾಗೆಯೇ ಈ ಇಯರ್‌ಬಡ್ ಅನ್ನು ನು ರಿಪಬ್ಲಿಕ್ ಸಂಸ್ಥೆಯು ಭಾರತದಲ್ಲಿ ಲಾಂಚ್ ಮಾಡುವ ಜೊತೆಗೆ ನೇಪಾಳ, ಶ್ರೀಲಂಕಾ ಮತ್ತು ಯುಎಇ ಯಂತಹ ಇತರ ರಾಷ್ಟ್ರಗಳ ಮಾರುಕಟ್ಟೆಗಳಲ್ಲಿಯೂ ಲಭ್ಯ ಮಾಡಲಿದೆ. ಈ ಹೊಸ ಇಯರ್‌ಬಡ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿರುವ ಈ ಇಯರ್‌ಬಡ್ ಸೈಬರ್‌ಸ್ಟಡ್ ಸ್ಪಿನ್ ಅನ್ನು 360 ಡಿಗ್ರಿ ಫಿಡ್ಜೆಟ್ ಸ್ಪಿನ್ನರ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಇದು ಸೈಬರ್‌ಪಂಕ್ ಡಿಸೈನ್ ಅನ್ನು ಪಡೆದುಕೊಂಡಿದೆ. ಇದು ಮೆಟಾಲಿಕ್ ರಚನೆ ಮತ್ತು ಗಾಢವಾದ ಕಲರ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಡಿವೈಸ್‌ನ ಪೋಸ್ಟರ್ ಸುಳಿವು ನೀಡಲಾಗಿದೆ.
ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್‌ಗಳು ಮೆಟಲ್ ಗ್ಲೈಡರ್‌ಗಳ ಅನ್ನು ಪಡೆದಿರುತ್ತದೆ. ಅದು ಸ್ಪನ್ ಮಾಡಿದಾಗ ಸ್ವೂಶ್ ಧ್ವನಿಯನ್ನು ಕೇಳಿಸುತ್ತದೆ. ಅವುಗಳ ಡ್ಯುಯಲ್ ಕಾರ್ಯವನ್ನು ಒತ್ತಿಹೇಳುತ್ತದೆ. ನಥಿಂಗ್ ಇಯರ್ ಮತ್ತು CMF ಬಡ್‌ಗಳಂತಹ ಮಾರುಕಟ್ಟೆಯಲ್ಲಿನ ಇತರ ಇಯರ್‌ಬಡ್‌ಗಳಿಗಿಂತ ಭಿನ್ನವಾಗಿ, ಸೈಬರ್‌ಸ್ಟಡ್ SPIN ಫಿಡ್ಜೆಟ್ ಸ್ಪಿನ್ನರ್ ಪರಿಕಲ್ಪನೆಯನ್ನು ಪ್ರಾಮಾಣಿಕವಾಗಿ ಸಂಯೋಜಿಸುತ್ತದೆ.
ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್ ಇಯರ್‌ಬಡ್ಸ್ ನಿರ್ದಿಷ್ಟವಾಗಿ ಗೇಮ್ ಪ್ರಿಯರಿಗಾಗಿಯೇ ಹೇಳಿ ಮಾಡಿದಂತೆ ಇದೆ. ಇನ್ನು ಈ ಡಿವೈಸ್ 40 ms ನ ಕಡಿಮೆ ಲೇಟೆನ್ಸಿ ಸಪೋರ್ಟ್ ಅನ್ನು ನೀಡುತ್ತದೆ. ಇದು CMF ಬಡ್ಸ್ ಗೇಮ್ ಮೋಡ್‌ನಲ್ಲಿ ಕಂಡುಬರುವ 120 ms ಗಿಂತ ತುಂಬಾ ಕಡಿಮೆ ಆಗಿದೆ. ಈ ಫೀಚರ್ ನು ರಿಪಬ್ಲಿಕ್ ಕನಿಷ್ಠ ಆಡಿಯೊ ವಿಳಂಬದೊಂದಿಗೆ ವರ್ಧಿತ ಗೇಮಿಂಗ್ ಅನುಭವವನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತಿದೆ ಎಂದು ಸೂಚಿಸುತ್ತದೆ.
ಅಂದಹಾಗೆ ಭಾರತದಲ್ಲಿ ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್ ಇಯರ್‌ಬಡ್ ಡಿವೈಸ್ ಬೆಲೆಯು 3,000 ರೂ. ಕ್ಕಿಂತ ಕಡಿಮೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸಾಧನವು ಟೆಕ್ ಪ್ರಿಯರಿಗೆ ಹಾಗೂ ಗೇಮಿಂಗ್ ಇಷ್ಟಪಡುವವರಿಗೆ ಸೂಕ್ತ ಎನಿಸುತ್ತದೆ. ಸೈಬರ್‌ಸ್ಟಡ್ ಸ್ಪಿನ್ ಭಾರತ, ನೇಪಾಳ, ಶ್ರೀಲಂಕಾ ಮತ್ತು ಯುಎಇ ರಾಷ್ಟ್ರಗಳಲ್ಲಿಯೂ ಬಿಡುಗಡೆ ಆಗಲಿದೆ.


Click it and Unblock the Notifications








