ಬಿಡುಗಡೆ ಆಗಿದೆ ಫುಲ್ ಡಿಫರೆಂಟ್ ಇಯರ್ಬಡ್ಸ್; ಸಖತ್ ಆಗಿದೆ ಇದರ LED ಲೈಟಿಂಗ್!
ಭಿನ್ನ ಮಾದರಿಯ ಆಡಿಯೋ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ 'ನು ರಿಪಬ್ಲಿಕ್' ( Nu Republic ) ಸಂಸ್ಥೆಯು ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಸೈಬರ್ಸ್ಟಡ್ X7 ANC TWS (Cyberstud X7 ANC TWS ) ಇಯರ್ಬಡ್ಸ್ ಡಿವೈಸ್ ಅನ್ನು ಬಿಡುಗಡೆ ಮಾಡಿದೆ. ಈ ಇಯರ್ಬಡ್ಸ್ RGB LED ಲೈಟ್ಸ್ ಜೊತೆಗೆ ಸ್ಟೈಲಿಶ್ ಲುಕ್ನಲ್ಲಿ ಇದ್ದು, ಇದು 70 ಗಂಟೆಗಳ ವರೆಗೆ ಪ್ಲೇ ಟೈಮ್ ಅನ್ನು ಒದಗಿಸಲಿದೆ.
ಹೌದು, ನು ರಿಪಬ್ಲಿಕ್ ( Nu Republic ) ಸಂಸ್ಥೆಯು ಸೈಬರ್ಸ್ಟಡ್ X7 ANC TWS (Cyberstud X7 ANC TWS) ಇಯರ್ಬಡ್ಸ್ ಡಿವೈಸ್ ಅನ್ನು ಇದೀಗ ಅಧಿಕೃತವಾಗಿ ಘೋಷಿಸಿದೆ. ಈ ಇಯರ್ಬಡ್ಸ್ 40 ms ನ ಕಡಿಮೆ ಲೇಟೆನ್ಸಿ ಸೌಲಭ್ಯ ಪಡೆದಿದ್ದು, ಇಯರ್ಬಡ್ಗಳು ತಡೆರಹಿತ ಆಡಿಯೊ ಮತ್ತು ವೀಡಿಯೊ ಸಿಂಕ್ ಅನ್ನು ನೀಡಲಿದೆ. ಹಾಗೆಯೇ ಗೇಮಿಂಗೂ ಪೂರಕ ರಚನೆ ಪಡೆದಿದೆ.

ಹಾಗೆಯೇ ಈ ಇಯರ್ಬಡ್ಸ್ 13mm ನಿಯೋಡೈಮಿಯಮ್ ಆಡಿಯೋ ಡ್ರೈವರ್ಗಳನ್ನು ಹೊಂದಿದೆ. ಅಲ್ಲದೇ ಸಕ್ರಿಯ ಶಬ್ದ ರದ್ದತಿ (ANC) ಸೌಲಭ್ಯ ಪಡೆದಿದ್ದು, ಇದು ಸ್ಪಷ್ಟವಾದ, ತಲ್ಲೀನಗೊಳಿಸುವ ವಾಯಿಸ್ ವ್ಯವಸ್ಥೆಯನ್ನು ಒಳಗೊಂಡಿದ್ದು, ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ (ENC) ಸೌಲಭ್ಯ ಸಹ ಪಡೆದುಕೊಂಡಿದೆ. ಹಾಗಾದರೇ ಈ ಇಯರ್ಬಡ್ಸ್ ಡಿವೈಸ್ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಸೈಬರ್ಸ್ಟಡ್ X7 ANC TWS - ಫೀಚರ್ಸ್
ನು ರಿಪಬ್ಲಿಕ್ ಸಂಸ್ಥೆಯ ಹೊಸ ಸೈಬರ್ಸ್ಟಡ್ X7 (Cyberstud X7) ಇಯರ್ಬಡ್ಗಳು ದಪ್ಪ RGB LED ಲೈಟ್ ಸೌಲಭ್ಯ ಪಡೆದುಕೊಂಡಿದೆ. ಈ ಡಿವೈಸ್ ergonomic shape ಆಕಾರ ಪಡೆದಿದ್ದು, ನಯವಾದ, ಸೈಬರ್ಪಂಕ್-ಪ್ರೇರಿತ ವಿನ್ಯಾಸವನ್ನು ಒಳಗೊಂಡಿದೆ. ದೀರ್ಘಾವಧಿಯ ವರೆಗೂ ಧರಿಸಲು ಇದು ಆರಾಮದಾಯಕ ಎನಿಸುವ ರಚನೆ ಅನ್ನು ಖಚಿತಪಡಿಸುತ್ತದೆ.
ಸೈಬರ್ಸ್ಟಡ್ X7 ಇಯರ್ಬಡ್ಸ್ ಡಿವೈಸ್ 13mm ನಿಯೋಡೈಮಿಯಮ್ ಆಡಿಯೋ ಡ್ರೈವರ್ಗಳನ್ನು ಒಳಗೊಂಡಿದೆ. ಹಾಗೆಯೇ ಸ್ಪಷ್ಟವಾದ, ತಲ್ಲೀನಗೊಳಿಸುವ ವಾಯಿಸ್ಗಾಗಿ ಇದು ಆಕ್ಟಿವ್ ನಾಯಿಸ್ ಕ್ಯಾನ್ಸಲೇಶನ್ (ANC) ಸೌಲಭ್ಯ ಕೂಡಾ ಪಡೆದಿದೆ. ಅಲ್ಲದೇ ಇದು ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ (ENC) ಸೌಲಭ್ಯ ಸಹ ಹೊಂದಿದೆ.
ಸೈಬರ್ಸ್ಟಡ್ X7 ಇಯರ್ಬಡ್ಸ್ ಡಿವೈಸ್ ಡ್ಯುಯಲ್ ಮೋಡ್ ಆಯ್ಕೆ ಪಡೆದಿದ್ದು, ಗೇಮ್ ಹಾಗೂ ಮ್ಯೂಸಿಕ್ ಎರಡಕ್ಕೂ ಸೈ ಎನ್ನಬಹುದಾಗಿದೆ. ಅಲ್ಲದೇ ಈ ಸಾಧನವು 40ms ಕಡಿಮೆ ಲೇಟೆನ್ಸಿ ಸೌಲಭ್ಯದೊಂದಿಗೆ, ಇಯರ್ಬಡ್ಗಳು ತಡೆರಹಿತ ಆಡಿಯೊ ಮತ್ತು ವೀಡಿಯೊ ಸಿಂಕ್ ಅನ್ನು ಒದಗಿಸುತ್ತವೆ. ಇನ್ನು ಬಳಕೆದಾರರು ಟಚ್ ಸೆನ್ಸಾರ್ ಮೂಲಕ ಸುಲಭವಾಗಿ ಕರೆಗಳು, ಮ್ಯೂಸಿಕ್ ಮೋಡ್ಗಳ ಸುಲಭ ನಿರ್ವಹಣೆಯನ್ನು ಸಪೋರ್ಟ್ ಮಾಡುತ್ತದೆ.
ಸೈಬರ್ಸ್ಟಡ್ X7 ಇಯರ್ಬಡ್ಸ್ ಡಿವೈಸ್ 70 ಗಂಟೆಗಳ ವರೆಗೆ ಪ್ಲೇ ಟೈಮ್ ಸಪೋರ್ಟ್ ಸಹ ಪಡೆದಿದ್ದು, ಇದು ಸ್ಪ್ಲಾಶ್ ಹಾಗೂ ಬೆವರು - ನಿರೋಧಕ ವಿನ್ಯಾಸವನ್ನು ಕೂಡಾ ಪಡೆದಿದೆ. ಅಲ್ಲದೇ ಗೂಗಲ್ ಹಾಗೂ ಸಿರಿ ವಾಯಿಸ್ ಅಸಿಸ್ಟಂಟ್ ಸಪೋರ್ಟ್ ಸಹ ಇದ್ದು, ಕೇಸ್ ಮೇಲೆ ಬ್ಯಾಟರಿ ಎಲ್ಇಡಿ ಲೈಟಿಂಗ್ ಸೌಲಭ್ಯ ಇದೆ.
ಸೈಬರ್ಸ್ಟಡ್ X7 ಇಯರ್ಬಡ್ಸ್ ಡಿವೈಸ್ 1,799ರೂ. ಪ್ರೈಸ್ಟ್ಯಾಗ್ನಲ್ಲಿ ಕಾಣಿಸಿಕೊಂಡಿದೆ. ಈ ಡಿವೈಸ್ ಅನ್ನು ಆಸಕ್ತ ಖರೀದಿದಾರರು ಸಂಸ್ಥೆಯ ಅಧಿಕೃತ nurepublic.co ವೆಬ್ಸೈಟ್, nurepublic.co ನಲ್ಲಿ ಖರೀದಿ ಮಾಡಬಹುದು.


Click it and Unblock the Notifications








