Home
ಸುದ್ದಿಜಾಲ

Nubia: ನುಬಿಯಾ ಫ್ಲಿಪ್ 5G ಸ್ಮಾರ್ಟ್‌ಫೋನ್‌ ಲಾಂಚ್‌! ಫೀಚರ್ಸ್ ಏನು? ಬೆಲೆ ಎಷ್ಟು?

ಈ ವರ್ಷದ ಆರಂಭದಲ್ಲಿ MWC 2024 ನಲ್ಲಿ ನುಬಿಯಾ ಫ್ಲಿಪ್ 5G ಸ್ಮಾರ್ಟ್‌ಫೋನ್‌ (Nubia Flip 5G smartphone) ಅನ್ನು ಘೋಷಣೆ ಮಾಡಲಾಗಿತ್ತು. ಇದಾದ ನಂತರದಲ್ಲಿ ಜಾಗತಿಕವಾಗಿ ಇದು ಯಾವಾಗ ಲಭ್ಯ ಆಗಲಿದೆ ಎಂದು ಸಾಕಷ್ಟು ಜನರು ಕುತೂಹಲದಿಂದ ಕಾದು ಕುಳಿತಿದ್ದರು. ಅದರಂತೆ ಕೊನೆಗೂ ಈ ಫೋನ್‌ ಅನ್ನು ಅನಾವರಣ ಮಾಡಲಾಗಿದೆ.

ಹೌದು, ನುಬಿಯಾ ಫ್ಲಿಪ್ 5G ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 7 ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಡ್ಯುಯಲ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇದರ ಜೊತೆಗೆ ಆಕರ್ಷಕ ಫೀಚರ್ಸ್‌ ಅನ್ನು ಕಾಣಬಹುದಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಏನು?, ಇದರ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನುಬಿಯಾ ಫ್ಲಿಪ್ 5G ಸ್ಮಾರ್ಟ್‌ಫೋನ್‌ ಲಾಂಚ್‌! ಫೀಚರ್ಸ್ ಏನು? ಬೆಲೆ ಎಷ್ಟು?

ನುಬಿಯಾ ಫ್ಲಿಪ್ 5G ಫೀಚರ್ಸ್‌: ಈ ಫ್ಲಿಪ್ 5G ಫೋನ್ 6.9 ಇಂಚಿನ ಫುಲ್‌ಹೆಚ್‌ಡಿ + (1,188 x 2,790 ಪಿಕ್ಸೆಲ್‌) OLED ಆಂತರಿಕ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ನ ರಿಫ್ರೆಶ್ ರೇಟ್‌ ಬೆಂಬಲ ಪಡೆದಿದೆ. ಹಾಗೆಯೇ 1.43 ಇಂಚಿನ OLED ಕವರ್ ಡಿಸ್‌ಪ್ಲೇಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದ್ದು, 466 x 466 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್‌ ಅನ್ನು ಕಾಣಬಹುದು.

ನುಬಿಯಾ ಫ್ಲಿಪ್ 5G ಪ್ರೊಸೆಸರ್‌ ಮಾಹಿತಿ: ಈ ಫೋನ್ ಸ್ನಾಪ್‌ಡ್ರಾಗನ್ 7 ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 12GB RAM ಮತ್ತು 512GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇದೆ. ಇದರೊಂದಿಗೆ ಈ ಫೋನ್‌ ವಿಶೇಷ ಹಿಂಜ್ ಆಯ್ಕೆ ನೀಡಲಾಗಿದ್ದು, 200,000 ಕ್ಕಿಂತ ಹೆಚ್ಚು ಭಾರಿ ಬಳಕೆ ಮಾಡಲು ಸಾಧ್ಯವಾಗುತ್ತದೆ.

ನುಬಿಯಾ ಫ್ಲಿಪ್ 5G ಸ್ಮಾರ್ಟ್‌ಫೋನ್‌ ಲಾಂಚ್‌! ಫೀಚರ್ಸ್ ಏನು? ಬೆಲೆ ಎಷ್ಟು?

ನುಬಿಯಾ ಫ್ಲಿಪ್ 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸರ್‌ ಅನ್ನು ಹೊಂದಿದೆ ಇದರ ಜೊತೆಗೆ ಈ ಫೋನ್ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಇನ್ನು ಈ ಸೆನ್ಸರ್‌ ಅನ್ನು ಆಂತರಿಕ ಡಿಸ್‌ಪ್ಲೇನ ಮೇಲ್ಭಾಗದಲ್ಲಿ ಹೋಲ್-ಪಂಚ್ ಸ್ಲಾಟ್‌ನಲ್ಲಿ ಇರಿಸಲಾಗಿದೆ.

ನುಬಿಯಾ ಫ್ಲಿಪ್ 5G ಬ್ಯಾಟರಿ ಹಾಗೂ ಇತರೆ: ಇನ್ನು ಈ ಫೋನ್ 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,310mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಇದು 5G, ವೈ ಫೈ, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್‌ ಮತ್ತು ಎನ್‌ಎಫ್‌ಸಿ ಸಂಪರ್ಕವನ್ನು ಬೆಂಬಲಿಸಲಿದ್ದು, ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ.

ನುಬಿಯಾ ಫ್ಲಿಪ್ 5G ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್‌ನ 8GB + 256GB ಆಯ್ಕೆಯು ಚೀನಾದಲ್ಲಿ CNY 2,999 (34,500 ರೂ.ಗಳು) ಹಾಗೂ 12GB + 256GB ಮತ್ತು 12GB + 512GB ವೇರಿಯಂಟ್‌ಗಳ ಬೆಲೆ ಕ್ರಮವಾಗಿ CNY 3,299 (38,000 ರೂ.ಗಳು) ಮತ್ತು CNY 3,699 (ಸುಮಾರು42,600 ರೂ.ಗಳು) ಬೆಲೆ ನಿಗದಿ ಮಾಡಲಾಗಿದೆ.

ನುಬಿಯಾ ಫ್ಲಿಪ್ 5G ಸ್ಮಾರ್ಟ್‌ಫೋನ್‌ ಲಾಂಚ್‌! ಫೀಚರ್ಸ್ ಏನು? ಬೆಲೆ ಎಷ್ಟು?

ಜಾಗತಿಕವಾಗಿ ಈ ಫೋನ್‌ 8GB + 256GB ಮತ್ತು 12GB + 512GB ವೇರಿಯಂಟ್‌ನಲ್ಲಿ ಲಭ್ಯ ಇರಲಿದ್ದು, ಕ್ರಮವಾಗಿ $499 (41,500 ರೂ.ಗಳು) ಮತ್ತು $699 (ಸುಮಾರು 58,200 ರೂ.ಗಳು) ಬೆಲೆ ನಿಗದಿ ಮಾಡಲಾಗಿದೆ. ಇದರೊಂದಿಗೆ ಪ್ರಸ್ತುತ ಚೀನಾದಲ್ಲಿ ಮತ್ತು ಜಾಗತಿಕವಾಗಿ ಮುಂಗಡ-ಕೋರಿಕೆಗೆ ಈ ಫೋನ್ ಲಭ್ಯವಿದೆ. ಇದು ಏಪ್ರಿಲ್ 23 ರಿಂದ ಸೇಲ್‌ ಆಗಲಿದೆ. ಇನ್ನು ಈ ಫೋನ್‌ ಅನ್ನು ಕಾಸ್ಮಿಕ್ ಬ್ಲ್ಯಾಕ್, ಫ್ಲೋಯಿಂಗ್ ಲಿಲಾಕ್ ಮತ್ತು ಸನ್ಶೈನ್ ಗೋಲ್ಡ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ನೋಡಬಹುದಾಗಿದೆ.

Best Mobiles in India

English summary
Nubia Flip 5G smartphone will be powered by a Snapdragon 7 Gen 1 processor and has a dual camera setup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+