ಭಾರತದಲ್ಲಿ ಬಿಡುಗಡೆಗೆ ಸಜ್ಜಾದ 'ರೆಡ್‌ ಮ್ಯಾಜಿಕ್‌ 3' ಗೇಮಿಂಗ್‌ ಫೋನ್‌!

|

ಸ್ಮಾರ್ಟ್‌ಫೋನ್‌ಗಳಲ್ಲಿ ಗೇಮ್ಸ್‌ ಆಡುವುದು ಬಹುತೇಕ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಖುಷಿ ಎನಿಸುತ್ತದೆ. ಅದಕ್ಕಾಗಿಯೇ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳಲ್ಲಿ ಚೀನಾ ಮೂಲದ ZTE ಕಂಪನಿಯ ಸಬ್‌ ಬ್ರ್ಯಾಂಡ್‌ ಆಗಿರುವ ನುಬಿಯಾ ಕಂಪನಿಯು ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿ. ಕಂಪನಿಯು ತನ್ನ ಜನಪ್ರಿಯ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಅನ್ನು ದೇಶಿಯ ಮಾರುಕಟ್ಟೆಗೆ ಲಾಂಚ್‌ ಮಾಡಲು ಸಜ್ಜಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ 'ರೆಡ್‌ ಮ್ಯಾಜಿಕ್‌ 3' ಗೇಮಿಂಗ್‌ ಫೋನ್‌!

ಹೌದು, ನೂಬಿಯಾ ಸಂಸ್ಥೆಯ 'ರೆಡ್ ಮ್ಯಾಜಿಕ್ 3' ಗೇಮಿಂಗ್‌ ಸ್ಮಾರ್ಟ್‌ಫೋನ್ ಇದೇ ಜೂನ್‌ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ದವಾಗಿದ್ದು, ಈ ಸ್ಮಾರ್ಟ್‌ಫೋನ್‌ ಈಗಾಗಲೇ ಚೀನಾದಲ್ಲಿ ಬಿಡುಗಡೆ ಆಗಿ ಜನಪ್ರಿಯತೆ ಪಡೆದಿದೆ. ವೇಗದ ಪ್ರೊಸೆಸರ್‌ ತಂತ್ರಜ್ಞಾನ್‌ ಹೊಂದಿದ್ದು, ಕೇವಲ 10 ನಿಮಿಷ ಫೋನ್‌ ಚಾರ್ಜ್‌ ಮಾಡಿದರೇ, ಗೇಮ್‌ ಆಡಲು ಸುಮಾರು ಒಂದು ಗಂಟೆ ಬ್ಯಾಟರಿ ಬೆಂಬಲ ಒದಗಿಸಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ 'ರೆಡ್‌ ಮ್ಯಾಜಿಕ್‌ 3' ಗೇಮಿಂಗ್‌ ಫೋನ್‌!

ಕಡಿಮೆ ಅಂಚಿನ ಡಿಸ್‌ಪ್ಲೇ ರಚನೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನಿನಲ್ಲಿ ಸ್ನ್ಯಾಪ್‌ಡ್ರಾಗನ್ 855 SoC ಪ್ರೊಸೆಸರ್ ಅನ್ನು ಒದಗಿಸಲಾಗಿದ್ದು, ಯಾವುದೇ ಅಡೆ ತಡೆ ಇಲ್ಲದೇ ಗೇಮ್‌ ಆಡಲು ಸಹಕರಿಸಲಿದೆ. ಹಾಗೆಯೇ ಗೇಮ್‌ ಆಡುವಾಗ ಫೋನ್ ಬಿಸಿ ಆಗುವುದನ್ನು ತಪ್ಪಿಸಲು ವಿಶೇಷ ಕೂಲಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ. ಹಾಗಾದರೇ ನುಬುಯಾ ರೆಡ್‌ ಮ್ಯಾಜಿಕ್ 3 ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ಗಳೆನು ಎಂಬುದನ್ನು ನೋಡೋಣ ಬನ್ನಿರಿ

ವಿನ್ಯಾಸ

ವಿನ್ಯಾಸ

ನುಬಿಯಾ 'ರೆಡ್ ಮ್ಯಾಜಿಕ್ 3' ಗೇಮಿಂಗ್ ಸ್ಮಾರ್ಟ್‌ಫೋನ್ ಇನ್ನೂವೇಟಿವ್‌ ಬಾಹ್ಯ ಡಿಸೈನ್‌ ರಚನೆ ಆಕರ್ಷಕವಾಗಿದ್ದು, ಹಿಂಬದಿಯಲ್ಲಿ ಸಿಂಗಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಕ್ಯಾಮೆರಾದೊಂದಿಗೆ ಫ್ಲ್ಯಾಶ್‌ ಲೈಟ್‌ ಸಹ ನೀಡಲಾಗಿದೆ. ಉಳಿದಂತೆ ಬಹುತೇಕ ಹಿಂಬದಿಯ ಡಿಸೈನ್‌ ಕಂಪನಿಯ ರೆಡ್‌ ಮಾರ್ಸ್‌ ಮ್ಯಾಜಿಕ್‌ ಫೋನಿನಂತೆ ಕಾಣಲಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಈ ಗೇಮಿಂಗ್‌ ಫೋನ್‌ 1080x2340 ಪಿಕ್ಸಲ್ ರೆಸಲ್ಯೂಶನ್ ಪಿಕ್ಸಲ್ ಸಾಮರ್ಥ್ಯದೊಂದಿಗೆ 6.65 ಇಂಚಿನ ಫುಲ್ ಹೆಚ್‌ಡಿ ಪ್ಲಸ್‌ HDR AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಮರ್ಥ್ಯವು 388PPI ಆಗಿದ್ದು, ಡಿಸ್‌ಪ್ಲೇಯ ಅನುಪಾತವು 19.5:9 ಆಗಿದೆ. ವಿಶಾಲ ಡಿಸ್‌ಪ್ಲೇಯು ಗೇಮಿಂಗ್ ಆಡಲು ರೋಮಾಂಚಕಾರಿ ಅನುಭವ ನೀಡಲಿದೆ.

ಪ್ರೊಸೆಸರ್

ಪ್ರೊಸೆಸರ್

ಅಧಿಕ ಡೇಟಾದ ಗೇಮ್ಸ್‌ಗಳು ಅತ್ಯುತ್ತಮ RAM ಸಾಮರ್ಥ್ಯ ಬೇಡುತ್ತವೆ. ಅದಕ್ಕಾಗಿ ಸ್ನ್ಯಾಪ್‌ಡ್ರಾಗನ್ 855 SoC ಸಾಮರ್ಥ್ಯದ ಪ್ರೊಸೆಸರ್ ಅನ್ನು ಒದಗಿಸಲಾಗಿದೆ. ಮೂರು ವೇರಿಯಂಟ್‌ ಮಾದರಿಯ ಆಯ್ಕೆಗಳನ್ನು ಹೊಂದಿದ್ದು, ಅದರಲ್ಲಿ ಹೈ ಎಂಡ್‌ ವೇರಿಯಂಟ್‌ ಫೋನ್‌ 12GB RAM ಮತ್ತು 256GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ

ಕ್ಯಾಮೆರಾ

ಈ ಗೇಮಿಂಗ್ ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಇದ್ದು, ಅಪರ್ಚರ್‌ f/1.7 ಆಗಿದೆ. ಮುಂಬದಿಯಲ್ಲಿ ಸೆಲ್ಫಿಗಾಗಿ 16 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಒದಗಿಸಲಾಗಿದ್ದು, ಎಲ್‌ಇಡಿ ಫ್ಲ್ಯಾಶ್‌ ಲೈಟ್‌ ಸಹ ನೀಡಲಾಗಲಿದೆ. ಗೇಮಿಂಗ್‌ ಫೋನ್‌ ಆದರೂ ಅತ್ಯುತ್ತಮ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ

ಬ್ಯಾಟರಿ

ನುಮಿಯಾದ ಈ ಗೇಮಿಂಗ್‌ ಫೋನ್‌ ಬ್ಯಾಟರಿ ಲೈಫ್ 5,000mAh ಸಾಮರ್ಥ್ಯದಲ್ಲಿದ್ದು, ಚಾರ್ಜರ್‌ 30W ಶಕ್ತಿ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದಿದೆ. ಹೀಗಾಗಿ ಬಹುಬೇಗನೆ ಸ್ಮಾರ್ಟ್‌ಫೋನ್‌ ಚಾರ್ಜ್‌ ಪಡೆದುಕೊಳ್ಳುತ್ತದೆ. ಕೇವಲ 10 ನಿಮಿಷ ಫೋನ್‌ ಚಾರ್ಜ್‌ ಮಾಡಿದರೇ, ಗೇಮ್‌ ಆಡಲು ಸುಮಾರು ಒಂದು ಗಂಟೆ ಬ್ಯಾಟರಿ ಬೆಂಬಲ ಒದಗಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇದೇ ಜೂನ್‌ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಒಟ್ಟು ಮೂರು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, 6GB + 128GB ವೇರಿಯಂಟ್‌ ಬೆಲೆಯು 33,200ರೂ.ಗಳು, 8GB + 128GB ವೇರಿಯಂಟ್‌ ಬೆಲೆಯು 36,300ರೂ ಮತ್ತು 12GB + 256GB ವೇರಿಯಂಟ್‌ ಬೆಲೆಯು 44,600ರೂ.ಗಳು ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Nubia Red Magic 3 Gaming Phone Launching in India in Mid-June, Company Says.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X