Home
ಸುದ್ದಿಜಾಲ

ಭಾರತಕ್ಕೆ ದೈತ್ಯ ಗೇಮಿಂಗ್ ಫೋನ್ 'ನುಬಿಯಾ ರೆಡ್ ಮ್ಯಾಜಿಕ್ 3S' ಎಂಟ್ರಿ!

ಪ್ರಸ್ತುತ ಮಾರುಕಟ್ಟೆಗೆ ಅನೇಕ ಹೊಸ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೇ ಇವೆ. ಆದರೆ ಕೆಲವು ಸ್ಮಾರ್ಟ್‌ಫೋನ್‌ಗಳು ವಿಶೇಷ ಫೀಚರ್ಸ್‌ಗಳಿಂದ ಗುರುತಿಸಿಕೊಳ್ಳುತ್ತವೆ. ಆ ಪೈಕಿ ಗೇಮಿಂಗ್ ಸ್ಮಾರ್ಟ್‌ಫೋನ್‌ ತಯಾರಿಕೆಯಿಂದ ಜನಪ್ರಿಯವಾಗಿರುವ ಚೀನಾ ಮೂಲದ 'ನುಬಿಯಾ' ಸಂಸ್ಥೆಯು ಇದೀಗ ಭಾರತೀಯ ಮಾರುಕಟ್ಟೆಗೆ 'ರೆಡ್‌ ಮ್ಯಾಜಿಕ್ 3S' ದೈತ್ಯ ಗೇಮಿಂಗ್ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ನುಬಿಯಾ ರೆಡ್ ಮ್ಯಾಜಿಕ್

ಹೌದು, ಚೀನಾದ ನುಬಿಯಾ ಸಂಸ್ಥೆಯು 'ನುಬಿಯಾ ರೆಡ್ ಮ್ಯಾಜಿಕ್ 3S' ಸ್ಮಾರ್ಟ್‌ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಈ ಗೇಮಿಂಗ್ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ, ಸ್ನ್ಯಾಪಡ್ರಾಗನ್ 855 ಪ್ಲಸ್‌ ಪ್ರೊಸೆಸರ್ ಮತ್ತು 8GB RAM ಹಾಗೂ 12GB RAM ಫೀಚರ್ಸ್‌ಗಳನ್ನು ತುಂಬಿಕೊಂಡಿದೆ. ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಇದೇ ಅಕ್ಟೋಬರ್ 21ರಿಂದ ಮೊದಲ ಸೇಲ್ ಆರಂಭಿಸಲಿದೆ. ಹಾಗಾದರೇ 'ನುಬಿಯಾ ರೆಡ್ ಮ್ಯಾಜಿಕ್ 3S' ಗೇಮಿಂಗ್ ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹೈ ರೆಸಲ್ಯೂಶನ್ ಡಿಸ್‌ಪ್ಲೇ

ಹೈ ರೆಸಲ್ಯೂಶನ್ ಡಿಸ್‌ಪ್ಲೇ

ನುಬಿಯಾ ರೆಡ್ ಮ್ಯಾಜಿಕ್ 3S' ಗೇಮಿಂಗ್ ಸ್ಮಾರ್ಟ್‌ಫೋನ್‌ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.65 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.5:9 ಆಗಿದೆ. ಹಾಗೆಯೇ ಈ ಗೇಮಿಂಗ್ ಫೋನಿನ ಡಿಸ್‌ಪ್ಲೇ ರೀಫ್ರೆಶ್‌ ರೇಟ್‌ 90Hz ಸಾಮರ್ಥ್ಯದಲ್ಲಿದ್ದು, ಸ್ಕ್ರೀನ್‌ ಪ್ರಖರತೆಯ ಸಾಮರ್ಥ್ಯವು ಅಧಿಕವಾಗಿದೆ.

ವೇಗದ ಪ್ರೊಸೆಸರ್

ವೇಗದ ಪ್ರೊಸೆಸರ್

ನುಬಿಯಾ ರೆಡ್ ಮ್ಯಾಜಿಕ್ 3S' ಗೇಮಿಂಗ್ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪಡ್ರಾಗನ್ 855 ಪ್ಲಸ್‌ ಪ್ರೊಸೆಸರ್ ಅನ್ನು ಹೊಂದಿದ್ದು, ಇದರೊಂದಿಗೆ ಆಂಡ್ರಾಯ್ಡ 9 ಪೈ ಓಎಸ್‌ ಸಪೋರ್ಟ್ ಸಹ ಪಡೆದಿದೆ. ಈ ಪ್ರೊಸೆಸರ್ ಗೇಮಿಂಗ್‌ಗೆ ಅತ್ಯುತ್ತಮ ವೇಗ ನೀಡಲಿದ್ದು, ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಅವುಗಳು ಕ್ರಮವಾಗಿ 8GB RAM + 128GB ಮತ್ತು 12GB RAM + 256GB ಆಗಿವೆ.

48ಎಂಪಿ ಕ್ಯಾಮೆರಾ

48ಎಂಪಿ ಕ್ಯಾಮೆರಾ

ನುಬಿಯಾ ಸಂಸ್ಥೆ 'ರೆಡ್ ಮ್ಯಾಜಿಕ್ 3S' ಗೇಮಿಂಗ್ ಸ್ಮಾರ್ಟ್‌ಫೋನಿನಲ್ಲಿ ಕ್ಯಾಮೆರಾ ಫೀಚರ್‌ಗೂ ಅಧಿಕ ಮಹತ್ವ ನೀಡಿದ್ದು, ಹಿಂಬದಿಯಲ್ಲಿ f/1.79 ಅಪರ್ಚರ್‌ ಸಾಮರ್ಥ್ಯದಲ್ಲಿ 48ಎಂಪಿ ಸೆನ್ಸಾರ್‌ ಸಿಂಗಲ್ ರಿಯರ್ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಸೆಲ್ಫಿಗಾಗಿ 16ಎಂಪಿ ಸಾಮರ್ಥ್ಯದ ಸೋನಿ ಸೆನ್ಸಾರ್‌ ಕ್ಯಾಮೆರಾ ಒದಗಿಸಲಾಗಿದ್ದು, ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್‌ ಪಡೆದುಕೊಂಡಿದೆ.

ಪವರ್‌ಫುಲ್ ಬ್ಯಾಟರಿ

ಪವರ್‌ಫುಲ್ ಬ್ಯಾಟರಿ

ನುಬಿಯಾ ರೆಡ್ ಮ್ಯಾಜಿಕ್ 3S' ಗೇಮಿಂಗ್ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಪವರ್‌ಫುಲ್‌ ಬ್ಯಾಟರಿ ನೀಡಲಾಗಿದ್ದು, ಇದರೊಂದಿಗೆ 27W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಒಮ್ಮೆ ಪೂರ್ಣ ಬ್ಯಾಟರಿ ಚಾರ್ಜ್ ಮಾಡಿದರೇ ಸುಮಾರು 6ಗಂಟೆಗಳ ನಿರಂತರ ಗೇಮ್ಸ್‌ ಪ್ಲೇ ಬ್ಯಾಕ್‌ಅಪ್‌ ನೀಡಲಿದೆ. ಇದರೊಂದಿಗೆ DTS:X ಆಡಿಯೊ ಬೆಂಬಲ, ಲಿಕ್ವಿಡ್‌ ಕೂಲಿಂಗ್, ಗೇಮ್‌ ಬೂಸ್ಟ್ ಬಟನ್ ಸೌಲಭ್ಯಗಳನ್ನು ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನುಬಿಯಾ ರೆಡ್ ಮ್ಯಾಜಿಕ್ 3S' ಗೇಮಿಂಗ್ ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗಿದೆ. 8GB RAM + 128GB ವೇರಿಯಂಟ್ ಬೆಲೆಯು 35,999ರೂ ಆಗಿದ್ದು, ಸ್ಪೆಸ್‌ ಗ್ರೇ ಬಣ್ಣದ ಆಯ್ಕೆಯಲ್ಲಿ ಸಿಗಲಿದೆ. ಮತ್ತು 12GB RAM + 256GB ವೇರಿಯಂಟ್ ಬೆಲೆಯು 47,999ರೂ.ಗಳಾಗಿದ್ದು, ರೆಡ್‌ ಮತ್ತು ಬ್ಲೂ ಕಲರ್ ಆಯ್ಕೆಯಲ್ಲಿ ದೊರೆಯಲಿದೆ. ಇದೇ ಅಕ್ಟೋಬರ್ 21ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮೊದಲ ಸೇಲ್ ಶುರುವಾಗಲಿದೆ.

Best Mobiles in India

English summary
The Nubia Red Magic 3S price in India starts at Rs. 35,999 for its 8GB RAM + 128GB storage variant. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+